ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಗಿಫ್ಟ್ ಸೆಂಟರ್ ನಲ್ಲೊಂದು ಸಾಮಾಜಿಕ ಸೇವೆ: 300 ಜನುಮದಿನ ಸಂಭ್ರಮ… ಏನಿದು ಅಂತಾ ಕುತೂಹಲನಾ ಈ ಸ್ಟೋರಿ ಓದಿ ನಿಮ್ಗೆ ಗೊತ್ತಾಗುತ್ತೆ..!

On: June 15, 2023 10:54 AM
Follow Us:
Gift Center
---Advertisement---

SUDDIKSHANA KANNADA NEWS/ DAVANAGERE/ DATE:15-06-2023

ದಾವಣಗೆರೆ: ಬೆಣ್ಣೆನಗರಿಯಲ್ಲೊಂದು ಡಿಫರೆಂಟ್ ಗಿಫ್ಟ್ ಸೆಂಟರ್ ಇದೆ. ಇದು ಬೇರೆ ಗಿಫ್ಟ್ ಸೆಂಟರ್ ಗಿಂತ ಭಿನ್ನ, ವಿಭಿನ್ನ. ರಾಜಕಾರಣಕ್ಕೆ ಅವಕಾಶ ಇಲ್ಲ. ಎಲ್ಲಾ ಪಕ್ಷದವರೂ ಇಲ್ಲಿಗೆ ಬರುತ್ತಾರೆ. ಗಿಫ್ಟ್ ಖರೀದಿಸುತ್ತಾರೆ. ಜೊತೆಗೆ ಈ ಸೆಂಟರ್ ನೊಂದಿಗೆ ಅವಿನಾವಭಾವ ಸಂಬಂಧ ಹೊಂದಿದ್ದಾರೆ. ಸಾಮಾಜಿಕ ಸೇವೆಯ ಜೊತೆಗೆ ಜನರಿಗೆ ತರೇಹವಾರಿ ಗಿಫ್ಟ್ ಸಿಗುವ ತಾಣ ಎಂದರೆ ತಪ್ಪಾಗಲಾರದು. ಈ ಸೆಂಟರ್ ನಲ್ಲಿ ಈಗ 300 ನೇ ಹುಟ್ಟುಹಬ್ಬದ ಸಂಭ್ರಮ.

Gift center-01

ಅರೆರೆ.. ಇದೆೇನಿದೂ ಜನುಮದಿನದ ಸಂಭ್ರಮ ಎಂದು ಹೇಳುತ್ತಾರಲ್ವಾ ಎಂದು ಗೊಂದಲಕ್ಕೀಡಾಗಬೇಡಿ. ಈ ಸೆಂಟರ್ ನಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಎಲ್ಲಾ ವರ್ಗದವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಕಳೆದ 29 ವರ್ಷಗಳಿಂದ ದಾವಣಗೆರೆ (Davanagere) ಜನರಿಗೆ ಒಳ್ಳೆಯ, ಗುಣಮಟ್ಟದ ಗಿಫ್ಟ್ ಗಳನ್ನು ಕೊಡುತ್ತಾ ಬಂದಿರುವ ಈ ಸೆಂಟರ್ ನ ಮಾಲೀಕ ಅನಿಲ್ ಕುಮಾರ್ ಮುಂಡಾಸು. ಮುಂಡಾಸು ವೀರಣ್ಣ ಮತ್ತು ರತ್ನಮ್ಮ ಮುಂಡಾಸು ದಂಪತಿಯ ಪುತ್ರ ಇವರು.

2018ರಿಂದ ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಆಯೋಜಿಸಿಕೊಂಡು ಬರುತ್ತಿರುವ ಅನಿಲ್ ಕುಮಾರ್ ಮುಂಡಾಸು ಅವರು, ಗಿಫ್ಟ್ ಸೆಂಟರ್ ಗೆ ಬರುವವರ ನಂಬರ್ ಪಡೆಯುತ್ತಾರೆ. ಅವರ ಜನುಮದಿನದಂದು ಸೆಂಟರ್ ನಲ್ಲಿ ಆಚರಿಸುತ್ತಾರೆ. ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳಾದ ಪ್ರಸನ್ನಕುಮಾರ್, ಬಿ. ಜಿ. ಅಜಯಕುಮಾರ್, ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ದಿನೇಶ್ ಕೆ. ಶೆಟ್ಟಿ ಸೇರಿದಂತೆ ಎಲ್ಲಾ ಪಕ್ಷದವರ ಜನುಮದಿನದಂದು ಇಲ್ಲಿ ಬರ್ತ್ ಡೇ ಆಚರಿಸಿದ್ದಾರೆ. ಆಚರಿಸಿಕೊಂಡು ಬರುತ್ತಿದ್ದಾರೆ.

300ರ ಸಂಭ್ರಮ:

ಅಂದ ಹಾಗೆ ಇದುವರೆಗೆ 299 ಮಂದಿ ಜನುಮದಿನ ಇಲ್ಲಿ ಆಚರಿಸಲಾಗಿದೆ. ಎಸ್ ಪಿ ಸಿ ಕಾಲೇಜಿನ ಪ್ರಾಂಶುಪಾಲರಾದ ಗುರು ಮಗಾನಹಳ್ಳಿ ಅವರು 299ನೇಯವರು. ಬಾಲಾಜಿ ಅಗ್ರೋದ ಗಿರೀಶ್ ಅವರ ಜನುಮದಿನ ಇಂದು. 300 ನೇ ವ್ಯಕ್ತಿಯ ಹುಟ್ಟುಹಬ್ಬ ಈ ಸೆಂಟರ್ ನಲ್ಲಿ ನಡೆಯುತ್ತಿರುವುದು ವಿಶೇಷ.

ಈ ಸುದ್ದಿಯನ್ನೂ ಓದಿ: 

Davanagere: ಪತಿ ಕೊಂದಿದ್ದ ಪತ್ನಿ, ಪ್ರಿಯಕರ ಸೆರೆ: ಗಂಡನಿಗೆ ಮುಹೂರ್ತವಿಟ್ಟು ನಾಟಕ ಆಡಿದ್ದಾಕೆಯ ಕೈಗೆ ಬಿತ್ತು ಕೋಳ..!

ಯಾಕಾಗಿ ಈ ಯೋಜನೆ..?

ಇಂದಿನ ತಾಂತ್ರಿಕ, ಆಧುನಿಕ ಯುಗದಲ್ಲಿ ಜನರಿಗೆ ಸಮಯ ಸಿಗುವುದು ತುಂಬಾನೇ ಕಡಿಮೆ. ಜೊತೆಗೆ ಕೆಲವರು ತಮ್ಮ ಜನುಮದಿನವನ್ನು ಮರೆತುಬಿಟ್ಟಿರುತ್ತಾರೆ. ಒತ್ತಡದ ಜೀವನದ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಕಡಿಮೆಯೇ.
ಆದ್ರೆ, ಈ ಸೆಂಟರ್ ಗೆ ಕರೆತಂದು ಅವರನ್ನು ಗೌರವಿಸಿ, ಸನ್ಮಾನಿಸಿ ಒಂದು ಗಂಟೆಗಳ ಕಾಲ ಇಲ್ಲೇ ಇದ್ದು ಮನಸ್ಫೂರ್ತಿಯಾಗಿ ಕಾಲಕಳೆದು, ಸಂತೋಷವಾಗಿ ಮರಳಬೇಕು ಎಂಬ ಕಲ್ಪನೆ ಅನಿಲ್ ಕುಮಾರ್ ಅವರದ್ದಾಗಿದ್ದು, ಈಗ ಅದು ಸಾರ್ಥಕತೆ
ಕಂಡಿದೆ ಎಂದರೆ ತಪ್ಪಾಗಲಾರದು.

Gift Center

ಸಾಧಕರಿಗೆ ಸನ್ಮಾನ:

ಅನಿಲ್ ಕುಮಾರ್ ಕೇವಲ ಕಮರ್ಷಿಯಲ್ ಆಗಿ ಗಿಫ್ಟ್ ಸೆಂಟರ್ ನಡೆಸುತ್ತಿಲ್ಲ. ಯಾರೇ ಸಾಧನೆ ಮಾಡಿದರೂ ಗುರುತಿಸುವ ಕೆಲಸ ಮಾಡುತ್ತಾರೆ. ಸಾಮಾಜಿಕ ಸೇವೆಗೆ ಮತ್ತೊಂದು ಹೆಸರು ಅಂದರೆ ಅನಿಲ್ ಕುಮಾರ್. ನಿವೃತ್ತ ಸೈನಿಕರು, ಸೈನ್ಯದಲ್ಲಿ
ಕೆಲಸ ಮಾಡಿ, ದೇಶಕ್ಕಾಗಿ ಹೋರಾಡಿ ಬಂದವರ ಅದ್ಧೂರಿ ಸ್ವಾಗತಕ್ಕೆ ಒಂದು ರೂಪಾಯಿ ಪಡೆಯದೇ ಸನ್ಮಾನಿಸುತ್ತಾರೆ. ಇಲ್ಲಿ ನಡೆಯುವ ಸಾಮಾಜಿಕ ಸೇವೆಗೆ ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷೆ ಮಾಡುವುದಿಲ್ಲ. ಬರ್ತ್ ಡೇ ಮಾಡುವ ಜಾಗ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದು ಎಂಬುದೇ ಈ ಕಾರ್ಯಕ್ರಮದ ಧ್ಯೇಯವಾಕ್ಯ ಘೋಷ.

ಏನೆಲ್ಲಾ ಸಿಗುತ್ತದೆ…?

ಹಾರ, ಶಾಲು, ಪೇಟ ಸೇರಿದಂತೆ ಎಲ್ಲಾ ರೀತಿಯ ಗಿಫ್ಟ್ ಗಳು ಇಲ್ಲಿ ದೊರೆಯುತ್ತವೆ. ದಾವಣಗೆರೆಯ ಮಂಡಿಪೇಟೆಯಲ್ಲಿನ ಗಿಫ್ಟ್ ಸೆಂಟರ್ ಮೊದಲನೆಯದ್ದಾದರೆ ಎರಡನೇಯದ್ದು ಮೋನಿಕಾ ಗಿಫ್ಟ್ ಸೆಂಟರ್. ಸುಮಾರು 3 ದಶಕಗಳ ಕಾಲ ಜನರಿಗೆ
ಅತ್ಯುತ್ತಮ ಸೇವೆ ನೀಡುವ ಜೊತೆಗೆ ಬ್ಲಾಕ್ ಮೆಟಲ್ ಐಟಂಗಳಿಂದ ಹೆಸರುವಾಸಿಯಾಗಿದೆ. ದಾವಣಗೆರೆ ಜನರಿಗೆ ತನ್ನ ಕೈಯಲ್ಲಾದಷ್ಟು ಸೇವೆ ಮಾಡಬೇಕು. ಸೇವಾ ಮನೋಭಾವದ ಜೊತೆಗೆ ಆತ್ಮೀಯತೆಯೂ ಇರಬೇಕು. ಇದನ್ನು ಇಲ್ಲಿಯವರೆಗೆ
ಕಾಪಾಡಿಕೊಂಡು ಬಂದಿರುವುದೇ ಅನಿಲ್ ಕುಮಾರ್ ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.

gift center

ವಯಸ್ಸಿನ ಹಂಗಿಲ್ಲ:

ಈ ಗಿಫ್ಟ್ ಸೆಂಟರ್ ನಲ್ಲಿ ಆತ್ಮೀಯತೆಗೆ ವಯಸ್ಸಿನ ಹಂಗಿಲ್ಲ. ಎಲ್ಲಾ ವಯೋಮಾನದವರ ಜನುಮದಿನ ಆಚರಿಸಲಾಗುತ್ತದೆ. ಜಾತಿ ಭೇದವಿಲ್ಲ. ಎಲ್ಲರೊಟ್ಟಿಗೆ ಎಲ್ಲರೂ ಸಮಾನಾಗಿ ಇರಬೇಕು. ಯಾರಿಗೂ ಒತ್ತಾಯ ಮಾಡುವುದಿಲ್ಲ. ಯಾವುದೇ ಹಣ
ನಿರೀಕ್ಷೆ ಮಾಡುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಮಾನವಾದ ಗೌರವ ಇಲ್ಲಿ ಕೊಡಲಾಗುತ್ತದೆ.

ಅನಿಲ್ ಕುಮಾರ್ ಏನಂತಾರೆ..?

Gift Center

ಇದುವರೆಗೆ 299 ಗಣ್ಯರ ಜನುಮದಿನವನ್ನು ಮೋನಿಕಾ ಗಿಫ್ಟ್ ಸೆಂಟರ್ ನಲ್ಲಿ ನಡೆಸಿದ್ದೇವೆ. 300 ನೇ ವ್ಯಕ್ತಿಯ ಜನುಮದಿನ ಇಲ್ಲಿ ಆಚರಿಸಲಾಗುತ್ತಿದೆ. ಜನರಿಗೆ ಸೇವೆ ನೀಡುವ ಜೊತೆಗೆ ಆತ್ಮೀಯತೆ ಇರಬೇಕು. ಹಣಕ್ಕೋಸ್ಕರ ಈ ಕೆಲಸ ಮಾಡುವುದಿಲ್ಲ.
ಸೆಂಟರ್ ಗೆ ಬರುವವರಿಗೆ ಗೌರವಿಸುವ, ಹುಟ್ಟುಹಬ್ಬದಂದು ಖುಷಿಯಾಗಿ ಇಲ್ಲಿ ಪಾಲ್ಗೊಂಡು ಹೋಗಬೇಕೆಂಬ ಕಲ್ಪನೆಯಿಂದ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ನನಗೂ ಸಂತೋಷ ಇದೆ. ಇಲ್ಲಿ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷದವರೂ ಇಲ್ಲಿ ಜನುಮದಿನ ಆಚರಿಸಿಕೊಂಡಿದ್ದಾರೆ. ತಮ್ಮೊಟ್ಟಿಗೆ ಇರುವ ಆತ್ಮೀಯತೆಯಿಂದ ಇಲ್ಲಿಗೆ ಬಂದು ಗಿಫ್ಟ್ ಖರೀದಿಸಿ ಹೋಗುತ್ತಾರೆ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ ಪಲ್ಲವಿ ಮತ್ತು ಪುತ್ರಿ ಯಶ್ಮಿತಾ ಸಂಪೂರ್ಣ ಸಹಕಾರ ಇದೆ ಎನ್ನುತ್ತಾರೆ ಗಿಫ್ಟ್ ಸೆಂಟರ್ ಮಾಲೀಕ ಅನಿಲ್ ಕುಮಾರ್.

ನಿಸ್ವಾರ್ಥ ಸೇವೆಗೆ ಬಾಡದ ಆನಂದರಾಜ್ ಶ್ಲಾಘನೆ:

 

Gift center

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪ್ರತಿಭಾವಂತರನ್ನು ಆತ್ಮೀಯತೆಯಿಂದ ಆಹ್ವಾನಿಸಿ ನಮ್ಮ ಜನ್ಮದಿನವನ್ನು ತುಂಬಾ ಪ್ರೀತಿಯಿಂದ ಆಚರಿಸಿ ಹಾರ ತುರಾಯಿಗಳಿಂದ ಸನ್ಮಾನಿಸಿ ವಿಶೇಷ ಕೇಕ್ ನೊಂದಿಗೆ ಶುಭ ಕೋರಿ ನಮ್ಮಂತಹ  ಹೋರಾಟಗಾರರಿಗೆ ಮತ್ತಷ್ಟು ಉತ್ಸಾಹ ನೀಡುತ್ತಿರುವ ಅನಿಲ್ ಕುಮಾರ್ ರವರ ವಿಭಿನ್ನ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಹೇಳಿದ್ದಾರೆ.

Different Gift Center In DavanagereDavanagere Monica Gift Shoppe, Davanagere Latest News,Davanagere Special Shop, ದಾವಣಗೆರೆ ಸ್ಪೆಷಲ್ ಶಾಪ್, ದಾವಣಗೆರೆ ವಿಭಿನ್ನ ಅಂಗಡಿ, ದಾವಣಗೆರೆಯ ಮೊನಿಕಾ ಗಿಫ್ಟ್ ಸೆಂಟರ್ ವಿಶೇಷತೆ ಏನು..? 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment