SUDDIKSHANA KANNADA NEWS/ DAVANAGERE/ DATE:22-06-2023
ದಾವಣಗೆರೆ(Davanagere) : ಇದು ನನ್ನ ಕೊನೆಯ ಚುನಾವಣೆ ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿ ಜಯಭೇರಿ ಬಾರಿಸಿದ್ದ ಜಿ. ಎಂ. ಸಿದ್ದೇಶ್ವರ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತ. ಮುಂದಿನ ಬಾರಿಯೂ ಅವರು ದಾವಣಗೆರೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸ್ವತಃ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮುನ್ಸೂಚನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ಮೋದಿ, ಬಿಎಸ್ ವೈ ಗುಣಗಾನ.. ಸೋಲಿನ ಆತ್ಮಾವಲೋಕನ… ಕಾರ್ಯಕರ್ತರ ಬಳಿ ನಾಯಕರು ಪದೇ ಪದೇ ಆ ವಿಚಾರ ಪ್ರಸ್ತಾಪಿಸಿದ್ದೇಕೆ…?
ದಾವಣಗೆರೆ(Davanagere) ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ನಮ್ಮೆಲ್ಲರಿಗೂ ಪ್ರತಿಷ್ಠೆಯ ಕಣ. ದಾವಣಗೆರೆ (Davanagere)ಯಿಂದ ಸ್ಪರ್ಧೆ ಮಾಡಲಿರುವ ಸಂಸದ ಜಿ. ಎಂ. ಸಿದ್ದೇಶ್ವರ್ ಅವರನ್ನು ಗೆಲ್ಲಿಸಿಕೊಂಡು ಬರುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕಳೆದ ಕೆಲ ದಿನಗಳಿಂದ ಬಿಜೆಪಿ ಪಕ್ಷದ 13 ಹಿರಿಯ ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ಹರಿದಾಡಿತ್ತು. ಇಂದು ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿಯೂ ಗೆದ್ದು ಸಿದ್ದೇಶ್ವರ್ ಸಂಸದರಾಗಲಿರುವ ಎಂಬ ಮಾತು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗಳೂರಿನಿಂದ ಎಸ್. ವಿ. ರಾಮಚಂದ್ರ ಹಾಗೂ ಹೊನ್ನಾಳಿಯಿಂದ ಎಂ. ಪಿ. ರೇಣುಕಾಚಾರ್ಯರನ್ನು ಭರ್ಜರಿ ಅಂತರದಿಂದ ಜಯಗಳಿಸುವಂತೆ ಮಾಡುವಂತೆ ಕಾರ್ಯಕರ್ತರಿಗೆ ಟಿಕೆಟ್ ಘೋಷಣೆಯಾಗುವ ಮುನ್ನವೇ ಕರೆ ನೀಡಿದ್ದರು. ಇನ್ನು ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಆದರೂ ಯಡಿಯೂರಪ್ಪರು ಈ ಮಾತು ಆಡಿರುವುದು ಈಗ ಚರ್ಚೆಗೂ ಗ್ರಾಸವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸ್ವತಃ ಸಿದ್ದೇಶ್ವರ್ ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ನನ್ನಲ್ಲಿ ಇನ್ನೂ ಶಕ್ತಿ ಇದೆ, ಸಮರ್ಥನಿದ್ದೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದರು. ಇದರಿಂದಾಗಿ ಸಿದ್ದೇಶ್ವರ್ ಅವರ ಹೆಸರೇ ಮುನ್ನೆಲೆಗೆ ಬಂದಿದೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಹಲವು ಬಾರಿ ಮತ್ತೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸಿದ್ದೇಶ್ವರ್ ಹೇಳಿದ್ದರೂ ಕಳೆದ ಕೆಲ ದಿನಗಳ ಹಿಂದೆ ನಡೆದ ಬೆಳವಣಿಗೆಗಳು ಮತ್ತೆ ಸ್ಪರ್ಧೆ ಮಾಡಲು ಮನಸ್ಸು ಮಾಡುವಂತೆ ಮಾಡಿದೆ ಎಂದು ಬಿಜೆಪಿಯ ಆಪ್ತ ವಲಯಗಳು ತಿಳಿಸಿವೆ.
ಇದುವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಜಿ. ಎಂ. ಸಿದ್ದೇಶ್ವರ್ ನಾಲ್ಕು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದಾರೆ. 2004ರಿಂದ ಇಲ್ಲಿಯವರೆಗೆ ಸ್ಪರ್ಧಿಸಿದ ನಾಲ್ಕು ಲೋಕಸಭಾ ಕದನದಲ್ಲಿ ವಿಜಯದ ನಗೆ ಬೀರಿದ್ದಾರೆ.
ಸುಮಾರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಸಿದ್ದೇಶ್ವರ್ ಕುಟುಂಬವೇ ಗೆದ್ದುಕೊಂಡು ಬಂದಿದೆ. ಮಲ್ಲಿಕಾರ್ಜುನಪ್ಪರು ಎರಡು ಬಾರಿ ಸಂಸದರಾಗಿದ್ದರು. ಆಮೇಲೆ ವಿಜಯಪತಾಕೆ ಹಾರಿಸಿದ್ದು ಇದೇ ಸಿದ್ದೇಶ್ವರ್.
ದಾವಣಗೆರೆ (Davanagere) ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಿದ್ದೇಶ್ವರ್ ಹೆಸರು ಚಿರಪರಿಚಿತ. ಎಲ್ಲಾ ಮುಖಂಡರು, ಕಾರ್ಯಕರ್ತರ ಸಂಪರ್ಕದಲ್ಲಿರುವ ರಾಜಕಾರಣಿ. ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಪಾದರಸದಂತೆ ಓಡಾಡುತ್ತಾರೆ. ಎಲ್ಲರ ಸಂಪರ್ಕ ಹೊಂದಿರುವ ಜೊತೆಗೆ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿರುವುದು ಸಿದ್ದೇಶ್ವರ್ ಅವರ ಶಕ್ತಿಯ ಗುಟ್ಟು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಗೆದ್ದಿರುವುದು ಕೇವಲ ಹರಿಹರ ಮಾತ್ರ. ದಾವಣಗೆರೆ (Davanagere) ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು, ಮಾಯಕೊಂಡ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಗೆದ್ದು ಕಿಲಕಿಲ ಎಂದಿದೆ. ಹಾಗಾಗಿ ಕಾಂಗ್ರೆಸ್ ಶಕ್ತಿಶಾಲಿಯಾಗಿರುವ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡುವ ಸಾಮರ್ಥ್ಯ ಇರುವುದು ಸಿದ್ದೇಶ್ವರ್ ಅವರಿಗೆ ಮಾತ್ರ. ಹಾಗಾಗಿ, ಪಕ್ಷದ ವರಿಷ್ಠರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಿದ ಮಾನದಂಡ ಅನುಸರಿಸಿದರೆ ಹೊಡೆತ ಬೀಳುತ್ತದೆ. ಹಿರಿಯರನ್ನು ಕಡೆಗಣನೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಹಾಗಾಗಿ, ಗೆಲ್ಲುವ ಸಾಮರ್ಥ್ಯವಿರುವ, ಅನುಭವಿ, ಆರ್ಥಿಕವಾಗಿ ಸಬಲರಾಗಿರುವ, ಪ್ರಬಲ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ದೆಹಲಿಯ ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಬಿ. ಎಸ್. ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಸಿದ್ದೇಶ್ವರ್ ಅವರ ಪರ ಒಲವು ಹೊಂದಿದ್ದಾರೆ. ಹೊಸಬರಿಗೆ ಟಿಕೆಟ್ ಕೊಟ್ಟರೆ, ಇಡೀ ಜಿಲ್ಲೆಯ ಚಿರಪರಿಚಿತ ಹೆಸರಾಗಿರಬೇಕು. ಜನರೊಟ್ಟಿಗೆ ಬಾಂಧವ್ಯ ಹೊಂದಿರಬೇಕು. ಎಲ್ಲಾ ಹಳ್ಳಿಗಳಿಗೂ ಹೋಗಿ ಬಂದಿರಬೇಕು. ಇಂಥ ನಾಯಕರು ದಾವಣಗೆರೆಯಲ್ಲಿ ಸಿಗುವುದು ಕಡಿಮೆ. 75 ವರ್ಷ ಇನ್ನು ಆಗದೇ ಇರುವುದರಿಂದ ಸಿದ್ದೇಶ್ವರ್ ಅವರಿಗೆ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದೆ.
Davanagere Latest News, Davanagere News Update, Davanagere G. M. Siddeshwar, Davanagere Mp Election Ticket, ದಾವಣಗೆರೆ ಎಂಪಿ ಟಿಕೆಟ್ ಸಿದ್ದೇಶ್ವರ್ ಗೆ?, ದಾವಣಗೆರೆಯಲ್ಲಿ ಬಿ. ಎಸ್. ಯಡಿಯೂರಪ್ಪ ಸೂಚನೆ, ದಾವಣಗೆರೆ ಸುದ್ದಿ, ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ
Comments 1