ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Amarnath Temple: ಕುದುರೆ ಮೇಲೂ ಹೋಗ್ಲಿಲ್ಲ, ನಡೆದುಕೊಂಡು ಹೋಗ್ಲಿಲ್ಲ.. ಬದುಕಿ ಬರಲು ಕಾರಣವಾದದ್ದು ಏನು…? ದಾವಣಗೆರೆ ಮಹಿಳೆಯರು ಬಿಚ್ಚಿಟ್ಟ ರೋಚಕ ಕಥೆ..!

On: July 10, 2023 3:08 PM
Follow Us:
Amarnath Temple
---Advertisement---

SUDDIKSHANA KANNADA NEWS/ DAVANAGERE/ DATE:10-07-2023

ದಾವಣಗೆರೆ: ಜಮ್ಮುಕಾಶ್ಮೀರದಲ್ಲಿರುವ ಅಮರನಾಥ ಯಾತ್ರೆ (Amarnath Temple) ಕೈಗೊಳ್ಳುವುದು ಬಹುತೇಕ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಿಂದೂ ಧರ್ಮದ ಆರಾಧ್ಯ ದೈವ ಶಿವನಿಗೆ ಸಮರ್ಪಿತವಾಗಿದೆ ಅಮರನಾಥ ಯಾತ್ರಾ (Amarnath Temple)ಸ್ಥಳ. ಜಮ್ಮು ಕಾಶ್ಮೀರದ್ಲಲಿರುವ ಗುಹೆಯಲ್ಲಿರುವ ಈ ದೇವರು ನೋಡಲು ದೇಶದ ನಾನಾ ಮೂಲೆಗಳಿಂದ ಹೋಗುತ್ತಾರೆ. ಈ ದೇಗುಲಕ್ಕೆ ಬರೋಬ್ಬರಿ 5 ಸಾವಿರ ವರ್ಷಗಳ ಇತಿಹಾಸ ಇದೆ. ಗುಹೆಯೊಳಗೆ ಇರುವ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರ ಹೊಂದುತ್ತೆ. ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುತ್ತೆ. ದರ್ಶನ ಪಡೆದರೆ ಪುಣ್ಯ ಸಿಗುತ್ತೆ ಎಂಬ ನಂಬಿಕೆ ಇದೆ.

ಅಮರನಾಥ ಎಂದರೆ ಚಿರಂಜೀವಿ ಹಾಗೂ ನಾಥ ಎಂದು ಕರೆಯಲಾಗುತ್ತೆ. ಅಂದರೆ ದೇವರು ಎಂಬ ಎರಡು ಪದಗಳು ಸೇರಿ ಅಮರನಾಥ (Amarnath Temple) ಆಗಿದೆ. ಹಾಗಾಗಿ, ಚಿರಂಜೀವಿ ದೇವರು ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಜನರಲ್ಲಿ ಈಗಲೂ ಇದೆ. ಹಾಗಾಗಿ, ಅಮರನಾಥ ಯಾತ್ರೆ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಜನರು ಈ ತಾಣಕ್ಕೆ ಬರುತ್ತಾರೆ. ಅಮರನಾಥನ ದರ್ಶನ ಪಡೆದರೆ ಸಾಕು ಎಂಬ ನಿಟ್ಟಿನಲ್ಲಿ ಎಷ್ಟೇ ದಣಿವು, ಕಷ್ಟವಾದರೂ ಹೋಗುವುದು ವಿಶೇಷ.

ದಾವಣಗೆರೆಯ ನಾಲ್ವರು ಬದುಕಿ ಬಂದಿದ್ದೇಗೆ…?

ಅಮರನಾಥ ಯಾತ್ರೆ(Amarnath Temple)ಗೆ ನಾವು ಹೋಗಿದ್ದೆವು. ಆಗ ಕುದುರೆ ಮೇಲೆ ಹೋಗಬೇಡಿ, ಭದ್ರತೆ ಇಲ್ಲ, ಅಪಾಯ ಎದುರಾಗುವ ಸಾಧ್ಯತೆ ಇದೆ. ನಡೆದುಕೊಂಡು ಹೋಗಲು ನಿಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಡೋಲುವಿನಲ್ಲಿ ಹೋಗಿ ಬನ್ನಿ. ಬೇಗ ದರ್ಶನವೂ ಆಗುತ್ತೆ. ಸೇಫ್ ಸಹ ಹೌದು. ಇದು ಗಂಗಾಧರ ಸ್ವಾಮಿ ಅವರು ಕೊಟ್ಟ ಈ ಸಲಹೆ. ಇದರಿಂದಲೇ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿ ಬಂದೆವು. ಗಂಗಾಧರ ಸ್ವಾಮಿ ಅವರ ಮಾತು ಕೇಳದಿದ್ದರೆ ಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿತ್ತು. ಇಷ್ಟು ಬೇಗ ವಾಪಸ್ ಬರಲೂ ಸಹ ಸಾಧ್ಯವಾಗುತ್ತಿರಲಿಲ್ಲ. ಅಮರನಾಥ ಯಾತ್ರೆಯ ವೇಳೆ ದರ್ಶನವೂ ಚೆನ್ನಾಗಿ ಆಯಿತು‌‌. ಅಪಾಯದಿಂದಲೂ ಪಾರಾಗಿ ಬಂದೆವು‌. ದೇವರ ನಾಮ ಸ್ಮರಣೆ ನಮ್ಮನ್ನು ಕಾಪಾಡಿತು ಎಂದು ದಾವಣಗೆರೆಗೆ ವಾಪಸ್ ಆದ ಗೀತಾ ಅವರು ನೆನಪಿಸಿಕೊಂಡರು.

ಅಮರನಾಥನ ದರ್ಶನ ಮುಗಿಸಿದರು‌:

ಅಮರನಾಥ ಯಾತ್ರೆ(Amarnath Temple)ಗೆ ಹೋಗಿ ಸಿಲುಕಿಕೊಂಡಿದ್ದ ನಾಲ್ವರು ಮಹಿಳೆಯರು ಪವಾಡ ಎಂಬಂತೆ ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದಾರೆ. ನಗರದ ಶಾಮನೂರು ಸೇರಿದಂತೆ ವಿವಿಧ ಬಡಾವಣೆಯ ಮಹಿಳೆಯರು ಅಮರನಾಥ ಯಾತ್ರೆಗೆ ದಾವಣಗೆರೆಯಿಂದ ಹೋಗಿದ್ದರು. ಎನ್. ಆರ್. ಗೀತಾ, ಸಿ. ಹೆಚ್. ಚಂದ್ರಿಕಾ, ಬಿ. ಜಿ. ಪುಷ್ಪಾ, ಎಸ್. ವಿ. ಉಷಾರಾಣಿ ಅಪಾಯದಿಂದ ಪಾರಾಗಿ ಬಂದವರು.

ದಾವಣಗೆರೆಯಿಂದ ಕಳೆದ ಜೂನ್ 30 ರಂದು ಅಮರನಾಥ ಯಾತ್ರೆ(Amarnath Temple)ಗೆ ಹೋಗಿದ್ದರು. ಜುಲೈ 6 ರಂದೇ ಅಮರನಾಥ ದರ್ಶನ ಮುಗಿಸಿ ಬೇಸ್ ಕ್ಯಾಂಪ್ ಗೆ ತೆರಳಿದ್ದರು. ಅವರು ಅಮರನಾಥನ ದರ್ಶನ ಪಡೆದು ವಾಪಸ್ ಬಂದು ಎರಡು ಗಂಟೆಯಲ್ಲಿ ಅಮರನಾಥದಲ್ಲಿ ಪ್ರತಿಕೂಲ ವಾತಾವರಣ ನೋಡನೋಡುತ್ತಲೇ ನಿರ್ಮಾಣ ಆಯ್ತು. ಯಾತ್ರೆಯಲ್ಲಿ ಸಾಕಷ್ಟು ಜನರು ಸಿಲುಕಿದ್ದು, ನಾವು ದೇವರ ದಯೆಯಿಂದ ಸುರಕ್ಷಿತವಾಗಿ ವಾಪಸ್ಸು ಬಂದಿದ್ದೇವೆ. ಅಮರನಾಥನ ದರ್ಶನ ಪಡೆದೆವು ಎಂಬ ಪುಳಕ ಒಂದೆಡೆಯಾದರೆ ಮತ್ತೊಂದೆಡೆ ಎಲ್ಲಿ ಸಿಲುಕಿ ಹಾಕಿಕೊಳ್ಳುತ್ತೇವೆ ಎಂಬ ಭಯ ಕಾಡಲಾರಂಭಿಸಿತು. ಗಂಗಾಧರ ಸ್ವಾಮಿ ಅವರ ಸಹಕಾರದಿಂದ ಆದಷ್ಟು ಬೇಗ ಅಪಾಯ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಬಂದೆವು ಎನ್ನುತ್ತಾರೆ ಗೀತಾ.

ಭದ್ರತೆಗೆ ನಿಯೋಜಿಸಿದ್ದ ಸೇನೆ ಹಾಗೂ ದೇವಸ್ಥಾನದ ಅಡಳಿತ ಮಂಡಳಿಯವರೆಲ್ಲರೂ ನಮಗೆ ತುಂಬಾನೇ ಹೆಲ್ಪ್ ಮಾಡಿದ್ರು. ಅವರಿಗೆ ಧನ್ಯವಾದ ಹೇಳಲೇಬೇಕು. ಅದರಲ್ಲೂ ನಾವು ದರ್ಶನ ಮುಗಿಸಿ ಬೇಗ ವಾಪಸ್ಸು ಬಂದಿದ್ದಕ್ಕೆ ಸುರಕ್ಷಿತವಾಗಿ ಬಂದಿದ್ದೇವೆ. ಸ್ವಲ್ಪ ತಡವಾಗಿದ್ದರೂ ಅನಾಹುತಕ್ಕೆ ಸಿಲುಕಿಕೊಳ್ಳಬೇಕಾಗುತಿತ್ತು. ಅಲ್ಲೇ ಸಿಕ್ಕಿ ಕೊಂಡು ಪರದಾಡುವಂತಾಗುತಿತ್ತು ಎಂದು ನೆನಪಿಸಿಕೊಂಡರು.

ಯಾತ್ರೆ ವೇಳೆ ಬಹಳ ಕಷ್ಟ ಎದುರಾಯಿತು. ಕಷ್ಟಪಟ್ಟು ಅಮರನಾಥನ ದರ್ಶನ ಮಾಡಿದೆವು. ಮಳೆ ಆರಂಭವಾಯಿತು. ನಮ್ಮನ್ನು ಬೇಗ ಬೇಗ ಹೊರ ಕಳುಹಿಸಿದರು. ಹೊರ ಬಂದು ಮಳೆಯಲ್ಲಿ ತೊಯ್ದೆವು. ಎಲ್ಲಿ ಹೋಗ್ತಿದ್ದೀವಿ ಅಂತಾನೇ ಗೊತ್ತಾಗುತ್ತಿರಲಿಲ್ಲ. ರಸ್ತೆಯಲ್ಲಿ ಕೆಸರು ನೀರು ಹರಿದು ಬರುತ್ತಿತ್ತು. ಎಲ್ಲಿ ಕೊಚ್ಚಿ ಹೋಗ್ತೀವಿ ಅನ್ನೋ ಆತಂಕ ಶುರುವಾಗಿತ್ತು. ಅಷ್ಟು ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು, ಕೊನೆಯಲ್ಲಿ ಪವಾಡ ಸದೃಶವಾಗಿ ಪಾರಾಗಿ ಸುರಕ್ಷಿತವಾಗಿ ದಾವಣಗೆರೆಗೆ ವಾಪಸ್ ಆದೆವು. ಸಿಆರ್ ಪಿಎಫ್ ಗೆ ಹ್ಯಾಟ್ಸಾಪ್ ಹೇಳಲೇಬೇಕು, ಏಕೆಂದರೆ ಅಷ್ಟು ಅತ್ಯುತ್ತಮವಾಗಿ, ವ್ಯವಸ್ಥಿತವಾಗಿ ಭದ್ರತೆ ನೀಡುತ್ತಿದ್ದರು ಎಂದು ಎನ್. ಆರ್. ಗೀತಾ, ಸಿ. ಹೆಚ್. ಚಂದ್ರಿಕಾ, ಬಿ. ಜಿ. ಪುಷ್ಪಾ, ಎಸ್. ವಿ. ಉಷಾರಾಣಿ ಅವರು ತಾವು ಅಮರನಾಥದಲ್ಲಿ ಎದುರಿಸಿದ ಕಷ್ಟ ಹಂಚಿಕೊಂಡರು.

ಈ ಸುದ್ದಿಯನ್ನೂ ಓದಿ: 

Channagiri: ಬಾಲಕಿಯರ ಹಾಸ್ಟೆಲ್ ಗೆ ಶಾಸಕ ಬಸವರಾಜ್ ವಿ. ಶಿವಗಂಗಾ ದಿಢೀರ್ ಭೇಟಿ: ಯಾವೆಲ್ಲಾ ಸೂಚನೆ, ಎಚ್ಚರಿಕೆ ಕೊಟ್ಟರು ಗೊತ್ತಾ…?

 

ಅಮರನಾಥ ಸ್ಥಳಕ್ಕೆ ಜುಲೈ ಮತ್ತು ಆಗಸ್ಟ್ ತಿಂಗಳು ಹೆಚ್ಚು ಪ್ರಶಸ್ತ್ಯ ಸಮಯ ಎಂದು ಪರಿಗಣಿಸಲಾಗಿದೆ. ಮೇ ತಿಂಗಳಿನಿಂದ ಸೆಪ್ಟಂಬರ್ ಮಧ್ಯದಲ್ಲಿಯೂ ಇಲ್ಲಿಗೆ ಭೇಟಿ ನೀಡಬಹುದು. ಆದ್ರೆ, ಹಿಮ ಬೀಳುವ, ಮಳೆ ಬೀಳುವ ವೇಳೆ ಇಲ್ಲಿಗೆ ತೆರಳಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಈಗಲೂ ಜನರಲ್ಲಿದೆ. ಸೇನೆ ಮತ್ತು ಸ್ಥಳೀಯ ಆಡಳಿತದ ಅನುಮತಿ ಇಲ್ಲದೇ ಇಲ್ಲಿಗೆ ಯಾರೂ ಹೋಗುವಂತಿಲ್ಲ. ಹಾಗಾಗಿ, ಭದ್ರತೆ ಯಾವಾಗಲೂ ಇದ್ದೇ ಇರುತ್ತದೆ. ಕುದುರೆಗಳಲ್ಲಿ ಹೋಗುವಾಗ ಭದ್ರತೆ ಇರುವುದಿಲ್ಲ. ಯಾಕೆಂದರೆ ಕರೆದುಕೊಂಡು ಹೋಗುವವರು ಯಾರು ಎಂಬುದು ಪರಿಚಯವಿರುವುದಿಲ್ಲ. ನಡೆದುಕೊಂಡು ಹೋಗಲು ಆಗಲ್ಲ. ಯಾಕೆಂದರೆ ಅಷ್ಟೊಂದು ದೂರ ಇರುತ್ತದೆ. ನಮ್ಮನ್ನು ಹೊತ್ತುಕೊಂಡು ಹೋಗುವ ಡೋಲುವಿನಲ್ಲಿ ಹೋದರೆ ಬೇಗನೇ ಕರೆದುಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ದೇವರ ದರ್ಶನ ಪಡೆಯುವ ಜೊತೆಗೆ ಸಂಕಷ್ಟವನ್ನೂ ಎದುರಿಸಬೇಕಾಗಿ ಬಂತು ಎನ್ನುತ್ತಾರೆ ದರ್ಶನಕ್ಕೆ ಹೋಗಿ ಸುರಕ್ಷಿತವಾಗಿ ವಾಪಸ್ ಬಂದವರು.

Amarnath Temple, Amarnath Temple Shiva Linga

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment