ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಿಗ ಸೇರಿದಂತೆ 36 ಹುದ್ದೆಗಳಿಗೆ ಜುಲೈ 12, 13 ಮತ್ತು 14ರಂದು ಪರೀಕ್ಷೆ ನಡೆಯಲಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಮತ್ತು ಗ್ರೂಪ್ – ಸಿ 64 ಹುದ್ದೆಗಳಿಗೆ ಆ.11 ರಂದು, ಬಿಎಂಟಿಸಿಯಲ್ಲಿ 2,500 ನಿರ್ವಾಹಕ ಹುದ್ದೆಗಳಿಗೆ ಸೆಪ್ಟೆಂಬರ್ 1ರಂದು ಪರೀಕ್ಷೆ ನಡೆಯಲಿದೆ.