(NSP) ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನ ಪ್ರಾರಂಭಿಸಿದ್ದು, (National Scholarship Portal) ಈ ಯೋಜನೆಯಡಿ ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು. ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಯುಸಿ ಪಾಸ್ ಆದ ಹಾಗೂ ಪದವಿ ವಿದ್ಯಾರ್ಥಿಗಳಿಗೆ 3 ವರ್ಷಗಳ ಕಾಲ ಸ್ಕಾಲರ್ಶಿಪ್ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
- ವಿದ್ಯಾರ್ಥಿ 2024ನೇ ಸಾಲಿನಲ್ಲಿ ಪಿಯುಸಿ ಪಾಸ್ ಆಗಿರಬೇಕು.
- ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 80% ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
- 3 ವರ್ಷಗಳ ಡಿಗ್ರಿ ಕೋರ್ಸ್ಗೆ ದಾಖಲಾಗಿರಬೇಕು.
- ಈ ಯೋಜನೆಯಲ್ಲಿ ಎಷ್ಟು ಸ್ಕಾಲರ್ ಶಿಪ್ ಲಭ್ಯ:
- ಮೊದಲ ವರ್ಷದ ಪದವಿಗೆ: 12,000
- 2ನೇ ಮತ್ತು 3ನೇ ವರ್ಷದ ಪದವಿಗೆ: 20,000
- ಅರ್ಜಿ ಸಲ್ಲಿಸಲು ದಾಖಲೆಗಳು ಯಾವುದು?;
- ಆಧಾರ್ ಕಾರ್ಡ್
- ಫೋನ್ ನಂಬರ್
- 10ನೇ ಹಾಗೂ 12ನೇ ತರಗತಿಯಲ್ಲಿ ಪಾಸ್ ಆದ ಮಾರ್ಕ್ಸ್ ಕಾರ್ಡ್
- ಪದವಿ ದಾಖಲೆ ಪ್ರಮಾಣ ಪತ್ರ
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:
ಅಕ್ಟೋಬರ್ 30, 2024 - ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು https://scholarships.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-23311330 ಈ ನಂಬರ್ ಗೆ ಕರೆ ಮಾಡಬಹುದು.