ದಾವಣಗೆರೆ: ಜಿಲ್ಲೆಯಲ್ಲಿ ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮುಂಗಾರು ಹಂಗಾಮು ಆರಂಭಗೊಳ್ಳಲಿದ್ದು, ಆನಂತರ ಮಾರಾಟಗಾರರು ಕೆಲಸದ ಒತ್ತಡದಲ್ಲಿ ತೊಡಗಿಬಿಡುತ್ತಾರೆ. ಈ ಕಾರಣಕ್ಕಾಗಿ ಈಗ ಅವರಿಗೆ ಬಿಡುವಿರುವ ಕಾರಣ ಎಲ್ಲರೂ ಒಂದೆಡೆ ಸೇರಿ ಪರಸ್ಪರ ಬೆರೆಯಲಿ ಎನ್ನುವ ಉದ್ದೇಶ ಈ ಪಂದ್ಯಾವಳಿಯದ್ದು. ಎಲ್ಲರೂ ಉತ್ತಮವಾಗಿ ತಮ್ಮ ಪ್ರದರ್ಶನ ನೀಡಬೇಕು ಎಂದು ಜಿಲ್ಲಾ ಬಿತ್ತನೆ ಬೀಜ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ್ (LOKIKERE NAGARAJ) ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ (DAVANAGERE) ಜಿಲ್ಲಾ ಬಿತ್ತನೆ ಬೀಜ ಮಾರಾಟಗಾರರ ಸಂಘದಿಂದ ಏರ್ಪಡಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆ, ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಇಲ್ಲಿನ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ಇನ್ನಿತರೆ ವ್ಯವಸಾಯಕ್ಕೆ ಬೇಕಾಗುವಂತಹ ಪರಿಕರಗಳನ್ನು ಪೂರೈಸಲೆಂದೇ ಮಾರಾಟಗಾರರು ಸುಮಾರು 800ಕ್ಕೂ ಹೆಚ್ಚು ಜನರು ಇದ್ದು ಅವರೆಲ್ಲರಿಗೂ ಪ್ರೋತ್ಸಾಹ ನೀಡಲೆಂದು ಈ ಟೂರ್ನಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸದಾ ದುಡಿಮೆ ಮೇಲೆ ತೊಡಗುವ ಬಿತ್ತನೆ ಬೀಜ ಮಾರಾಟಗಾರರೆಲ್ಲರಿಗೂ ಒಂದು ಬಿಡುವು ಸಿಗಲಿ, ಪ್ರೋತ್ಸಾಹ ಸಿಗಲಿ ಎನ್ನುವ ಉದ್ದೇಶದಿಂದ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು ಇನ್ನು ಮುಂದೆ ಪ್ರತಿ ವರ್ಷ ಕೂಡ ಇಂತಹ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತೇವೆ ಎಂದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿತ್ತನೆ ಬೀಜ ಮಾರಾಟಗಾರರಿಗೆ ಪ್ರಥಮವಾಗಿ ದಾವಣಗೆರೆಯಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ. ಬಿತ್ತನೆ ಬೀಜ ಕಂಪನಿಯ ಸಿಬ್ಬಂದಿ, ಮಾರಾಟಗಾರರು ಮತ್ತು ಸಿಬ್ಬಂದಿ ಈ ಟೂರ್ನಿಯಲ್ಲಿ
ಪಾಲ್ಗೊಳ್ಳುತ್ತಿದ್ದು, 120 ಜನರು ಪಾಲ್ಗೊಂಡಿದ್ದಾರೆ. 12 ತಂಡಗಳು ಆಡಲಿವೆ ಎಂದ ಅವರು ಇನ್ನು ಮುಂಬರುವ ದಿನಗಳಲ್ಲಿ ನಿರಂತರವಾಗಿ ಕ್ರಿಕೆಟ್ ಟೂರ್ನಿಯನ್ನು ನಡೆಸುತ್ತಾ ಹೋಗಲಾಗುವುದು ಎಂದು ತಿಳಿಸಿದರು.
ಈ ವೇಳೆ ಪ್ರಮೋದ್, ಕೃಷ್ಣ ಮೂರ್ತಿ, ಪ್ರತೀಕ್, ಕಿರಣ್ ಇತರರು ಇದ್ದರು.