SUDDIKSHANA KANNADA NEWS
DAVANAGERE
DATE_19_03_2023
ದಾವಣಗೆರೆ: ಚನ್ನಗಿರಿ (CHANNAGIRI) ಬಿಜೆಪಿ (BJP) ಯಲ್ಲಿ ಈಗ ಬಣ ಬಡಿದಾಟ ಶುರುವಾಗಿದೆ. ಬೆಂಗಳೂರಿನಿಂದ ಚನ್ನಗಿರಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MADAL VIRUPAKSHAPPA) ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಈ ಕಾದಾಟ ಆರಂಭಗೊಂಡಿದೆ. ಲೋಕಾಯುಕ್ತ ವಿಚಾರಣೆಗೆ ಹಾಜರಾಗಿ ವಾಪಸ್ ಆದ ಮಾಡಾಳ್ ವಿರೂಪಾಕ್ಷಪ್ಪ ಅವರು ಕಿತ್ತು ಹಾಕಬೇಕಿತ್ತು ಎಂದಿದ್ದಾರೆ. ಇದಕ್ಕೆ ಆಗಲೇ ಎಲ್ಲಾ ಫ್ಲೆಕ್ಸ್ (FLEX) ಕಿತ್ತು ಹಾಕಿದ್ದೇವೆ ಎಂದು ಕಾರ್ಯಕರ್ತನೊಬ್ಬ ಹೇಳುತ್ತಿರುವ ವಿಡಿಯೋ VEDEO) ವೈರಲ್ (VIRAL) ಆಗಿದೆ.
ಲೋಕಾಯುಕ್ತ ಬಲೆಗೆ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ (PRASHANTH) ಮಾಡಾಳ್ ಸಿಕ್ಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿತ್ತು. ಕಂತೆ ಕಂತೆ ಹಣ ಸಿಕ್ಕ ಕಾರಣಕ್ಕೆ ಚನ್ನಗಿರಿ ಕ್ಷೇತ್ರ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸುದ್ದಿ ಮಾಡಿತ್ತು. ಆದ್ರೆ, ಈಗ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಲ್ಲಿಕಾರ್ಜುನ್ ವಿಧಾನಸಭಾ ಚುನಾವಣೆಯ ಚನ್ನಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿ. ಶನಿವಾರವಷ್ಟೇ ಭರ್ಜರಿ ರೋಡ್ ಶೋ ನಡೆಸಿದ್ದ ಮಲ್ಲಿಕಾರ್ಜುನ್ (MALLIKARJUN) ಶಕ್ತಿ ಪ್ರದರ್ಶನ ನಡೆಸಿದ್ದರು.
ಚನ್ನಗಿರಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ (BJP SANKALPA YATHRE) ಯ ಪ್ರಯುಕ್ತ ಬ್ಯಾನರ್ ಗಳನ್ನು ಹಾಕಲಾಗಿತ್ತು. ಲಂಚ ಪ್ರಕರಣದ ಬೆಳಕಿಗೆ ಬಂದ ಬಳಿಕ ಚನ್ನಗಿರಿಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕನಾಗಿದ್ದ ಮಾಡಾಳ್ ವಿರೂಪಾಕ್ಷಪ್ಪರ ಕುಟುಂಬಕ್ಕೆ ಈ ಬಾರಿ ಟಿಕೆಟ್ ಸಿಗೋಲ್ಲ ಎಂಬ ಮಾತು ಕೇಳಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಬಿಜೆಪಿ ನಾಯಕರು ಈ ಬಗ್ಗೆ ಸ್ಪಷ್ಟವಾಗಿ ಎಲ್ಲಿಯೂ ಹೇಳಿರಲಿಲ್ಲ. ಹಾಗಾಗಿ, ಶಿವಕುಮಾರ್ (SHIVAKUMAR) ಅವರು ಬಿಜೆಪಿಯ ಹಿರಿಯ ನಾಯಕರು (LEADER) . ಇವರ ಹೆಸರು ಮುಂಚೂಣಿಗೆ ಬಂದಿತ್ತು. ವರಿಷ್ಠರ ಆದೇಶದ ಮೇಲೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು. ಆದ್ರೆ, ಚನ್ನಗಿರಿಯಲ್ಲಿ ಅಳವಡಿಸಲಾಗಿದ್ದ ಶಿವಕುಮಾರ್ ಅವರಭಾವಚಿತ್ರ ಹರಿದು ಹಾಕಲಾಗಿದೆ. ಇದು ಈಗ ವಿವಾದಕ್ಕೂ ಕಾರಣವಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ (TICKETE) ಖಚಿತ ಎಂಬಂತ ವಾತಾವರಣ ನಿರ್ಮಾಣವಾಗಿತ್ತು. ಪ್ರಶಾಂತ್ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆಯಾದ ಬಳಿಕ ಎಲ್ಲಾ ಲೆಕ್ಕಾಚಾರವೂ ಉಲ್ಟಾಪಲ್ಟಾ ಆಗಿತ್ತು. ಮಾಡಾಳ್ ಬೆಂಬಲಿಗರು ತನ್ನ ನಾಯಕನ ಪರ ನಿಂತಿದ್ದಾರೆ. ಹೋದಲೆಲ್ಲಾ ನಾವಿದ್ದೇವೆ, ನೀವು ನಮಗೆ ಬೇಕು. ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಿವಕುಮಾರ್ ಅವರು ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಇದು ಮಾಡಾಳ್ ಕುಟುಂಬಕ್ಕೆ ಇರಿಸು ಮುರಿಸು ತಂದೊಡ್ಡಿದೆ.
ಚನ್ನಗಿರಿಯ ಐಬಿ ಸರ್ಕಲ್ ಬಳಿ ಫ್ಲೆಕ್ಸ್ ಹರಿದು ಹಾಕಿದ್ದರೂ ಸುಮ್ಮನಿದ್ದ ಶಿವಕುಮಾರ್ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಯಾವಾಗ ಮಾಡಾಳ್ ವಿರೂಪಾಕ್ಷಪ್ಪರು ಫ್ಲೆಕ್ಸ್ ಕಿತ್ತು ಹಾಕಿದರಾ ಎಂಬ ವಿಡಿಯೋ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದು ಬಿಜೆಪಿ ಪರ ಘೋಷಣೆ ಹಾಕಿದ್ದಾರೆ. ನಾವು ಶಿವಕುಮಾರ್ ರ ಬೆಂಬಲಕ್ಕೆ ನಿಲ್ಲುತ್ತೇವೆ. ಭ್ರಷ್ಟರಿಗೆ ಮಣೆ ಹಾಕುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ. ಪ್ರಾಮಾಣಿಕ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ಮಾಡಾಳ್ ವಿರೂಪಾಕ್ಷಪ್ಪರು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದರೂ ಬಿಜೆಪಿ ನಾಯಕರು ಸ್ಪಷ್ಟವಾಗಿ ಬಹಿರಂಗವಾಗಿ ಏನನ್ನೂ ಹೇಳುತ್ತಿಲ್ಲ. ಒಂದೆಡೆ ಮಾಡಾಳ್ ಕುಟುಂಬಕ್ಕೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ (BJP) ಮೂಲಗಳು ಹೇಳಿದ್ರೆ, ಮಾಡಾಳ್ ವಿರೂಪಾಕ್ಷಪ್ಪರ ಕುಟುಂಬ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮುನ್ನಡೆಯುತ್ತಿದೆ. ಈಗ ಫ್ಲೆಕ್ಸ್ (FLEX) ಹರಿದು ಹಾಕಿರುವುದು ಬಣ ಬಡಿದಾಟಕ್ಕೂ ಕಾರಣವಾಗಿದೆ. ಆರೋಪ – ಪ್ರತ್ಯಾರೋಪವೂ ಜೋರಾಗುತ್ತಿದೆ. ಜಗಳವೂ ನಡೆದಿದೆ. ಮಾಡಾಳ್ ಪುತ್ರ ಮಲ್ಲಿಕಾರ್ಜುನ್ ಪರವೂ ಘೋಷಣೆಗಳು ಕೇಳಿ ಬಂದವು.
ಈ ಬೆಳವಣಿಗೆ ಕುರಿತು ಮಾತನಾಡಿದ ಚನ್ನಗಿರಿಯ ಸಂಭಾವ್ಯ ಅಭ್ಯರ್ಥಿ ಶಿವಕುಮಾರ್, ನಿನ್ನೆ ಮಧ್ಯಾಹ್ನ ಫ್ಲೆಕ್ಸ್, ಬ್ಯಾನರ್ ಹರಿದು ಹಾಕಿದ್ದಾರೆ. ಇದು ಯಾರಿಗೂ ಶ್ರೇಯಸ್ಸು ತರುವಂಥದ್ದಲ್ಲ. ಇದು ಒಳ್ಳೆಯ ವಿಚಾರ ಅಲ್ಲ.
ನಮ್ಮ ಪಾರ್ಟಿಯವರೇ, ನಮ್ಮ ಜನಗಳೇ ನಮ್ಮ ಮೋದಿ ಇರುವಂಥ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತೆ ಮರುಕಳಿಸಬಾರದು. ಚುನಾವಣೆ ಅಂದ ಮೇಲೆ ಆಕಾಂಕ್ಷಿಗಳು ಇರುವುದು
ಸಹಜ. ಇದರಲ್ಲಿ ತಪ್ಪೇನಿಲ್ಲ. ಒಬ್ಬರಿಗೆ ಟಿಕೆಟ್ ಸಿಗುತ್ತೆ. ಎಲ್ಲರೂ ಗೆಲುವಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಇಲ್ಲಿ ಯಾವ ಬಣ ಬಡಿದಾಟವೂ ಶುರುವಾಗಿಲ್ಲ. ಇದೆಲ್ಲಾ ತಾತ್ಕಾಲಿಕ ಮಾತ್ರ. ಬಿಜೆಪಿ (BJP) ಯಲ್ಲಿ ಶಿಸ್ತು ಇದೆ. ಎಲ್ಲರೂ ಇದನ್ನು ಪಾಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಿವಕುಮಾರ್ (SHIVAKUMAR) ಮಾಧ್ಯಮದವರ ಜೊತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.