ಛತ್ತೀಸ್‌ಗಢ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿರುವ ಭದ್ರತಾ ಪಡೆಗಳು ಇಂದು ಅವರ ಭರ್ಜರಿ ಬೇಟೆ ಮೂಲಕ 9 ನಕ್ಸಲರನ್ನು ವಶಕ್ಕೆ ಪಡೆದಿದ್ದಾರೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಕಡೆಯಲ್ಲಿ ಕಾರ್ಯಚರಣೆ ನಡೆಸಿ 9 ನಕ್ಸಲರನ್ನು ಬಂಧಿಸಿದ್ದಾರೆ.ಅವರಲ್ಲಿ ಐವರು ಕಳೆದ ತಿಂಗಳು ಪೊಲೀಸ್ ಕಾರನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟವನ್ನು ಮಾಡಿದ್ದರು.
ಬಂಧಿಸಲಾಗಿರುವ ಈ ಐವರು ಉಗ್ರರನ್ನು ಗುಡ್ಡು ಕುಮ್ಮಾ (25), ಬುಧು ಕುಮ್ಮಾ (30), ಸುರೇಶ್ ಓಯಮ್ (29), ವಿನೋದ್ ಕೊರ್ಸಾ (25) ಮತ್ತು ಮುನ್ನಾ ಕುಮ್ಮಾ (25) ಎಂದು ಗುರುತಿಸಲಾಗಿದೆ. ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೆಮ್-ಕುಪ್ರೆಲ್ ಗ್ರಾಮಗಳಲ್ಲಿ ಬಂಧಿಸಲಾಗಿದೆ. ಐವರು ಉಗ್ರರ ತಲೆಯ ಮೇಲೆ ತಲಾ 10,000 ರೂ. ಬಹುಮಾನ ಇತ್ತು.