SUDDIKSHANA KANNADA NEWS/ DAVANAGERE/ DATE:17-06-2023
ದಾವಣಗೆರೆ: 2024ರ ಲೋಕಸಭಾ (Parliamentary) ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದರೆ ನಾನೇ ಸ್ಪರ್ಧೆ ಮಾಡುತ್ತೇನೆ. 2004ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಆಶೀರ್ವಾದದಿಂದಲೇ ಗೆದ್ದು ಬಂದಿರುವೆ. ಮುಂಬರುವ ಚುನಾವಣೆಗೆ ಹಣ ನೀಡಿದರೆ ಪಡೆಯುತ್ತೇನೆ ಎಂದು ಹೇಳುವ ಮೂಲಕ ಸಂಸದ ಜಿ. ಎಂ. ಸಿದ್ದೇಶ್ವರ ಟಾಂಗ್ ನೀಡಿದರು.
ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸ್ಪರ್ಧೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದೆ. ಆದ್ರೆ, ನೀವೇ ಸ್ಪರ್ಧೆ ಮಾಡಬೇಕೆಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ನನಗೆ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದು ತಿಳಿಸಿದರು.
ಶಾಮನೂರು ಶಿವಶಂಕರಪ್ಪರ ಆಶೀರ್ವಾದವಿದೆ:
ಶಾಮನೂರು ಶಿವಶಂಕರಪ್ಪರು ಹಿರಿಯರು. ಅವರು ನನ್ನ ಮಾವ. ಅವರು ಏನೇ ಹೇಳಿದರೂ ನನಗೆ ಆಶೀರ್ವಾದವಿದ್ದಂತೆ. ನನ್ನ ಸೋಲು ಕಾಣಬೇಕೆಂದು ಎಸ್. ಎಸ್. ಹೇಳಿದ್ದಾರೆ. ಹೀಗೆ ಹೇಳಿರುವುದೇ ನನಗೆ ಆಶೀರ್ವಾದ ಇದ್ದಂತೆ. ನಾಲ್ಕು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ. ನನಗೆ ಅವರೇ ಆಶೀರ್ವಾದ ಮಾಡಿದ್ದು, ಮುಂದೆಯೂ ಅವರ ಆಶೀರ್ವಾದ ನನ್ನ ಮೇಲಿರುತ್ತದೆ ಎಂದು ವ್ಯಂಗ್ಯವಾಡಿದರು.
ಎಸ್ ಎಸ್ ಗೆ ಟಾಂಗ್ ಕೊಟ್ಟಿದ್ಹೇಗೆ..?
ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರು ವಯಸ್ಸಿನಲ್ಲಿ ಹಾಗೂ ರಾಜಕಾರಣದಲ್ಲಿ ತುಂಬಾ ಹಿರಿಯರು. ಅವರ ಬಗ್ಗೆ ಬಹಳ ಗೌರವವಿದೆ. 2004ರಿಂದ ನಾವು ಸೋಲುವುದನ್ನು ನೋಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸೋಲುವುದನ್ನು ನೋಡುತ್ತಾರೆ ಎಂದರು.
ಗ್ಯಾರಂಟಿ ಕಾರ್ಡ್ ನಿಂದ ಸೋಲು:
ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಲು ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡ್ ಕಾರಣ. ಜೊತೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟ ಪ್ರಕಟ ತಡವಾಯಿತು. ಬೇಗನೇ ಪ್ರಕಟಿಸಿದ್ದರೆ ನಾವು ಕೂಡ ಜಯಭೇರಿ ಬಾರಿಸುತ್ತಿದ್ದೆವು. ಆದ್ರೆ, ನಮಗೆ ಹಿನ್ನೆಡೆ ಆಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಗಿಫ್ಟ್ ಸೆಂಟರ್ ನಲ್ಲೊಂದು ಸಾಮಾಜಿಕ ಸೇವೆ: 300 ಜನುಮದಿನ ಸಂಭ್ರಮ… ಏನಿದು ಅಂತಾ ಕುತೂಹಲನಾ ಈ ಸ್ಟೋರಿ ಓದಿ ನಿಮ್ಗೆ ಗೊತ್ತಾಗುತ್ತೆ..!
ಶಕ್ತಿಮೀರಿ ಕೆಲಸ ಮಾಡಿದೆವು:
ನಾವೆಲ್ಲಾ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಪ್ರಚಾರಕ್ಕೆ ಎಲ್ಲಾ ಕಡೆ ತೆರಳಿದ್ದೇನೆ. ಮೊದಲಿಗಿಂತ ಹೆಚ್ಚು ಈ ಬಾರಿ ಕೆಲಸ ಮಾಡಿದ್ದೆ. ಆದ್ರೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗೆದ್ದಿದ್ದೇನೆ:
ಜಿಲ್ಲೆಯಲ್ಲಿ ಕಾಂಗ್ರೆಸ್ ನ ಆರು ಶಾಸಕರಿದ್ದಾರೆ. 2013ರಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ತಾ.ಪಂ., ಜಿ.ಪಂ ಹಾಗೂ ಪಾಲಿಕೆ ಸದಸ್ಯರೂ ಇರಲಿಲ್ಲ. ಆಗಲೇ ನಾನು 2014ರ ಲೋಕಸಭಾ ಚುನಾವಣೆಯಲ್ಲಿ 13 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದೆೇನೆ. ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಗೆದ್ದು ಬಂದೆ ಎಂದು ಈಗಲೂ ಹೇಳುತ್ತಾರೆ. ನಮ್ಮ ತಂದೆಯವರಿದ್ದಾಗ ಯಾವ ಹವಾ ಇತ್ತು? ಎಸ್ ಎಸ್ ಅವರನ್ನೇ ಕೇಳಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಯಾವ ಹವಾದಿಂದ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.
ಸೋಲು ಕಂಡಾಗ ಪ್ರತಿಯೊಬ್ಬರೂ ಕಲ್ಲು ಹೊಡೆಯುವುದು ಸಾಮಾನ್ಯ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಲೋಕಸಭೆ (Parliamentary) ಸ್ಪರ್ಧೆಗೆ ಅಸಮರ್ಥನಲ್ಲ:
ಕೆಲ ಪತ್ರಿಕೆಗಳಲ್ಲಿ ನಾನು ಅಸಮರ್ಥ ಎಂಬರ್ಥ ಬರುವ ರೀತಿಯಲ್ಲಿ ಬರೆದಿದ್ದಾರೆ. ಇದು ಸರಿಯಲ್ಲ. ನನಗಿನ್ನೂ 71 ವರ್ಷ. ಆರೋಗ್ಯವಾಗಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಲೋಕಸಭೆ (Parliamentary)ಗೆ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು.
ವಿದ್ಯುತ್ ದರ ಏರಿಕೆ ಹೊರೆ:
ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಜನತೆಗೆ ತುಂಬಾ ಹೊರೆಯಾಗುತ್ತಿದೆ. ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಡಬಲ್ ಗೇಮ್ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರು ರಾಜ್ಯದಲ್ಲಿ ಮತ್ತೆ ಪ್ರಚಾರ ಆರಂಭಿಸಲಿದ್ದಾರೆ. ಅವರು ಹಿರಿಯರು, ಬಿಜೆಪಿಯಲ್ಲಿ ಅವರಿಗೆ ಗೌರವವಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಸಾಕಷ್ಟು ಕಳಪೆಯಾಗಿವೆ ಎಂಬ ದೂರು ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕಳಪೆ ಕಾಮಗಾರಿಯಾಗಿದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್, ಶಾಸಕ ಬಿ.ಪಿ ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಯಶವಂತರಾವ್ ಜಾಧವ್, ಬಿ. ಎಸ್. ಜಗದೀಶ್, ಲೋಕಿಕೆರೆ ನಾಗರಾಜ್, ಬಿ.ಜೆ. ಅಜಯ್ ಕುಮಾರ್, ಶಿವರಾಜ್ ಪಾಟೀಲ್, ಮಾಜಿ ಶಾಸಕ ಪ್ರೊ.ಲಿಂಗಣ್ಣ ಮತ್ತಿತರರು ಹಾಜರಿದ್ದರು.
Parliamentary news, Parliamentary Davanagere, Parliamentary Statement, Parliamentary G. M. Siddeshwar Talk, Latest news,
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರೆಡಿ, ಪಕ್ಷ ಟಿಕೆಟ್ ಕೊಟ್ಟರೆ ಲೋಕಸಭೆಗೆ ಸ್ಪರ್ಧೆ, ಲೋಕಸಭೆಗೆ ಸ್ಪರ್ಧಿಸಲು ನಾನು ಅಸಮರ್ಥನಲ್ಲ, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಸೋಲನ್ನು ಎಸ್ ಎಸ್ ನೋಡುತ್ತಲೇ ಇದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಹಣ ಕೊಟ್ಟರೆ ಪಡೆಯುತ್ತೇನೆ ಎಂದ ಸಂಸದ ಜಿ. ಎಂ. ಸಿದ್ದೇಶ್ವರ