ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಟ ದರ್ಶನ್ ಮನೆ ಊಟಕ್ಕಾಗಿ ರಿಟ್ ಅರ್ಜಿ ಸಲ್ಲಿಕೆ : ಜುಲೈ 25ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

On: July 22, 2024 5:53 PM
Follow Us:
---Advertisement---

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಊಟ ಸೇರದಕ್ಕೆ ಅವರು ಇತ್ತೀಚೆಗೆ ಮನೆಯಿಂದ ಊಟ, ಹಾಸಿಗೆ, ಪುಸ್ತಕ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಜುಲೈ 25ರಂದು ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ನ್ಯಾಯಾಧೀಶರಾದ ವಿಶ್ವನಾಥ ಸಿ ಗೌಡರ್ ಅವರು ಜುಲೈ 25ಕ್ಕೆ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಆರ್ಥಿಕ ಅಪರಾಧಗಳ ಕೋರ್ಟ್ ನಲ್ಲಿ ನಟ ದರ್ಶನ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜೈಲು ಅಧಿಕಾರಿಗಳಿಂದ ಕೋರ್ಟಿಗೆ ಇ-ಮೇಲ್ ಮೂಲಕ ವರದಿ ಸಲ್ಲಿಸಲಾಗಿದೆ ಎಂದು ದರ್ಶನ್ ಪರ ವಕೀಲ ರಾಘವೇಂದ್ರ ವಾದ ಮಂಡನೆ ಮಾಡಿದರು.ಮೊದಲನೆಯದಾಗಿ ಕಾನೂನಿನಲ್ಲಿ ಮನೆ ಊಟಕ್ಕೆ ಅವಕಾಶವಿದೆಯೇ? ಜೈಲಿನಲ್ಲಿ ಇದ್ದಾಗ ಆಹಾರದ ಹಕ್ಕು ಇರುವುದಿಲ್ಲವೇ? ಯಾವ ವರ್ಗದ ಆರೋಪಿಗಳು ಇದಕ್ಕೆ ಅರ್ಹರು? ಯಾವ ಷರತ್ತುಗಳನ್ನು ವಿಧಿಸಬಹುದೆಂಬ ಬಗ್ಗೆ ವಾದಿಸುತ್ತೇನೆ ಎಂದು ನಟ ದರ್ಶನ್ ಪರ ವಕೀಲರಘವೇಂದ್ರ ವಾದ ಮಂಡನೆ ಮಾಡಿದರು.

ಸಿವಿಲ್ ಕೈದಿಗಳು ವಿಚಾರಣಾ ಧೀನ ಕೈದಿಗಳಿಗೆ ಅವಕಾಶವಿದೆ. ಮನೆ, ಊಟ, ಹಾಸಿಗೆ, ಬಟ್ಟೆ ಪಡೆದುಕೊಳ್ಳಲು ಅವಕಾಶವಿದೆ. ಜೈಲು ಅಧಿಕಾರಿಗಳ ಷರತ್ತಿಗೆ ಒಳಪಟ್ಟು ಈ ಸೌಲಭ್ಯ ಪಡೆಯಬಹುದು.ಕರ್ನಾಟಕ ಜೈಲು ಅಧಿನೀಯಮದಲ್ಲಿ ಅವಕಾಶವಿದೆ. ಕೈದಿಗೆ ವಿರುದ್ಧವಾಗಿ ನಿಯಮ ರೂಪಿಸುವಂತಿಲ್ಲ..

ಜೈಲು ಅಧಿಕಾರಿಗಳು ವಿಧಿಸುವ ಶರತುಗಳನ್ನು ಪಾಲಿಸಲಾಗುತ್ತದೆ. ದರ್ಶನ್ ಸಿನಿಮಾ ನಟರಾಗಿರುವುದು ಹೆಚ್ಚು ಪ್ರಚಾರ ಸಿಗುತ್ತಿದೆ.ಹೀಗಾಗಿ ಜೈಲು ಅಧಿಕಾರಿಗಳು ಮನೆ ಊಟಕ್ಕೆ ಅವಕಾಶ ನೀಡುತ್ತಿಲ್ಲ.ನಟ ದರ್ಶನ್ ಪತ್ನಿಯು ಈ ಸಂಬಂಧ ಮನವಿ ನೀಡಿದ್ದಾರೆ. ಮನೆ ಊಟದ ಪರವಾಗಿ ಹಲವು ತೀರ್ಪುಗಳಿವೆ. ಆದರೆ ಮನೆ ಊಟ ನಿರಾಕರಿಸುವಂತಹ ತೀರ್ಪುಗಳು ಇಲ್ಲ.ಇದೆ ವೇಳೆ ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜಗು ಮೂಲಭೂತ ಹಕ್ಕು ನೀಡಲಾಗಿದೆ.ಸಿನಿಮಾ ಸ್ಟಾರ್ ಎಂಬ ಕಾರಣದಿಂದಲೇ ಮನೆ ಊಟಕ್ಕೆ ಅವಕಾಶ ನೀಡಿಲ್ಲ ಎಂದು ವಾದ ಮಂಡಿಸಿದರು.

ಸೀರಿಯಲ್ ಕಿಲ್ಲರ್ ಗಳ ಹಲವು ಆದೇಶಗಳನ್ನು ಇದೆ ವೇಳೆ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸುತ್ತಿದ್ದು ಮನೆ ಊಟ ಹಾಸಿಗೆ ಬಟ್ಟೆ ಒದಗಿಸಲು ಮನವಿ ಮಾಡಿಕೊಂಡಿದ್ದಾರೆ. ಆರೋಪ ಸಾಬೀತವಾಗುರುವವರೆಗೂ ದರ್ಶನ್ ಅವರನ್ನ ಮುಗ್ದನೆಂದು ಭಾವಿಸಬೇಕು ಆತನಿಗೆ ಶಿಕ್ಷೆ ಪ್ರಕಟ ಆಗಿಲ್ಲ ಎಂದರು.ಇದೆ ವೇಳೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ಆಹಾರ ಜೀರ್ಣವಾಗುತ್ತಿಲ್ಲ ಎಂದು ವಾದಿಸುತ್ತಿದ್ದು, ವೈದ್ಯರ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದೇವೆ. ಒಂದು ಬಾರಿಯೂ ಕೂಡ ಬೇಧಿಯಾಗಿದೆ ಎಂದು ವೈದ್ಯರಿಗೆ ಹೇಳಿಲ್ಲ. ದರ್ಶನ್ ವೈದ್ಯರ ಬಳಿ ಹೇಳಿಲ್ಲ ಎಂದು ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ಆಹಾರ ಜೀರ್ಣವಾಗುತ್ತಿಲ್ಲ ಎಂದು ದರ್ಶನ್ ಹೇಳೇ ಇಲ್ಲ. ಶೂಟಿಂಗ್ ವೇಳೆ ಆದ ಗಾಯಕ್ಕೆ ಫಿಸಿಯೋಥೆರಪಿ ಕೇಳಿದ್ದಾರೆ. ಸೊಂಟ, ಕಾಲಿಗೆ ಆದ ಗಾಯದ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದಾರೆ ಹೊರತು ಹೀಗಾಗಿ ಜೈಲೂಟದಿಂದ ಸಮಸ್ಯೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಪೊಲೀಸರ ಪರ ಎಸ್ಪಿಬಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.ಜ್ವರವಿದ್ದರೆ ವೈದ್ಯಾಧಿಕಾರಿ ನಿಗಾದಲ್ಲಿ ಇಡುತ್ತಾರೆ. ಜೈಲು ಆಹಾರ ಅಥವಾ ಆಸ್ಪತ್ರೆಯ ಆಹಾರ ನೀಡಬಹುದು ಆದರೆ ಮನೆ ಊಟ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಜೈಲು ವೈದ್ಯಾಧಿಕಾರಿಗಳು ವಿಶೇಷ ಆಹಾರವನ್ನು ಅಗತ್ಯವಿದ್ದರೆ ನೀಡಬಹುದು. ಕೇವಲ 15 ದಿನ ಮಾತ್ರ ವಿಶೇಷ ಆಹಾರ ನೀಡಬಹುದು.

ನಿಯಮ 728 ರಲ್ಲಿ ಬಟ್ಟೆ ಹಾಸಿಗೆ ಬಗ್ಗೆ ನಿಯಮವಿದೆ ಕೊಲೆ ಆರೋಪಿ ಬಿಟ್ಟು ಉಳಿದವರಿಗೆ ಮಾತ್ರ ಅವಕಾಶವಿದೆ. ಇಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪುಸ್ತಕವನ್ನು ಕೇಳಿಲ್ಲ. ಬಹಳ ಫಿಟ್ ಆಗಿದ್ದರೆಂದು ಅರ್ಜಿಯಲ್ಲಿ ಹೇಳಲಾಗಿದೆ. ನಟನಾಗಿರುವುದರಿಂದ ಉತ್ತಮ ಆಹಾರ ಬೇಕೆಂದು ಕೇಳಿದ್ದಾರೆ. ಎಂದು ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಪ್ರಬಲವಾದ ವಾದ ಮಂಡಿಸಿದರು.ತಮ್ಮ ದೇಹ ತೂಕ 10 ಕೆ.ಜಿ ಇಳಿದಿದೆ. ಹೀಗಾಗಿ ಮನೆ ಊಟ ಬೇಕೆಂದು ದರ್ಶನ್ ಅವರು ಕೇಳಿದ್ದಾರೆ. ವ್ಯಾಯಾಮ ಮಾಡುತ್ತಿರುವುದರಿಂದ ಮನೆ ಊಟ ಬೇಕೆಂದು ಕೇಳಿದ್ದಾರೆ. ಜೈಲುಟದ ಜೊತೆಗೆ ಹೆಚ್ಚಿನ ಪ್ರೋಟೀನ್ ಕೂಡ ಕೇಳಿದ್ದಾರೆ. ಜುಲೈ 10ರವರಿಗೂ ಬೆನ್ನು ನೋವು ರೆಸ್ಟು ಬಗ್ಗೆ ಕೇಳಿಲ್ಲ.

ಜೈಲಿನಲ್ಲಿ ಇರುವವರಿಗೆ ಎಲ್ಲಾ ಮೂಲಭೂತ ಹಕ್ಕು ಸಿಗುವುದಿಲ್ಲ. ಮೂಲಭೂತ ಹಕ್ಕಿನ ಕೆಲ ಅಂಶಗಳು ಮಾತ್ರ ಸಿಗುತ್ತದೆ. ಚಾಲ್ಸ್ ಶೋಭರಾಜ್ ತೀರ್ಪಿನಲ್ಲೂ ಸಂಪೂರ್ಣ ಹಕ್ಕುಗಳಿಲ್ಲ. ಸಂಪೂರ್ಣ ಹಕ್ಕುಗಳಿಲ್ಲ ಎಂದು ಹೇಳಲಾಗಿದೆ. ಜೈಲು ಕೈಪಿಡಿಯಲ್ಲಿ ಮನೆ ಊಟಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.ಜೈಲಿನಲ್ಲಿ 5000 ಕ್ಕೂ ಅಧಿಕ ಕೈದಿಗಳಿದ್ದು ಹೀಗಾಗಿ ಈ ಕೇಸಿನಲ್ಲಿ ಯಾವುದೇ ವಿಶೇಷ ವಿನಾಯಿತಿ ಬೇಡ. ಸಿನಿಮಾ ಸ್ಟಾರ್ ಎಂದು ತಾರತಮ್ಯ ಮಾಡುವಂತಿಲ್ಲ. ಬಡವ, ಶ್ರೀಮಂತ, ಹೀರೋ, ಸ್ಟಾರ್ ಎಲ್ಲರೂ ಸಮಾನರೆ ಎಂದು ಆ ಪೊಲೀಸರಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment