SUDDIKSHANA KANNADA NEWS/ DAVANAGERE/ DATE:24-07-2024
ದಾವಣಗೆರೆ:ಭದ್ರಾ ಡ್ಯಾಂಗೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 169.5 ಅಡಿಗೆ ಏರಿಕೆಯಾಗಿದೆ. ಜಲಾಶಯದ ಒಳಹರಿವು 15,383 ಕ್ಯೂಸೆಕ್ ಗೆ ಕಡಿಮೆ ಆಗಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 149.5 ಅಡಿ ನೀರು ಇತ್ತು. ಒಳಹರಿವು 39,348 ಕ್ಯೂಸೆಕ್ ಇತ್ತು. ಆದ್ರೆ, ಇಂದು ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆ ಆಗಿದ್ದು, ಮಂಗಳವಾರಕ್ಕೆ ಹೋಲಿಸಿದರೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಕುಂಠಿತಗೊಂಡಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತಗೊಂಡಿದ್ದು, ಡ್ಯಾಂಗೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸುಮಾರು ಐದು ಸಾವಿರ ಕ್ಯೂಸೆಕ್ ನಷ್ಟು ಕುಂಠಿತಗೊಂಡಿದ್ದು, ಜಲಾಶಯದ ನೀರಿನ ಮಟ್ಟ ನಿಧಾನಗತಿಯಲ್ಲಿ ಏರುಮುಖದತ್ತ ಸಾಗುತ್ತಿದೆ. ಜಲಾಶಯದ ನೀರಿನ ಮಟ್ಟ ಮಂಗಳವಾರ168.2 ಅಡಿ ನೀರಿಗೆ ಏರಿಕೆ ಆಗಿತ್ತು. ಇಂದು ಕೇವಲ 1.3 ಅಡಿ ನೀರು ಹರಿದು ಬಂದಿದೆ.
ಒಳಹರಿವಿನಲ್ಲಿ ಕುಸಿತವಾಗಿದ್ದು, ಮಂಗಳವಾರ 20,045 ಕ್ಯೂಸೆಕ್ ಒಳಹರಿವಿತ್ತು. ಜಲಾಶಯ ಭರ್ತಿಯಾಗಲು ಇನ್ನೂ 16.5 ಅಡಿ ನೀರು ಹರಿದು ಬರಬೇಕು. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದ ನೀರಿನ ಮಟ್ಟ 149.5 ಅಡಿ ಇತ್ತು. ಕಳೆದ
ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದ ನೀರಿನ ಇಂದಿನ ಮಟ್ಟ 20 ಅಡಿ ಹೆಚ್ಚು ಸಂಗ್ರಹ ಇದೆ. ‘
ಜುಲೈ ತಿಂಗಳಿನಲ್ಲಿಯೇ ಡ್ಯಾಂ ಭರ್ತಿಯಾಗುವ ಸಾಧ್ಯತೆ ಕ್ಷೀಣಿಸಿದ್ದು, ಮಳೆ ಕುಂಠಿತಗೊಂಡಿರುವ ಕಾರಣ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ವರುಣ ಅಬ್ಬರಿಸಿ ಬೊಬ್ಬಿರಿದರೆ ಮಾತ್ರ ಜುಲೈ ಅಂತ್ಯದೊಳಗೆ ‘ಡ್ಯಾಂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಈ ಬಾರಿ ರಾಜ್ಯಾದ್ಯಂತ ಭಾರೀ ಮಳೆ ಸುರಿದಿದ್ದು, ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಆದ್ರೆ, ಭದ್ರಾ ಡ್ಯಾಂಗೆ ಇನ್ನೂ ಹದಿನೇಳಕ್ಕೂ ಹೆಚ್ಚು ಅಡಿ ನೀರು ಬೇಕಿದ್ದು, ಈ ವರ್ಷ ಭರ್ತಿಯಾಗುವ ವಿಶ್ವಾಸದಲ್ಲಿ ರೈತರು, ಭದ್ರಾ ಅಚ್ಚುಕಟ್ಟುದಾರರು ಇದ್ದಾರೆ.
ಭದ್ರಾ ಡ್ಯಾಂಗೆ ಸೋಮವಾರ ಸ್ವಲ್ಪ ಪ್ರಮಾಣದಲ್ಲಿ ಒಳಹರಿವು ಹೆಚ್ಚಿತ್ತು. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ 2 ಸಾವಿರ ಕ್ಯೂಸೆಕ್ ನಷ್ಟು ನೀರು ಹೆಚ್ಚಳವಾಗಿತ್ತು. ಜಲಾಶಯದ ನೀರಿನ ಮಟ್ಟ 166.6 ಅಡಿ ಆಗಿತ್ತು. 5 ಸಾವಿರದಷ್ಟು ಕ್ಯೂಸೆಕ್ ನೀರು ಒಳಹರಿವು ಕಡಿಮೆಯಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದ ನೀರಿನ ಮಟ್ಟ 20 ಅಡಿ ಅಷ್ಟು ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಸುಮಾರು 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಕಡಿಮೆಯಾಗಿದೆ. ಒಂದು ವಾರ ಸುರಿದಂತೆ ಮಳೆ ಸುರಿದರೆ ಡ್ಯಾಂ ಗರಿಷ್ಠ ಮಟ್ಟ ಆದಷ್ಟು ಬೇಗ ತಲುಪಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಜಲಾಶಯ ಭರ್ತಿಯಾಗುವ ಕ್ಷಣಕ್ಕೆ ಲಕ್ಷಾಂತರ ರೈತರು, ಜನರು ಕಾತರರರಾಗಿದ್ದಾರೆ.
ಭದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಒಳಹರಿವು ಭಾರೀ ಪ್ರಮಾಣದಲ್ಲಿ ಭಾನುವಾರ ಕಡಿಮೆ ಆಗಿತ್ತು. 23,674 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 191 ಕ್ಯೂಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭದ್ರಾ ಡ್ಯಾಂ ನೀರಿನ ಮಟ್ಟ 22.5 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗುವ ವಿಶ್ವಾಸ ರೈತರು, ಭದ್ರಾ ಅಚ್ಚುಕಟ್ಟುದಾರರು, ಭದ್ರಾ ಡ್ಯಾಂ ಅಧಿಕಾರಿಗಳಲ್ಲಿದೆ.