ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ: ರಣರೋಚಕ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

On: June 29, 2024 11:33 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-06-2024

ಬ್ರಿಜ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ರಣ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಗೆದ್ದು ರೋಹಿತ್ ಪಡೆ ಗೆಲುವಿನ ನಗೆ ಬೀರಿತು.

ಜಸ್ಪಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ. ಹರ್ಷದೀಪ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಸೋಲೊಪ್ಪಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತಂಡವು 20 ಓವರ್ ಗಳಲ್ಲಿ
176 ರನ್ ಗಳ ಸವಾಲಿನ ಮೊತ್ತ ಪೇರಿಸಿತು. 177 ರನ್ ಗಳ ಬೃಹತ್ ಮೊತ್ತ ಪೇರಿಸಿದ ದಕ್ಷಿಣ ಆಫ್ರಿಕಾವು ರೋಚಕ ಸೋಲು ಕಂಡಿತು. ಈ ಮೂಲಕ 2024ರ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ರೋಹಿತ್ ಪಡೆ
ಗೆಲುವಿನ ನಗೆ ಬೀರಿತು. ವಿರಾಟ್ ಕೋಹ್ಲಿ ಆಕರ್ಷಕ ಅರ್ಧಶತಕ ಹಾಗೂ ಅಕ್ಷರ್ ಪಟೇಲ್ ಬಿರುಸಿನ ಬ್ಯಾಟಿಂಗ್ ನಿಂದ ಉತ್ತಮ ಮೊತ್ತ ಕಲೆ ಹಾಕಿತು.

ಭಾರತವು ದೊಡ್ಡ ಯಶಸ್ಸನ್ನು ಸಾಧಿಸಿದೆ. 16ನೇ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಔಟಾದರು. ಹಾರ್ದಿಕ್ ಪಾಂಡ್ಯ ಕ್ಲಾಸೆನ್ ವಿಕೆಟ್ ಪಡೆದರು. 16ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಸ್ಕೋರ್ 152 ರನ್ ಗೆ 5 ವಿಕೆಟ್ ಕಳೆದುಕೊಂಡಿತು. ದಕ್ಷಿಣ ಆಫ್ರಿಕಾ ಅರ್ಷದೀಪ್ ಸಿಂಗ್ ಅವರು ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಡಿ ಕಾಕ್ 31 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಔಟಾದರು. ಸದ್ಯ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾರೆ. 13 ಓವರ್‌ಗಳ ನಂತರ ದಕ್ಷಿಣ ಆಫ್ರಿಕಾದ ಸ್ಕೋರ್ ನಾಲ್ಕು ವಿಕೆಟ್‌ಗೆ 109 ರನ್ ಆಗಿದೆ. ಅವರಿಗೆ 42 ಎಸೆತಗಳಲ್ಲಿ 68 ರನ್‌ಗಳ ಅಗತ್ಯವಿತ್ತು.

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 177 ರನ್‌ಗಳ ಗುರಿಯನ್ನು ನೀಡಿದೆ. 11 ಓವರ್‌ಗಳ ನಂತರ ದಕ್ಷಿಣ ಆಫ್ರಿಕಾ ಸ್ಕೋರ್ 93/3. ಗೆಲುವಿಗೆ ಇನ್ನೂ 84 ರನ್‌ಗಳ ಅಗತ್ಯವಿತ್ತು. ಆಫ್ರಿಕಾ ಮೂರನೇ ವಿಕೆಟ್ ಪತನ ಒಂಬತ್ತನೇ ಓವರ್‌ನಲ್ಲಿ. ಅಕ್ಷರ್ ಪಟೇಲ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಬೌಲ್ಡ್ ಮಾಡಿದರು. 21 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಮೂರನೇ ವಿಕೆಟ್‌ಗೆ ಡಿ ಕಾಕ್ ಜೊತೆ ಸ್ಟಬ್ಸ್ 58 ರನ್‌ಗಳ ಜೊತೆಯಾಟ ನಡೆಸಿದರು. ಹೆನ್ರಿಕ್ ಕ್ಲಾಸೆನ್ ಐದನೇ ಕ್ರಮಾಂಕದಲ್ಲಿ
ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲ ನೀಡಲು ಡಿ ಕಾಕ್ ಕ್ರೀಸ್‌ನಲ್ಲಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment