ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಯನಾಡು ಗುಡ್ಡ ಕುಸಿತ ದುರಂತ : ಸಾವನ್ನಪ್ಪಿದವರ ಸಂಖ್ಯೆ 400 ಕ್ಕೆ ಏರಿಕೆ; 206ಕ್ಕೂ ಹೆಚ್ಚು ಜನ ನಾಪತ್ತೆ

On: August 5, 2024 2:36 PM
Follow Us:
---Advertisement---

ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರನಾಪತ್ತೆಯಾಗಿರುವವರುಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 400 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ.

ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿ, ಅಲ್ಲಿ ತಲುಪಿರೋದಾಗಿ ತಿಳಿದು ಬಂದಿದೆ.

ಕೇರಳದ ವಯನಾಡು ಭೂಕುಸಿತ ದುರಂತವು ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಇದರ ನಡುವೆ ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.  6 ದಿನಗಳಿಂದ ತನ್ನ ಮಾಲೀಕನಿಗಾಗಿ ಹುಡುಕಾಡಿದಂತ ನಾಯಿಯೊಂದಕ್ಕೆ ಒಡತಿಯೊಬ್ಬರು ದೊರೆತಿದ್ದು ಕಂಡು, ಸಂತಸಗೊಂಡಿರುವಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ.

ವಯನಾಡು ಭೂಕುಸಿತ ಘಟನೆಯಿಂದಾಗಿ 1,208 ಮನೆಗಳು ಹಾನಿಗೊಂಡಿದ್ದರೇ, ಮುಂಡಕ್ಕೈನಲ್ಲಿ 540, ಚೋರ ಮಂಡಲಾದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮಗೊಂಡಿರುವುದಾಗಿ ವರದಿಯಾಗಿದೆ.

ಹಿಂದೆಂದೂ ಕಂಡು ಕೇಳರಿಯದಂತ ವಯನಾಡು ಭೂ ಕುಸಿತದಿಂದಾಗಿ ಈವರೆಗೆ 3,700 ಎಕರೆ ಕೃಷಿಭೂಮಿ ನಾಶವಾಗಿದೆ. 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿ ಹೋಗಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

india

ಕ್ಷಣಕ್ಷಣಕ್ಕೂ ರೋಚಕದಾಟ.. ವಿಜಯಮಾಲೆ ಹಾವು ಏಣಿ ಆಟ: ಇಂಗ್ಲೆಂಡ್ ವಿರುದ್ದ ಭಾರತಕ್ಕೆ 6 ರನ್ ರೋಚಕ ಜಯ!

D. K. Shivakumar

ಸೋನಿಯಾ ಗಾಂಧಿಯರದ್ದು ಸಾಟಿಯಿಲ್ಲದ ರಾಜಕೀಯ ತ್ಯಾಗ: ಡಿ. ಕೆ. ಶಿವಕುಮಾರ್ ಸ್ಫೋಟಕ ಮಾತು… ಮುಖ್ಯಮಂತ್ರಿ ಪಟ್ಟದ ಮೇಲಿನ ಕಣ್ಣು!

H. C. Mahadevappa

ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮದಲ್ಲೇ ಅಪಮಾನ: ಇತಿಹಾಸ ತಿರುಚುವ ಕೆಲಸ ನಿಲ್ಲಿಸಿ ಹೆಚ್. ಸಿ. ಮಹಾದೇವಪ್ಪ!

Pahalgam

ವೋಟರ್ ಐಡಿ, ಕ್ಯಾಂಡಿಲ್ಯಾಂಡ್ ಚಾಕೊಲೇಟ್‌ಗಳು, ಜಿಪಿಎಸ್: ಪಹಲ್ಗಾಮ್ ದಾಳಿ ಉಗ್ರರು ಪಾಕಿಸ್ತಾನದವರೆಂದು ಸಾಬೀತು!

RAHUL GANDHI

ಭಾರತ – ಚೀನಾ ಗಡಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ತಡೆ!

ಕನ್ನಂಬಾಡಿ

ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದು ಟಿಪ್ಪು: “ಹೆಚ್. ಸಿ. ಮಹಾದೇವಪ್ಪನವರೇ ರಾಜಮನೆತನದ ಕೊಡುಗೆ ಗೌರವಿಸಿ, ಇಲ್ಲದಿದ್ದರೆ ತೆಪ್ಪಗಿರಿ!”

Leave a Comment