ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಂದು ಭಾರತ-ಜಿಂಬಾಬ್ವೆ ಮೊದಲ ಟಿ20 ಪಂದ್ಯ

On: July 6, 2024 11:21 AM
Follow Us:
---Advertisement---

ಹರಾರೆ: ಭಾರತ ಮತ್ತು ಜಿಂಬಾಬ್ವೆ(Zimbabwe vs India) ನಡುವಣ 5 ಪಂದ್ಯಗಳ ಟಿ20 ಸರಣಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಇತ್ತಂಡಗಳ(IND vs ZIM) ಮೊದಲ ಪಂದ್ಯ ಇಂದು(ಶನಿವಾರ) ಹರಾರೆ(Harare) ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 4.30ಕ್ಕೆ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ಪ್ರಸಾರಗೊಳ್ಳಲಿದೆ.

ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 2 ಪಂದ್ಯ ಗೆದ್ದಿದೆ. ಕೊನೆಯ ಬಾರಿ ಇತ್ತಂಡಗಳು ಆಡಿದ್ದು 2022ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ. ಈ ಪಂದ್ಯವನ್ನು ಭಾರತ 71 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಪಿಚ್​ ರಿಪೋರ್ಟ್​

ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​ನಲ್ಲಿ ರನ್​ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಹೇಳಿ ಕೇಳಿ ಭಾರತ ತಂಡದಲ್ಲಿ ಐಪಿಎಲ್​ ಸ್ಟಾರ್​ಗಳೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಹೊಡಿಬಡಿ ಆಟ ಇವರಿಗೆ ಹೊಸತೇನಲ್ಲ. ಅತ್ತ ಜಿಂಬಾಬ್ಬೆ ಕೂಡ ಯುವ ಪಡೆಯನ್ನೇ ನೆಚ್ಚಿಕೊಂಡಿದೆ. ಒಟ್ಟಾರೆ ಬೌಲರ್​ಗಳು ಇಂದು ಶಕ್ತಿ ಮೀರಿ ಪ್ರದರ್ಶನ ತೋರುವ ಸ್ಥಿತಿ ಎದುರಾಗಬಹುದು.

ಈಗಾಗಲೇ ಹಿರಿಯ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯಲಿದೆ. ಇದು ಟಿ20 ಸ್ವರೂಪದಲ್ಲಿಯೇ ನಡೆಯಲಿದೆ. ಜತೆಗೆ 2026ರಲ್ಲಿ ಟಿ20 ವಿಶ್ವಕಪ್​ ಕೂಡ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ರಚಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್​ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಹೀಗಾಗಿ ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ತೋರಬೇಕು. ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದೆ. ಆವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಹರ್ಷಿತ್‌ ರಾಣಾ ಅವರಿಗೆ ಇದೊಂದು ಅಗ್ನಿಪರೀಕ್ಷೆ.

ಶುಭಮನ್​ ಗಿಲ್​ ಈ ಸರಣಿಯಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಮಳೆಯನ್ನೇ ಸುರಿಸಿದ್ದ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಪ್ರದರ್ಶನದ ಮೇಕೆಯೂ ಬಹಳ ನಿರೀಕ್ಷೆ ಇದೆ. ಒಟ್ಟಾರೆ ಈ ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನದಲ್ಲಿ ಅವರ ಮುಂದಿನ ಕ್ರಿಕೆಟ್​ ಭವಿಷ್ಯ ಅಡಗಿದೆ ಎನ್ನಲಡ್ಡಿಯಿಲ್ಲ. ಗಿಲ್​ ಜತೆ ಅಭಿಷೇಕ್​ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನು ಪಂದ್ಯಕ್ಕೂ ಮುನ್ನವೇ ನಾಯಕ ಗಿಲ್​ ಖಚಿತಪಡಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಭಾರತ ಅಜೇಯವಲ್ಲ. 2 ಸೋಲು ಕೂಡ ಕಂಡಿದೆ. ಅನುಭವಿ ಆಲ್​ರೌಂಡರ್​ ಹಾಗೂ ನಾಯಕನಾಗಿರುವ ಸಿಕಂದರ್​ ರಾಜಾ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜತೆಗೆ ತಂಡದ ನೂತನ ಕೋಚ್​ ಆಗಿರುವ ಜಸ್ಟಿನ್‌ ಸ್ಯಾಮ್ಸನ್‌ ಅವರ ಮಾರ್ಗದರ್ಶನ ಕೂಡ ತಂಡಕ್ಕೆ ನೆರವಾಗಬಹುದು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು.

Join WhatsApp

Join Now

Join Telegram

Join Now

Leave a Comment