SUDDIKSHANA KANNADA NEWS/ DAVANAGERE/ DATE:14-07-2023
ಮಧ್ಯಪ್ರದೇಶ: ಇತ್ತೀಚೆಗೆ ಆನ್ ಲೈನ್ ಗೇಮ್ ಗೀಳು ಹೆಚ್ಚಾಗುತ್ತಿದೆ. ಎಷ್ಟೋ ಕುಟುಂಬ (Family)ಗಳು ಬೀದಿಗೆ ಬೀಳುತ್ತಿವೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕುಟುಂಬವೊಂದು ಆನ್ ಲೈನ್ ನಲ್ಲಿ ಹಣ ಕಳೆದುಕೊಂಡು ಜೀವವನ್ನೇ ಬಿಟ್ಟಿದೆ.
ಭೋಪಾಲ್ ನಲ್ಲಿ ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ವರದಿಯಾಗಿದೆ. ಭೂಪೇಂದ್ರ ವಿಶ್ವಕರ್ಮ (38), ಅವರ ಪತ್ನಿ ರಿತು (35) ಮತ್ತು ಇಬ್ಬರು ಮಕ್ಕಳಾದ ರಿತುರಾಜ್ (3) ಮತ್ತು ರಿಷಿರಾಜ್ (9) ಸಾವಿಗೀಡಾದವರು.
ಭೂಪೇಂದ್ರ ಆತ್ಮಹತ್ಯೆಗೂ ಮುನ್ನ ’ನಮ್ಮ ಕೊನೆಯ ಕುಟುಂಬದ ಚಿತ್ರ’ ಎಂದು ಉಲ್ಲೇಖಿಸಿರುವುದು ನೋಡಿದರೆ ಎಂಥವರ ಕರುಳು ಚುರುಕ್ ಎನ್ನದೇ ಇರದು.
ಈ ಸುದ್ದಿಯನ್ನೂ ಓದಿ:
ANTYODAYA ANNA YOJANA: ಅಂತ್ಯೋದಯ, ಆದ್ಯತಾ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಪಾವತಿ
ನಗರದ ನೀಲ್ಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಿಂದ ಆತ್ಮಹತ್ಯೆ ಪತ್ರ ಮತ್ತು ಸಲ್ಫೇಟ್ ಮಾತ್ರೆಗಳ ಪ್ಯಾಕೆಟ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ದಂಪತಿ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಮೃತ ಮಕ್ಕಳು 8 ಮತ್ತು 3 ವರ್ಷ ವಯಸ್ಸಿನವರು ಎಂದು ಎಸ್ಪಿ ಚಂದ್ರಪ್ರಕಾಶ್ ಪಾಂಡೆ ಅವರು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಆನ್ಲೈನ್ ಅರೆಕಾಲಿಕ ಕೆಲಸದ ಕುರಿತು ವಾಟ್ಸಾಪ್ನಲ್ಲಿ ಸಂದೇಶ ಬಂದಿತ್ತು.ಅವನಿಗೆ ಹಣದ ಅವಶ್ಯಕತೆ ಇತ್ತು, ಆದ್ದರಿಂದ ಅವನು ಕೆಲಸ ಮಾಡಲು ಪ್ರಾರಂಭಿಸಿದನು. ಆನ್ ಲೈನ್ ಕಂಪೆನಿಯವರು ಅವರು ಅವನ ಲ್ಯಾಪ್ಟಾಪ್ ಅನ್ನು ಹ್ಯಾಕ್ ಮಾಡಿದ್ದಾರೆ. ತಮ್ಮ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯು ಅವರ ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ.
ONLINE PROBLEMS, ONLINE MONEY PROBLE, ONLINE TROUBLE, ONLINE SAMASYE, ONLINE NEWS, ONLINE SUDDI, ONLINE NEWS UPDATES