ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಂಗಳೂರು: ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

On: July 6, 2024 2:31 PM
Follow Us:
---Advertisement---

ಮಂಗಳೂರು: ಧರ್ಮದೈವ ಪ್ರೊಡಕ್ಷನ್‌ ಲಾಂಛನದಲ್ಲಿ ನಿತಿನ್‌ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಬಿಳಿಯಾರು ರಾಕೇಶ್‌ ಭೋಜರಾಜ ಶೆಟ್ಟಿ ಅವರ ನಿರ್ಮಾಣದಲ್ಲಿ ತಯಾರಾದ “ಧರ್ಮದೈವ’ ತುಳು ಸಿನೆಮಾ ಕರಾವಳಿಯಾದ್ಯಂತ ಶುಕ್ರವಾರ ತೆರೆಕಂಡಿತು.

ಮಂಗಳೂರಿನ ರೂಪವಾಣಿ, ಭಾರತ್‌ ಸಿನೆಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಸುರತ್ಕಲ್‌ನ ಸಿನೆಗ್ಯಾಲಕ್ಸಿ, ನಟರಾಜ್‌, ಪಡುಬಿದ್ರಿಯ ಭಾರತ್‌ ಸಿನೆಮಾಸ್‌, ಉಡುಪಿಯ ಕಲ್ಪನ, ಭಾರತ್‌ ಸಿನೆಮಾಸ್‌, ಮಣಿಪಾಲದ ಐನಾಕ್ಸ್‌, ಭಾರತ್‌ ಸಿನೆಮಾಸ್‌, ಕಾರ್ಕಳದ ಪ್ಲಾನೆಟ್‌, ರಾಧಿ ಕಾ, ಪುತ್ತೂರಿನ ಭಾರತ್‌ ಸಿನೆಮಾಸ್‌, ಬೆಳ್ತಂಗಡಿಯ ಭಾರತ್‌ ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಯಾಗಿದೆ.

ಮೊದಲ ದಿನವೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಮಂಗಳೂರಿನ ಭಾರತ್‌ ಸಿನೆಮಾಸ್‌ನಲ್ಲಿ ಸಿನೆಮಾ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ರಂಗಕರ್ಮಿ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿ, “ಧರ್ಮದೈವ ಈಗಾಗಲೇ ದೇಶ ವಿದೇಶಗಳಲ್ಲಿ ಪ್ರೀಮಿಯರ್‌ ಶೋ ಪ್ರದರ್ಶನ ಕಂಡಿದೆ. ಎಲ್ಲರೂ ಸಿನೆಮಾ ನೋಡಿ ಆಶೀರ್ವದಿಸಿ’ ಎಂದರು. ಮುಂಬಯಿಯ ಹೇರಂಭ ಇಂಡಸ್ಟ್ರಿಸ್‌ನ ಸಿಎಂಡಿ ಕನ್ಯಾನ ಕೂಳೂರು ಸದಾಶಿವ ಶೆಟ್ಟಿ ಮಾತನಾಡಿ, “ಧರ್ಮದೈವ ತುಳುನಾಡಿನ ಕಾರಣಿಕ ಶಕ್ತಿಗಳ ಕುರಿತಾದ ಸಿನೆಮಾ ಆಗಿದ್ದು, ಇದು ಗೆಲ್ಲಲು ಪ್ರೇಕ್ಷಕರ ಬೆಂಬಲ ಬೇಕು ಎಂದರು. ದೇವದಾಸ್‌ ಕಾಪಿಕಾಡ್‌ ಮಾತನಾಡಿ, ಧರ್ಮದೈವ ಸಿನೆಮಾ ತುಳುನಾಡಿನ ದೈವ ಗಳ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಸಿನೆಮಾ ಎಂದವರು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಉದ್ಯಮಿ ಕೆ.ಕೆ ಶೆಟ್ಟಿ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್‌. ಧನರಾಜ್‌, ಪ್ರಮುಖರಾದ ಪ್ರಕಾಶ್‌ ಪಾಂಡೇಶ್ವರ್‌, ಸ್ವರಾಜ್‌ ಶೆಟ್ಟಿ, ರಮೇಶ್‌ ರೈ ಕುಕ್ಕುವಳ್ಳಿ, ಚೇತನ್‌ ರೈ ಮಾಣಿ, ಭೋಜರಾಜ್‌ ವಾಮಂಜೂರ್‌, ಮಲ್ಲಿಕಾ ಪಕಳ, ಇಸ್ಮಾಯಿಲ್‌ ಮೂಡುಶೆಡ್ಡೆ, ಪ್ರದೀಪ್‌ ಆಳ್ವ ಕದ್ರಿ, ಭಾಸ್ಕರ್‌ ರೈ ಕುಕ್ಕುವಳ್ಳಿ, ಕೆ.ಕೆ. ಪೇಜಾವರ, ದಯಾನಂದ ಕತ್ತಲ್‌ಸಾರ್‌, ಸುಹಾನ್‌ ಆಳ್ವ, ರೂಪಾ ವರ್ಕಾಡಿ, ಚಂದ್ರಹಾಸ ಆಳ್ವ, ಹೇಮಂತ್‌ ಸುವರ್ಣ, ನಿರ್ಮಾಪಕ ಬಿಳಿಯಾರು ರಾಕೇಶ್‌ ಭೋಜರಾಜ ಶೆಟ್ಟಿ, ನಿರ್ದೇಶಕ ನಿತಿನ್‌ ರೈ ಕುಕ್ಕವಳ್ಳಿ ನುಳಿಯಾಲು ಮತ್ತಿತರರು ಉಪಸ್ಥಿತರಿದ್ದರು. ಲಿಖೀತ್‌ ರೈ ನಿರೂಪಿಸಿದರು.

Join WhatsApp

Join Now

Join Telegram

Join Now

Leave a Comment