ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಮ್ಮೆ ಈ ರೀತಿ ಚಿಕನ್ ಸ್ಪೈಸಿ ಗ್ರೇವಿ ರೆಸಿಪಿ ಮಾಡಿ ನೋಡಿ

On: June 3, 2024 12:14 PM
Follow Us:
---Advertisement---

ಚಿಕನ್ ಸ್ಪೈಸಿ ಗ್ರೇವಿಗೆ ಬೇಕಾಗುವ ಪದಾರ್ಥಗಳು:

* ಚಿಕನ್ ಒಂದು ಕೆಜಿ

*ಟೊಮೆಟೊ 5

*ಈರುಳ್ಳಿ 3

*ಶುಂಠಿ ಒಂದು ಇಂಚು

* ಬೆಳ್ಳುಳ್ಳಿ 5 ಎಸಳು

* ಪುದೀನಾ ಸ್ವಲ್ಪ

* ಕೊತ್ತಂಬರಿ ಸೊಪ್ಪು ಸ್ವಲ್ಪ

* ಕಾಳುಮೆಣಸು ಪೌಡರ್ ಅರ್ಧ ಚಮಚ

* ಖಾರ ಒಂದು ಚಮಚ

* ಲವಂಗ 3

* ಅರಿಶಿಣ ಸ್ವಲ್ಪ

* ದನಿಯಾ ಪೌಡರ್ ಕಾಲ್ ಚಮಚ

* ಗರಂ ಮಸಾಲ ಪೌಡರ್ ಅರ್ಧ ಚಮಚ

* ಉಪ್ಪು ರುಚಿಗೆ ತಕ್ಕಷ್ಟು

* ಎಣ್ಣೆ

* ಲಿಂಬೆಹಣ್ಣು ಒಂದು

ತಯಾರಿಸುವ ವಿಧಾನ:

*ಚಿಕನ್ ಚೆನ್ನಾಗಿ ತೊಳೆದು ಲಿಂಬೆಹಣ್ಣಿನ ರಸ ಹಿಂಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಪಾತ್ರೆ ಮುಚ್ಚಿಡಿ.

* ಒಂದು ಮಿಕ್ಸಿ ಜಾರ್‌ಗೆ ಶುಂಠಿ-ಬೆಳ್ಳುಳ್ಳಿ ಹಾಕಿಕೊಂಡು ರುಬ್ಬಿ ಒಂದೆಡೆ ತೆಗೆದಿಡಿ, ನಂತರ ಈರುಳ್ಳಿ ರುಬ್ಬಿಕೊಂಡು ಒಂದೆಡೆ ಇಡಿ. ಬಳಿ ಟೊಮೆಟೊ ಹಾಕಿ ರುಬ್ಬಿಕೊಳ್ಳಿ.

* ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಸ್ವಲ್ಪ ಕೆಂಪಾಗಲು ಬಿಡಿ.

* ನಂತರ ಇದಕ್ಕೆ ರುಬ್ಬಿಕೊಂಡ ಈರುಳ್ಳಿ ಹಾಕಿ, ಇದು ಕೆಂಪಾದ ಬಳಿಕ ಟೊಮೆಟೊ ಹಾಕಿ ಹಸಿ ವಾಸನೆ ಹೋಗುವವರೆಗೂ ಕದಡಿ.

* ಬಳಿಕ ಇದಕ್ಕೆ ಇದಕ್ಕೆ ಪೆಪ್ಪರ್ ಪೌಡರ್, ಲವಂಗ, ಅರಿಶಿಣ, ದನಿಯಾ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ನಂತರ ಇದಕ್ಕೆ ಪುದೀನಾ ಹಾಕಿ ನೆನಸಿಟ್ಟ ಚಿಕನ್ ಹಾಕಿ ಚೆನ್ನಾಗಿ ಕಲಸಿ.

* ಸ್ವಲ್ಪ ಹೊತ್ತು ಬಿಟ್ಟು ಇದಕ್ಕೆ ಖಾರ, ಉಪ್ಪು, ಗರಂ ಮಸಾಲ ಪೌಡರ್ ಹಾಕಿ ಕುಕ್ಕರ್ ಮುಚ್ಚಿಡಿ. ಬೇಕಿದ್ದಲ್ಲಿ ಸ್ವಲ್ಪ ನೀರು ಬೆರೆಸಿಕೊಳ್ಳಿ.

* ಮೂರು ವಿಸಿಲ್ ಆದ ಬಳಿಕ ಕುಕ್ಕರ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಉದುರಿಸಿದರೆ ಚಿಕನ್ ಸ್ಪೈಸಿ ಗ್ರೇವಿ ಸವಿಯಲು ಸಿದ್ಧ.

Join WhatsApp

Join Now

Join Telegram

Join Now

Leave a Comment