ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್‌ ನ್ಯೂಸ್‌ : 5,096 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ

On: June 11, 2024 9:46 AM
Follow Us:
---Advertisement---

ನವದೆಹಲಿ : ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೇಂದ್ರವು ಜೂನ್ ತಿಂಗಳಲ್ಲಿ ರಾಜ್ಯಗಳಿಗೆ 1,39,750 ಕೋಟಿ ತೆರಿಗೆ ಹಂಚಿಕೆಯ ಕಂತನ್ನು ಬಿಡುಗಡೆ ಮಾಡಿದೆ.

ಹಣಕಾಸು ಸಚಿವಾಲಯವು ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, “2024 ರ ಜೂನ್ ತಿಂಗಳಿಗೆ ವಿಕೇಂದ್ರೀಕರಣ (ರಾಜ್ಯಗಳ ತೆರಿಗೆ ಪಾಲು) ಮೊತ್ತವನ್ನು ನಿಯಮಿತವಾಗಿ ಬಿಡುಗಡೆ ಮಾಡುವುದರ ಜೊತೆಗೆ , ಒಂದು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹5,096 ಕೋಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,39,750 ಕೋಟಿ ಬಿಡುಗಡೆಗೊಳಿಸಿದೆ.

2024-25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯಗಳಿಗೆ ತೆರಿಗೆ ಪಾಲಿನ ರೂಪದಲ್ಲಿ 12,19,783 ಕೋಟಿ ರೂ. ನೀಡಲು ಹಂಚಿಕೆ ಮಾಡಲಾಗಿತ್ತು. ಜೂನ್‌ ಕಂತಿನ ಬಿಡುಗಡೆ ಬಳಿಕ ರಾಜ್ಯಗಳಿಗೆ ಈವರೆಗೆ ಒಟ್ಟು 2,79,500 ಕೋಟಿ ರೂ. ಬಿಡುಗಡೆ ಮಾಡಿದಂತಾಗಿದೆ.

Join WhatsApp

Join Now

Join Telegram

Join Now

Leave a Comment