ಜೇನುಹುಳದ ಸಂತತಿ ನಾಶವಾದ ನಾಲ್ಕೆದು ವರ್ಷಕ್ಕೆ ಮನುಷ್ಯನ ಪ್ರಭೇದ ನಾಶವಾಗುತ್ತದೆ ಎಂದು ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದಾರೆ. ಎಷ್ಟು
ವರ್ಷಗಳವರೆಗೂ ಸಂಗ್ರಹಿಸಿಟ್ಟರೂ ಹಾಳಾಗದಿರುವ ಏಕೈಕ ಆಹಾರವೆಂದರೆ ಅದು ಜೇನು ಮಾತ್ರ.
ಪ್ರಪಂಚದಲ್ಲಿ ಅಂದಾಜು 20,000 ಜಾತಿಯ ಜೇನು ನೊಣಗಳಿವೆ. ಹಣ್ಣು, ತರಕಾರಿ, ಅಡಕೆ, ತೆಂಗು, ಹೂಗಳ ಪರಾಗಸ್ವರ್ಶ ಕ್ರಿಯೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೇನುಗಳ ಪರಾಗ ಸ್ಪರ್ಶದಿಂದಾಗಿ ಬೆಳೆಯ ಇಳುವರಿಯು ಮಾಮೂಲಿಗಿಂತ ಶೇಕಡಾ 20ರಷ್ಟು ಹೆಚ್ಚಾಗುತ್ತದೆ.