ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: 11 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ, 108 ಮುತ್ತೈದೆಯರಿಗೆ ಮಡಲಕ್ಕಿ ನೀಡಿಕೆ ಕಾರ್ಯಕ್ರಮದ ಸ್ಪೆಷಾಲಿಟಿ ಏನು…?

On: July 19, 2023 4:44 PM
Follow Us:
Parayana
---Advertisement---

SUDDIKSHANA KANNADA NEWS/ DAVANAGERE/ DATE:19-07-2023

ದಾವಣಗೆರೆ (Davanagere): ಶ್ರಾವಣ ಮಾಸ ಬಂದಿದೆ. ಎಲ್ಲೆಡೆ ಪೂಜೆ, ಪುನಸ್ಕಾರ ಜೋರಾಗಿ ನಡೆಯುತ್ತಿದೆ. ಇನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಸ್ಪೆಷಲ್ ಆಗಿ ಆಚರಣೆ ಮಾಡಲಾಗುತ್ತದೆ.

ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ವಿಶೇಷವಾಗಿ ಆಚರಿಸಲಾಯಿತು. ಶ್ರೀ ವಾಗ್ದೇವಿ ಭಜನಾ ಮಂಡಳಿ ಸದಸ್ಯೆಯರು ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಇದು ಎಲ್ಲರ ಗಮನ ಸೆಳೆಯುವಂತಿದೆ.

108 ಸದಸ್ಯೆಯರಿಗೆ ಮಡಲಕ್ಕಿ:

ದಾವಣಗೆರೆಯ ಪಿ. ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಶ್ರಾವಣ ಮಾಸ ಪ್ರಯುಕ್ತ ಹನ್ನೊಂದು ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ 108 ಸದಸ್ಯೆಯರಿಗೆ ಮಡಲಕ್ಕಿ ನೀಡಿ ಆಚರಿಸಲಾಯಿತು.

ಅನ್ನಸಂತರ್ಪಣೆ:

ಬೆಳಿಗ್ಗೆ 8 ಗಂಟೆಗೆ ಶುರುವಾದ ವಿಷ್ಣುಸಹಸ್ರನಾಮ ಪಾರಾಯಣದಲ್ಲಿ 11 ತಂಡಗಳು ಭಾಗವಹಿಸಿದ್ದವು. ಪಾರಾಯಣ ನಂತರ ಶ್ರೀಮನ್ನಾರಾಯಣ, ಆಂಜನೇಯ, ಶ್ರೀ ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ಮಹಾಮಂಗಳಾರತಿ, ನೆರೆದಿದ್ದವರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಮೊದಲಿಗೆ ಮಡಲಕ್ಕಿ ತುಂಬಿದ್ದು ಯಾರು…?

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ನಳಿನಿ ಅಚ್ಯುತ್ ಹಾಗೂ ಪ್ರಭಾ ರವೀಂದ್ರ ಅವರು ಮೊದಲಿಗೆ ಚೌಡೇಶ್ವರಿ ದೇವಿಗೆ ಮಡಲಕ್ಕಿ ತುಂಬಿದರು. ನಂತರ 108 ಮುತ್ತೈದೆಯರಿಗೆ ಶಾಸ್ತ್ರೋಕ್ತವಾಗಿ ಮಡಲಕ್ಕಿ ತುಂಬಿಸಲಾಯಿತು. ಇದೇ ವೇಳೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ದೇವಸ್ಥಾನ ಧರ್ಮದರ್ಶಿ ಮಂಡಳಿಯವರಿಗೆ ಭಜನಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಾರಾಯಣ, ಭಜನೆ ಖುಷಿಕೊಟ್ಟಿದೆ:

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಜೆ.ಕೆ. ಕೊಟ್ರಬಸಪ್ಪ, ಬಿಜಾಪುರದ ಸಿದ್ದೇಶ್ವರ ಸ್ವಾಮಿಗಳು ಉಪನ್ಯಾಸ ನೀಡಲು ದಾವಣಗೆರೆಗೆ ಆಗಮಿಸಿದಾಗ ಬರುತ್ತಿದ್ದ ಜನಸ್ತೋಮದಂತೆ ಇಲ್ಲಿ ಪ್ರತಿನಿತ್ಯ ಭಜನಾ ಮಂಡಳಿಯ ಸದಸ್ಯರು ಸೇರಿಕೊಂಡು ಪಾರಾಯಣ, ಭಜನೆ ಮಾಡುತ್ತಿದ್ದೀರಿ. ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಪಸರಿಸುತ್ತಿರುವ ನಿಮ್ಮ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: 

Basavaraj Bommai: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಪಡೆ ರೋಷಾಗ್ನಿ ಸ್ಫೋಟ: ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಬೊಮ್ಮಾಯಿ

ಕಾರಿಗನೂರು ತಿಪ್ಪಣ್ಣ ಮಾತನಾಡಿ, ಸೇವೆಯ ಮೂಲಕ ದೇವರನ್ನು ಕಾಣುತ್ತಿರುವ ನಿಮಗೆ ನಾವು ಸಹಕಾರ ನೀಡಲಿದ್ದೇವೆ ಎಂದರು. ದೇವಸ್ಥಾನ ಮಂಡಳಿಯ ಸಂಗಪ್ಪ, ಹನುಮಂತಪ್ಪ, ಪರಮೇಶ್ವರಪ್ಪ, ಗುತ್ಯಪ್ಪ ಅವರನ್ನೂ ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ರಾಜು ಬನ್ನಿಕಟ್ಟಿ ಉಪಸ್ಥಿತರಿದ್ದರು.

ಈ ಎಲ್ಲಾ ಕಾರ್ಯಕ್ರಮಗಳನ್ನು ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷೆ ಕನ್ಯಾಕುಮಾರಿ, ಕಾರ್ಯದರ್ಶಿ ಸ್ವರ್ಣಲತಾ ಹಾಗೂ ಖಜಾಂಚಿ ಆರ್.ಡಿ. ಗೀತಾ ಅವರ ನೇತೃತ್ವದಲ್ಲಿ ಎಲ್ಲಾ ಸದಸ್ಯೆಯರು ಕೂಡಿ ನಡೆಸಿಕೊಟ್ಟರು.

Davanagere, Davanagere News, Davanagere News Updates, Davanagere Spl News

Davanagere Suddi, Davanagere Update, Davanagere News Updates

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment