ಬೇಕಾಗುವ ಪದಾರ್ಥಗಳು…
ಗೋದಿ ಹಿಟ್ಟು- 1 ಬಟ್ಟಲುಟ
ಬೀಟ್ರೂಟ್-1
ವಿನೆಗರ್-1 ಚಮಚ
ಕ್ಯಾಬೇಜ್0-1 ಕಪ್
ಈರುಳ್ಳಿ-1
ಕೊತ್ತಂಬರಿ ಸೊಪ್ಪು-1/4 ಬಟ್ಟಲು
ಹಸಿಮೆಣಸಿನಕಾಯಿ ಪೇಸ್ಟ್-1 ಚಮಚ
ಶುಂಠಿ ಪೇಸ್ಟ್-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಎಣ್ಣೆ-5 ಚಮಚ
ಮಾಡುವ ವಿಧಾನ…
ಮೊದಲು ಬೀಟ್ರೂಟ್ ಬೇಯಿಸಿ ಜಾಸ್ತಿ ನೀರು ಹಾಕದೇ ನುಣ್ಣಗೆ ರುಬ್ಬಿ ರಸ ತೆಗೆದಿಟ್ಟುಕೊಳ್ಳಿ.
ಬೀಟ್ರೂಟ್ ಪ್ಯೂರಿಗೆ ವಿನೆಗರ್ ಬೆರೆಸಿ. ಗೋದಿ ಹಿಟ್ಟಿಗೆ ಬೀಟ್ರೂಟ್ ರಸ ಉಪ್ಪು, ಬಿಸಿ ನೀರು ಹಾಕಿ ಹಿಟ್ಟು ಕಲೆಸಿಕೊಂಡು ಎಣ್ಣೆ ಸವರಿ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ.
ಸ್ಟಪಿಂಗ್ ಗಾಗಿ ಹೆಚ್ಚಿದ ಕ್ಯಾಬೇಜ್, ಈರುಳ್ಳಿ, ಕೊತ್ತಂಬರಿ ಸೊಪ್ಪು ಮೆಣಸಿನ ಪೇಸ್ಟ್ ಶುಂಠಿ ಪೇಸ್ಟ್ ಉಪ್ಪು ಎಲ್ಲ ಸೇರಿಸಿ ತಯಾರಿಸಿದ ಗೋದಿ ಹಿಟ್ಟಿನ ಉಂಡೆಗಳನ್ನು ಸ್ವಲ್ಪ ಲಟ್ಟಿಸಿಕೊಂಡು ಸ್ಟಪಿಂಗ್ ಸೇರಿಸಿ ಇಷ್ಟವಾದ ಆಕಾರದಲ್ಲಿ ಮೊಮೊಸ್ ತಯಾರಿಸಿಕೊಳ್ಳಿ.
ಸ್ಟೀಮರ್ ನಲ್ಲಿ ಹತ್ತು ನಿಮಿಷ ಬೇಯಿಸಿ. ಕೆಂಪನೆಯ ಮೊಮೊಸ್ ಗಳನ್ನು ಚಟ್ನಿ ಮತ್ತು ಸಾಸ್ ಜೊತೆಗೆ ಸವ್೯ ಮಾಡಿ.