ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತ ಎಣಿಕೆ ಆರಂಭ: ಸಿಕ್ಕಿಂನಲ್ಲಿ ಎಸ್‌ಎಂಗೆ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ

On: June 2, 2024 10:23 AM
Follow Us:
---Advertisement---

ದೆಹಲಿ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 

ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ಹಾಗೂ ಅರುಣಾಚಲ ಪ್ರದೇಶ 60 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳ ಮತ ಎಣಿಕೆ ಆರಂಭಗೊಂಡಿದೆ. ಈ ಪೈಕಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ)ಪಕ್ಷವು 24 ಹಾಗೂ ಅರುಣಾಚಲ ಪ್ರದೇಶದಲ್ಲಿ 24 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಇನ್ನುಳಿದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) 4 ಕಡೆ ಹಾಗೂ ಇತರೆ ಅಭ್ಯರ್ಥಿಗಳು 6 ಕಡೆ ಮುನ್ನಡೆ ಸಾಧಿಸಿದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಆಕ್ಸಿಸ್ ಮೈ ಇಂಡಿಯಾದ ಮತಗಟ್ಟೆ ಸಮೀಕ್ಷೆ ಮೂಲಕ ತಿಳಿದುಬಂದಿದೆ. 44 ರಿಂದ 51 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ಉಳಿದಂತೆ 1 ರಿಂದ 4 ಸ್ಥಾನ ಕಾಂಗ್ರೆಸ್‌, ತಲಾ 2 ರಿಂದ 6 ಕ್ಷೇತ್ರಗಳು ಕ್ರಮವಾಗಿ ಎನ್‌ಪಿಪಿ ಮತ್ತು ಇತರರ ಪಾಲಾಗಲಿವೆ ಎಂದು ಹೇಳಲಾಗಿದೆ.

ಇನ್ನು ಅರುಣಾಚಲ ಪ್ರದೇಶ 60 ಕ್ಷೇತ್ರಗಳ ಪೈಕಿ ಬಿಜೆಪಿಯು 10 ಕ್ಷೇತ್ರಗಳನ್ನು ಈಗಾಗಲೇ ಅವಿರೋಧವಾಗಿ ಜಯಗಳಿಸಿದೆ. ಇನ್ನು ಈ ಎರಡೂ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಂದು ಏಕಕಾಲದಲ್ಲಿ ನಡೆದಿತ್ತು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಆರ್‌ಎಸ್‌ಎಸ್

ಆರ್‌ಎಸ್‌ಎಸ್ ಎಷ್ಟು ದೊಡ್ಡದು? ನಿಷೇಧ ಸಾಧ್ಯವೇ: ಎಲ್ಲೂ ಇಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಪಾಕಿಸ್ತಾನ

ಶಾಶ್ವತ ಕದನ ವಿರಾಮ ಚೆಂಡು ‘ಅಫ್ಘಾನ್ ತಾಲಿಬಾನ್ ಅಂಗಳದಲ್ಲಿ’: ಪಾಕಿಸ್ತಾನ ಪಿಎಂ ಶೆಹಬಾಜ್ ಷರೀಫ್!

ಅಬಕಾರಿ

4.42 ಕೆಜಿ ಚಿನ್ನ, 7.3 ಕೆಜಿ ಬೆಳ್ಳಿ, 1 ಕೋಟಿ ನಗದು, ಐಷಾರಾಮಿ ಕಾರುಗಳು ಪತ್ತೆ: ನಿವೃತ್ತ ಅಬಕಾರಿ ಅಧಿಕಾರಿ ಅಕ್ರಮ ಸಂಪತ್ತು 18 ಕೋಟಿ ರೂ.ಗೂ ಹೆಚ್ಚು!

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ಅಮೆರಿಕ ಅಧ್ಯಕ್ಷರ ಹೇಳಿಕೆ ತಿರಸ್ಕರಿಸಿದ ಭಾರತ!

ಬೆಳ್ಳಿ

ಭಾರತದಲ್ಲಿ ನಾಲ್ಕು ತಿಂಗಳಿಂದ ಏರುಗತಿಯಲ್ಲಿ ಇದ್ದ ಬೆಳ್ಳಿ ಧಾರಣೆ ಕಡಿಮೆಯಾಗುತ್ತಾ? ಇಲ್ಲಿದೆ ಉತ್ತರ

ಚನ್ನಗಿರಿ

ಮಾಮೂಲು ಪಡೆಯುವಾಗ ಪ್ರಗ್ನೆಂಟ್ ಇರೋಲ್ವ: ಅರಣ್ಯಾಧಿಕಾರಿ ಶ್ವೇತಾ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟ ಚನ್ನಗಿರಿ “ಕೈ” ಶಾಸಕ ಶಿವಗಂಗಾ ಬಸವರಾಜ್!

Leave a Comment