ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

42 ಸಾವಿರ ಉದ್ಯೋಗಿಗಳಿಗೆ ಗೇಟ್‌ ಪಾಸ್ ಕೊಟ್ಟ ರಿಲಯನ್ಸ್ ಇಂಡಸ್ಟ್ರೀಸ್​ – ಅಂಬಾನಿ ಕಂಪೆನಿಯಲ್ಲಿ ಏನಾಗ್ತಿದೆ?

On: August 11, 2024 5:51 PM
Follow Us:
---Advertisement---

ಮುಂಬೈ: ಏ‍ಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ಕಂಪನಿ ರಿಲಯನ್ಸ್ ಇಂಡಸ್ಟ್ರಿ ಸಹ ಒಂದು ವರ್ಷದಲ್ಲಿ 42 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಮೂಲಕ ಕಂಪನಿ ತನ್ನ ವೆಚ್ಚವನ್ನು ಕಡಿತಗೊಳಿಸಿದೆ.

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹಿಂದಿನ ಆರ್ಥಿಕ ವರ್ಷದಲ್ಲಿ 42 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ತನ್ನ ವಾರ್ಷಿಕ ಜನರಲ್ ರಿಪೋರ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಈ ರಿಪೋರ್ಟ್ ಪ್ರಕಾರ, ಆರ್ಥಿಕ ವರ್ಷ 2023ರ ವೇಳೆ ಕಂಪನಿಯಲ್ಲಿ 3,89,000 ಉದ್ಯೋಗಿಗಳಿದ್ದರು. 2024ರಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.11ರಷ್ಟು ಕಡಿತಗೊಂಡಿದ್ದು, ಸದ್ಯ 3,47,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ 42 ಸಾವಿರ ಉದ್ಯೋಗಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಡಿತಗೊಳಿಸಿದೆ. ರಿಲಯನ್ಸ್ ರಿಟೇಲ್‌ನಲ್ಲಿ ಹೆಚ್ಚು ಜಾಬ್ ಕಡಿತಗೊಂಡಿವೆ. ಕಂಪೆನಿಯ ವಾರ್ಷಿಕ ವರದಿಯ ಪ್ರಕಾರ, 2023-24 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಉದ್ಯೋಗಿಗಳ ಸಂಖ್ಯೆ 3,47,362 ಆಗಿದೆ. ಈ ಮೊದಲು ಈ ಸಂಖ್ಯೆ 3,89,414 ಆಗಿತ್ತು. ರಿಟೇಲ್ ಉದ್ಯಮದಲ್ಲಿ ಹೆಚ್ಚಿನ ಉದ್ಯೋಗ ವಹಿವಾಟು ನಡೆಯಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.

ಗುತ್ತಿಗೆ, ಪಾರ್ಟ್‌ಟೈಮರ್‌ಗಳು, ಅಪ್ರೆಂಟಿಸ್‌ಗಳು ಮತ್ತು ಇಂಟರ್ನ್‌ಗಳು ಸೇರಿದಂತೆ ಜಿಯೋದಲ್ಲಿ ಶೇಕಡಾ 43 ಕ್ಕಿಂತ ಹೆಚ್ಚು ನಿಯಮಿತವಲ್ಲದ ಉದ್ಯೋಗಿಗಳು ಇದ್ದಾರೆ ಎಂದು ತಿಳಿದುಬಂದಿದೆ. ರಿಲಯನ್ಸ್ ಕಮಿಷನ್ ಆಧಾರಿತ ಉದ್ಯೋಗಿಗಳನ್ನು ಕಡಿತಗೊಳಿಸಿದೆ ಮತ್ತು ಕ್ಷೇತ್ರ ಉದ್ಯೋಗಗಳತ್ತ ಗಮನ ಹರಿಸುತ್ತಿದೆ ಎಂದು ವಿವರಿಸಿದೆ.

Join WhatsApp

Join Now

Join Telegram

Join Now

Leave a Comment