ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸೌತೆಕಾಯಿ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ : ಒಮ್ಮೆ ಟ್ರೈ ಮಾಡಿ ನೋಡಿ

On: August 3, 2024 10:23 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:03-08-2024

ಹಸಿ ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದರಲ್ಲಿ ನೀರಿನಂಶ ಹೇರಳವಾಗಿದ್ದು, ಅದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸೌತೆಕಾಯಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೂ ಬಳಸಬಹುದು. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ಕೂದಲಿಗೆ ಹಲವು ರೀತಿಯಲ್ಲಿ ಬಳಸಬಹುದು. ಸೌತೆಕಾಯಿಯನ್ನು ಕೂದಲಿಗೆ ಹೇಗೆ ಬಳಸಬೇಕು ಎಂಬುದರ ತಿಳಿಕೊಳ್ಳಿ.

ಸೌತೆಕಾಯಿಯನ್ನು ಕೂದಲಿಗೆ ಈ ರೀತಿ ಬಳಸಬಹುದು

ಸೌತೆಕಾಯಿ ರಸದಿಂದ ಮಸಾಜ್ ಮಾಡಬೇಕು
ಕೂದಲಿನ ಬೆಳವಣಿಗೆ ಮತ್ತು ಹೊಳಪಿಗೆ ಸೌತೆಕಾಯಿ ರಸ ವನ್ನು ಬಳಸಬೇಕು. ಇದು ನಿಮ್ಮ ಕೂದಲಿಗೆ ಅತ್ಯಂತ ಪರಿಣಾಮಕಾರಿ ಪಾಕವಿಧಾನ ಎಂದು ಸಾಬೀತುಪಡಿಸಬಹುದು. ಇದನ್ನು ಬಳಸಲು ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಒಂದರಿಂದ 2 ಸೌತೆಕಾಯಿಗಳನ್ನು ತೆಗೆದುಕೊಳ್ಳಬೇಕು. ಇದನ್ನು ಮಿಕ್ಸರ್​ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಸೌತೆಕಾಯಿ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿ ನಂತರ ಕೂದಲಿನ ಬುಡಕ್ಕೆ ಅನ್ವಹಿಸಬೇಕು. ಇದಾದ ನಂತರ ಸ್ವಲ್ವ ಸಮಯದವರೆಗೆ ಮಸಾಜ್​ ಮಾಡಿ ನಂತರ ನೀರಿನಿಂದ ತೊಳೆಯಬೇಕು. ಕೂದಲನ್ನು ತೊಳೆಯುವಾಗ ಶಾಂಪೂ ಬಳಸದಂತೆ ನೋಡಿಕೊಳ್ಳಿ.

ಕೂದಲಿಗೆ ಸೌತೆಕಾಯಿ ರಸ ಮತ್ತು ನಿಂಬೆ ಹಚ್ಚಬೇಕು
ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಬಳಸುವುದರಿಂದ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಬಹುದು. ಕೂದಲಿಗೆ ಇದನ್ನು ಬಳಸಲು ಸ್ವಲ್ಪ ಪ್ರಮಾಣದ ಸೌತೆಕಾಯಿ ರಸವನ್ನು ತೆಗೆದುಕೊಳ್ಳಿ. ಇದರ ನಂತರ ಅದರಲ್ಲಿ 2 ಟೇಬಲ್ ಸ್ಪೂನ್ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದರ ನಂತರ ಸುಮಾರು 30 ನಿಮಿಷಗಳ ನಂತರ ಕೂದಲನ್ನು ತೊಳೆಯಬೇಕು.

Join WhatsApp

Join Now

Join Telegram

Join Now

Leave a Comment