ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Channagiri: ಬಾಲಕಿಯರ ಹಾಸ್ಟೆಲ್ ಗೆ ಶಾಸಕ ಬಸವರಾಜ್ ವಿ. ಶಿವಗಂಗಾ ದಿಢೀರ್ ಭೇಟಿ: ಯಾವೆಲ್ಲಾ ಸೂಚನೆ, ಎಚ್ಚರಿಕೆ ಕೊಟ್ಟರು ಗೊತ್ತಾ…?

On: July 10, 2023 11:27 AM
Follow Us:
Channagiri mla visit
---Advertisement---

SUDDIKSHANA KANNADA NEWS/ DAVANAGERE/ DATE:10-07-2023

ದಾವಣಗೆರೆ: ಚನ್ನಗಿರಿ (Channagiri) ಶಾಸಕ ಬಸವರಾಜ್ ವಿ. ಶಿವಗಂಗಾ ದಿಢೀರ್ ಆಗಿ ಚನ್ನಗಿರಿ (Channagiri) ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜೊತೆ ಚರ್ಚೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ಇದು ವಿದ್ಯಾರ್ಥಿನಿಯರ ಖುಷಿಗೂ ಕಾರಣವಾಯ್ತು.

ಚನ್ನಗಿರಿ(Channagiri)ಯ ಬಸವೇಶ್ವರ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿಯಿರುವ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದರು. ಹಾಸ್ಟೆಲ್ ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಕುರಿತಂತೆಯೂ ಮಾಹಿತಿ ಪಡೆದರು.

ವಿದ್ಯಾರ್ಥಿನಿಯರಿಗೆ ವಿತರಣೆ ಮಾಡುವ ಆಹಾರವನ್ನು ಸ್ವತಃ ಪರೀಕ್ಷೆ ಮಾಡಿದರು. ಶಾಸಕರ ಭೇಟಿ ಸಂದರ್ಭದಲ್ಲಿ ವಾರ್ಡನ್ ಇರಲಿಲ್ಲ. ಈ ವೇಳೆ ಅಲ್ಲಿಂದಲೇ ಫೋನ್ ಕರೆ ಮಾಡಿ ಎಚ್ಚರಿಕೆ ನೀಡಿದರು. ಊಟ ಬಡಿಸುವಾಗ ಸ್ಥಳದಲ್ಲಿಯೇ
ಇರಬೇಕು. ಇಲ್ಲದಿದ್ದರೆ ಕ್ರಮ ಅನಿವಾರ್ಯವಾಗುತ್ತದೆ ಎಂಬ ಸಂದೇಶವನ್ನೂ ನೀಡಿದರು.

ಈ ಸುದ್ದಿಯನ್ನೂ ಓದಿ: 

Sub-Registrars Enquiry: ಹಣಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ಕಾರಿ ಭೂಮಿಪರಭಾರೆ ತನಿಖೆ, ತಪ್ಪಿತಸ್ಥರ ಬಿಡೋದಿಲ್ಲ: ಎಸ್ ಎಸ್ ಎಂ ಖಡಕ್ ಸ್ಟೇಟ್ಮೆಂಟ್

ಕಳಪೆ ಗುಣಮಟ್ಟದ ಆಹಾರ ನೀಡಿದರೆ ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ. ಗುಣಮಟ್ಟದ ಆಹಾರ ನೀಡಬೇಕೆಂದು ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗೆ ಸೂಚಿಸಿದರು. ಲೋಪ ಕಂಡು ಬಂದರೆ ನಿರ್ದಾಕ್ಷಿಣ್ಯ ಕೈಗೊಳ್ಳಲಾಗುತ್ತದೆ. ಅಡುಗೆಗೆ ಬಳಸುವ ಆಹಾರ ಪದಾರ್ಥದ ಗುಣಮಟ್ಟ ಪರೀಕ್ಷೆ ಮಾಡಬೇಕು. ಆಹಾರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೂ ನೀವೇ ಜವಾಬ್ದಾರರು. ಓದುವ ಬಡ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರದಿಂದ ಒದಗಿಸುವ ಎಲ್ಲಾ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪಬೇಕು. ಊಟದ ಸಂದರ್ಭದಲ್ಲಿ ವಾರ್ಡನ್ ಕಡ್ಡಾಯವಾಗಿ ಹಾಸ್ಟೆಲ್ ನಲ್ಲಿಯೇ ಇರಬೇಕು, ಶುದ್ಧ ಕುಡಿಯುವ ನೀರು ಒದಗಿಸಬೇಕು, ಶೌಚಾಲಯ ಸೇರಿದಂತೆ ಅಡುಗೆ ಮನೆಯನ್ನ ಸ್ವಚ್ಛವಾಗಿಡಬೇಕು. ನಮ್ಮ ಮನೆ ಹಾಗೂ ಮಕ್ಕಳಂತೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರನ್ನ ನೋಡಿಕೊಳ್ಳಬೇಕು. ಯಾವ ದೂರು ಬಾರದಂತೆ ಕೆಲಸ ಮಾಡಬೇಕು. ಒಂದು ವೇಳೆ ದೂರುಗಳು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಶಾಸಕರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಹಾಸ್ಟೆಲ್ ನಲ್ಲಿನ ಸಿಬ್ಬಂದಿಗೆ ಹಾಜರಾತಿ ಕಡ್ಡಾಯ. ಬಯೋಮೆಟ್ರಿಕ್ ಹಾಕಿಸುವಂತೆ ವಾರ್ಡನ್ ಅವರಿಗೆ ಸೂಚಿಸಿದರು. ಕರ್ತವ್ಯ ಲೋಪ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕರು ಮೊದಲ ಬಾರಿಗೆ ಹಾಸ್ಟೆಲ್ ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕರು ಹಾಸ್ಟೆಲ್ ಗೆ ಬಂದು ನಮ್ಮ ಸಮಸ್ಯೆ ಆಲಿಸಿದ್ದು ಖುಷಿ ತಂದಿತು ಎಂದು ವಿದ್ಯಾರ್ಥಿನಿಯರು ಹೇಳಿದರು.

Channagiri News, Channagiri News Updates, Channagiri Mla Visit, Channagiri Mla Warning 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment