Home ದಾವಣಗೆರೆ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಕಡೇ ಕಾರ್ತಿಕೊತ್ಸವದ ಸ್ಪೆಷಾಲಿಟಿ ಏನು ಗೊತ್ತಾ?
ದಾವಣಗೆರೆಬೆಂಗಳೂರು

ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಕಡೇ ಕಾರ್ತಿಕೊತ್ಸವದ ಸ್ಪೆಷಾಲಿಟಿ ಏನು ಗೊತ್ತಾ?

Share
Share

ದಾವಣಗೆರೆ: ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕಡೇ ಕಾರ್ತಿಕೊತ್ಸವವು ಡಿ.2 ರಂದು ಜರುಗಲಿದೆ.

ಅಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ, ಆದಿ ದೈವ ಕನೇಶ್ವರ ಸ್ವಾಮಿ ಜಗದ್ಗುರು ರೇಣುಕಾಚಾರ್ಯಾ (ವಿಷಮರ್ದನ ಸಂಜೀವಿನಿ ಗದ್ದಿಗೆ )ಗಳಿಗೆ ರುದ್ರಾಭಿಷೇಕಾ ಮಹಾಪೂಜೆ ಹಾಗೂ ಗ್ರಾಮದಲ್ಲಿ ಎಲ್ಲ ದೇವರುಗಳಿಗೂ ಪೂಜೆ ನಡೆಸಿ, ನಂತರ ದೊಡ್ಡಬಾತಿಯಿಂದ ಆಗಮಿಸುವ ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ ದೇವರುಗಳನ್ನು ಶ್ರೀ ವೀರಭದ್ರೇಶ್ವರ ಸ್ವಾಮಿಯೊಂದಿಗೆ ಬಾಜಾ, ಭಜಂತ್ರಿ, ಡೊಳ್ಳು, ಸಮಾಳದೊಂದಿಗೆ ವೈಭವದಿಂದ ಎದುರುಗೊಂಡು ದೇವಸ್ಥಾನಕ್ಕೆ ಕರೆತಂದು ಧಾರ್ಮಿಕಕಾರ್ಯಗಳಿಗೆ ಚಾಲನೆ ನೀಡುವುದು.

ನಂತರ ರಾತ್ರಿ ಸ್ವಾಮಿಯ ಇಚ್ಛಿತ ಮೂಹೂರ್ತ ಶ್ರೀ ವೀರಭದ್ರೇಶ್ವರ, ಶ್ರೀ ರೇವಣಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ಪಾಲಿಕೆ ಉತ್ಸವವು ದೇವಸ್ಥಾನದಿಂದ ನಂದಿ ಜನಪ್ಪನ ಕಟ್ಟೆಯವರಿಗೂ ಕಳಸ, ಡೊಳ್ಳು, ಸಮಾಳ ವಾದ್ಯಗಳು ಮೇಳದೊಂದಿಗೆ ಸಾಗಿ ಅಲ್ಲಿ ಕಡೇ ಕಾರ್ತಿಕೊತ್ಸವ ಸಮಾರೋಪವು ಕದಳಿ ಮಂಟಪ ಪೂಜೆ ನಡೆದು ಭಕ್ತರಿಗೆ ಪಳಾರದ ಪ್ರಸಾದ ಹಂಚಲಾಗುತ್ತದೆ. ಬುಧವಾರ ಬೆಳಗ್ಗೆ ಬೇಡಿಕೊಂಡ ಭಕ್ತರ ಗುಗ್ಗಳ ಸೇವೆಯೊಂದಿಗೆ ಅಲ್ಲಿಂದ ಹೊರಟು ದೇವಸ್ಥಾನಕ್ಕೆ ಆಗಮಿಸಿ ಕಾರ್ಯಕ್ರಮ ಸಂಪನ್ನಗೊಳುವುದೆಂದು ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಿ. ಎಂ ಷಣ್ಮುಖಯ್ಯ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles