ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: 6ನೇ ಗ್ಯಾರಂಟಿ ಬಜೆಟ್‌ನಲ್ಲಿ ಸೇರಿಸ್ಬೇಕಿತ್ತು, ಪ್ರಿಯಾಂಕಾ ಗಾಂಧಿ ಘೋಷಣೆಗಿಲ್ಲ ಮನ್ನಣೆ: ಶಿವನಗೌಡ ಟಿ. ಪಾಟೀಲ್ ಟೀಕೆ

On: July 7, 2023 11:36 AM
Follow Us:
Davanagere Bjp Leader Shivanagowda Patil
---Advertisement---

SUDDIKSHANA KANNADA NEWS/ DAVANAGERE/ DATE:07-07-2023

ದಾವಣಗೆರೆ (Davanagere):  ವಿಧಾನಸಭೆ ಚುನಾವಣೆಗೆ ಮುನ್ನ ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕ ಗಾಂಧಿ ಆರನೇ ಗ್ಯಾರಂಟಿ ಘೋಷಣೆ ಮಾಡಿದ್ದರು. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ವೇತನವನ್ನು ಈ ಬಜೆಟ್ ನಲ್ಲಿ ಕಾಣಿಸಬೇಕಾಗಿತ್ತು. ಆದ್ರೆ, ಯಾಕೆ ಕಾಣಿಸಿಲ್ಲ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ಶಿವನಗೌಡ ಟಿ. ಪಾಟೀಲ್ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

Santhebennur Pushkarini: ಪುಷ್ಕರಣೆಯ ಸೊಬಗು ನೋಡಿ ಬನ್ನಿ: ಪಿಯು, ಡಿಗ್ರಿ ಕಾಲೇಜು ಹುಡುಗಿಯರು ಹೆಚ್ಚಾಗಿ ಬರಲು ಕಾರಣವೇನು ಗೊತ್ತಾ…?

ಸಿದ್ದರಾಮಯ್ಯರು ಮಂಡಿಸಿದ ಬಜೆಟ್ ನಲ್ಲಿ ಹೊಸ ಯೋಜನೆಗಳೇನೂ ಇಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದ ಹಲವು ಯೋಜನೆಗಳಿಗೆ ಕೊಕ್ಕೆ ಹಾಕಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡಿರುವುದು ಸ್ಪಷ್ಟವಾಗಿದೆ.
ಬಜೆಟ್ ನಲ್ಲಿ ಈ ಬಗ್ಗೆ ಘೋಷಿಸಿದ್ದಾರೆ. ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಕೈ ಬಿಟ್ಟಿದ್ದಾರೆ. ಈ ಮೂಲಕ ಬಿಜೆಪಿಯ ಜನಪ್ರಿಯ ಯೋಜನೆಗಳನ್ನು
ಹಳ್ಳ ಹಿಡಿಸುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಇನ್ನು ನಿವೃತ್ತಿ ಆದವರಿಗೆ ಒಂದು ಲಕ್ಷ ಪರಿಹಾರ ಹಾಗೂ ಪೆನ್ಷನ್ ನೀಡ್ಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಮನೆ ಹಾಗು ಆರೋಗ್ಯ ಭದ್ರತೆ ಜಾರಿ ಮಾಡ್ಬೇಕಾಗಿತ್ತು. ಆದ್ರೆ, ಈ ಕೆಲಸ ಬಜೆಟ್ ನಲ್ಲಿ ಆಗಿಲ್ಲ ಎಂದು
ಹೇಳಿದ್ದಾರೆ.

ಶಿಕ್ಷಣ ,ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಅಗತ್ಯವನ್ನು ನೀಡಿಲ್ಲ. ಸಿದ್ದರಾಮಯ್ಯನವರು ತಮ್ಮ ಬಜೆಟ್ ನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ದೊಡ್ಡಮಟ್ಟದ ಒತ್ತು ನೀಡ್ಬೇಕಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರಿಂದ ಒಳ್ಳೆ ಪ್ರಜೆಗಳನ್ನು
ಹಾಗೂ ದೇಶವನ್ನು ನಿರ್ಮಾಣ ಮಾಡಬಹುದು. ಸೈನ್ಸ್ ಟೆಕ್ನಾಲಜಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶ ನೀಡಲಾಗುತ್ತದೆ. ‌ಇದಕ್ಕೆ ಹೆಚ್ಚು ಒತ್ತು ನೀಡಿದ್ರೆ ಕರ್ನಾಟಕವನ್ನು ಉದ್ಯಮ ಸ್ನೇಹಿಯಾಗಿ ಮಾಡ್ಬಹುದಾಗಿತ್ತು. ಈ ಕೆಲಸವೂ ಆಗಿಲ್ಲ ಎಂದಿದ್ದಾರೆ.

ಇನ್ನು ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಸರಿಯಾಗಿ ಸಿಗ್ತಿಲ್ಲ, ಅದರ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಜೊತೆಗೆ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಬಕಾರಿ ಸುಂಕ ಶೇಕಡಾ 20ರಷ್ಟು ಹೆಚ್ಚಳ
ಮಾಡುವ ಮೂಲಕ ಜನರ ಮೇಲೆ ತೆರಿಗೆ ಹೇರಲು ಹೊರಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜನರ ಮೇಲೆ ತೆರಿಗೆ ಹೊರೆ ಹೊರಿಸಲು ಮುಂದಾಗಿದ್ದಾರೆ. ಹಾಗಾಗಿ, ಇದೊಂದು ತೆರಿಗೆ ಭಾರದ ಆಯವ್ಯಯ ಎಂದು ಹೇಳಿದ್ದಾರೆ.

ಇನ್ನು ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿಲ್ಲ. ಈ ಮೂಲಕ ಕಾಂಗ್ರೆಸ್ ಯುವ ನಾಯಕಿಯ ಭರವಸೆ ನೀಡಿದ್ದರೂ ಈಡೇರಿಸಲು ಮನಸ್ಸು ಮಾಡಿಲ್ಲ. ಈ ಮೂಲಕ ಚುನಾವಣೆಗೆ ಮುನ್ನ ನೀಡಿದ್ದ ಭರವಸೆ ಈಡೇರಿಸಲು ಸರ್ಕಾರ ಹೆಣಗಾಡುತ್ತಿರುವುದು ಈ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ.

Davanagere Suddi,

Davanagere Updates, Davanagere Update News, Davanagere Bjp Youth Leader

Davanagere Shivanagowda T. Patil, Davanagere Budget Reaction

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment