ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಬೇಕೇ… ಹಾಗಿದ್ದರೆ, ಇಲ್ಲಿದೆ ನೋಡಿ ಮಾಹಿತಿ

On: June 14, 2023 12:47 PM
Follow Us:
Bus pass
---Advertisement---

SUDDIKSHANA KANNADA NEWS/ DAVANAGERE/ DATE:14-06-2023

ದಾವಣಗೆರೆ (Davanagere) : 2023-24ನೇ ಸಾಲಿನ ಶೈಕ್ಷಣಿಕ ಸಾಲಿನ ಸಾರಿಗೆ ನಿಗಮದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸಕ್ತ ವರ್ಷದಲ್ಲಿ ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್‍ಗಳನ್ನು ವಿತರಿಸಲಾಗುತ್ತಿದ್ದು, ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಆಗಿ ಜೂನ್ 12 ರಿಂದ ಪಾಸ್‍ಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಆನ್‍ಲೈನ್ ಹೊರತುಪಡಿಸಿ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸರ್ಕಾರದ ಆದೇಶದಂತೆ ರೂ.30 ಸೇವಾ ಶುಲ್ಕವನ್ನು ನೀಡಿ ಅರ್ಜಿ ಸಲ್ಲಿಸಬೇಕು.

10 ತಿಂಗಳ ಅವಧಿಗೆ ಪ್ರಾಥಮಿಕ ಶಾಲೆಯ ಸಾಮಾನ್ಯ, ಪ.ಜಾತಿ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ 150, ಪ್ರೌಢಶಾಲಾ ಬಾಲಕರಿಗೆ ಸಾಮಾನ್ಯರಿಗೆ 750, ಪ.ಜಾತಿ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ 150, ಪ್ರೌಢಶಾಲಾ ಬಾಲಕಿಯರಿಗೆ ಸಾಮಾನ್ಯರಿಗೆ 550, ಪ.ಜಾತಿ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ 150, ಕಾಲೇಜು, ಡಿಪ್ಲೋಮೋ ವಿದ್ಯಾರ್ಥಿಗಳಿಗೆ ಸಾಮಾನ್ಯರಿಗೆ 1050, ಪ.ಜಾತಿ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ 150, ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಸಾಮಾನ್ಯರಿಗೆ ರೂ.1550, ಪ. ಜಾ ಹಾಗೂ ಪ. ಪಂ ವಿದ್ಯಾರ್ಥಿಗಳಿಗೆ ರೂ.150 ಹಾಗೂ ಸಂಜೆ ಕಾಲೇಜು/ಪಿ.ಎಚ್.ಡಿ ಪದವಿಧರರಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1350 ಹಾಗೂ ಪ.ಜಾ ಹಾಗೂ ಪ.ಪಂ ವಿದ್ಯಾರ್ಥಿಗಳಿಗೆ ರೂ.150 12 ತಿಂಗಳ ಅವಧಿಗೆ ಐಟಿಐ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1310, ಪ.ಜಾತಿ ಮತ್ತು ಪ.ಪಂ. ವಿದ್ಯಾರ್ಥಿಗಳಿಗೆ ರೂ 150 ಶುಲ್ಕ ನಿಗಧಿಪಡಿಸಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿಗಳು ದಾವಣಗೆರೆ ಬಸ್ ನಿಲ್ದಾಣ-02 ಕರ್ನಾಟಕ ಒನ್ ಕೌಂಟರ್ ಮತ್ತು ಕರ್ನಾಟಕ ಒನ್ ಸೂಪರ್ ಮಾರ್ಕೇಟ್, ಎಂ.ಸಿ.ಸಿ ಬಿಲ್ಡಿಂಗ್ ಚರ್ಚ್ ರೋಡ್, ದಾವಣಗೆರೆ-577004, ಜಗಳೂರು-ಜಗಳೂರು ಬಸ್ ನಿಲ್ದಾಣ, ಚನ್ನಗಿರಿ-ಕರ್ನಾಟಕ ಒನ್, 165 ಎಂಪ್ಲಾಯಿಸ್ ಕಾಲೋನಿ, ಎಸ್.ಎಂ.ಆರ್.ಹೆಚ್ ಶಾಲೆಯ ಹಿಂಬಾಗ ಚನ್ನಗಿರಿ, ಹರಿಹರ- ಕರ್ನಾಟಕ ಒನ್, ಜಿಬಿಎಂಎಸ್ ಶಾಲೆಯ ಎದುರು,ಪಿಬಿ ರೋಡ್, ಹರಿಹರ-577602, ಮಲೆಬೆನ್ನೂರು- ಮಲೆಬೆನ್ನೂರು ಬಸ್ ನಿಲ್ದಾಣ ಇಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದ ಕೌಂಟರ್ ಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್‍ಕಾರ್ಡ್ / ಡೆಬಿಟ್‍ಕಾರ್ಡ್ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆಯಬಹುದು.

ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಲಾಗಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣವಿರುತ್ತದೆ ಎಂದು ದಾವಣಗೆರೆ ಕರಾರಸಾನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Davanagere Bus Pass, Davanagere Latest news, Davanagere news, Davanagere suddi

ದಾವಣಗೆರೆ ಬಸ್ ಪಾಸ್, ದಾವಣಗೆರೆ ವಿದ್ಯಾರ್ಥಿಗಳಿಗೆ ಮಾಹಿತಿ, ದಾವಣಗೆರೆ ಸುದ್ದಿ, ದಾವಣಗೆರೆಯಲ್ಲಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment