(Gruha-jyothi:) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ಹಲವು ಜನ ಲಾಭ ಪಡೆಯುತ್ತಿದ್ದಾರೆ. ಆದರೆ, ಕೆಲವರು ಬಾಡಿಗೆ ಮನೆಯಲ್ಲಿ ಇದ್ದು, ಮನೆ ಬದಲಾಯಿಸಿದ ಅವರು ಮುಂದೆ ಹೇಗೆ ಗೃಹ ಜ್ಯೋತಿಯ ಲಾಭ ಪಡೆಯುವುದು ಎಂಬ ಯೋಜನೆಯಲ್ಲಿ ಇದ್ದವರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.
ಹೌದು, ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಈಗ ರಾಜ್ಯದ ಜನರಿಗೆ ಲಭ್ಯವಾಗಲಿದ್ದು,ಇಂಧನ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.
ಬಾಡಿಗೆ ಮನೆ ಅಥವಾ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ- ಲಿಂಕ್ ಮಾಡಿ, ಮತ್ತೊಂದು ಮನೆಯ RR ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ.

ಹಾಗಾದರೆ ಡಿ-ಲಿಂಕ್ ಮಾಡುವುದು ಹೇಗೆ?;
D-LINK ಮಾಡಲು ಬಯಸುವವರು https://sevasindhu.karnataka.gov.in/GruhaJyothi_Delink/GetAadhaarData.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ ಡಿ-ಲಿಂಕ್ ಮಾಡಬಹುದಾಗಿದೆ.