ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಯುವಕನೊಬ್ಬ 8 ಬಾರಿ ಮತ ಚಲಾವಣೆ, FIR ದಾಖಲು

On: May 20, 2024 10:53 AM
Follow Us:
---Advertisement---

ಲಕ್ನೋ : ಉತ್ತರಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಯುವಕನೋರ್ವ ಬಿಜೆಪಿಗೆ 8 ಬಾರಿ ಮತ ಹಾಕುವುದನ್ನು ತೋರಿಸುವ ವೀಡಿಯೊ ವೈರಲ್ ಆದ ಬಳಿಕ ಪ್ರತಿಪಕ್ಷ ಆತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನಿರಂತರ ಹಲವು ಬಾರಿ ಮತ ಚಲಾಯಿಸುತ್ತಿರುವಾಗ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಆ ವೀಡಿಯೊವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ಖಿರಿ ಪಮರಾನ್ ಗ್ರಾಮದಲ್ಲಿ ರೆಕಾರ್ಡ್ ಆಗಿದೆ. ಈ ಗ್ರಾಮ ಫರೂಖಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಲಿಗಂಜ್ ವಿಧಾನ ಸಭಾ ಕ್ಷೇತ್ರದ ಭಾಗ. ಈ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮುಖೇಶ್ ರಜಪೂತ್ ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿವಿಧ ಸರ್ಕಾರಿ ಗುರುತಿನ ಚೀಟಿಗಳೊಂದಿಗೆ ಬ್ಯಾಲೆಟ್ ಯೂನಿಟ್‌ನಲ್ಲಿರುವ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರ ಫೋಟೋದ ಮುಂದೆ ಬಟನ್ ಅನ್ನು ಒತ್ತುವ ಮೂಲಕ ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪರಿಚಿತ ಯುವಕ ಹಲವು ಬಾರಿ ಮತದಾನ ಮಾಡುವಾಗ ಕನಿಷ್ಠ ಎರಡು ಬಾರಿ ಶರ್ಟ್ ಬದಲಾಯಿಸಿರುವುದು ವೀಡಿಯೊ ತೋರಿಸುತ್ತದೆ.

ಮುಖೇಶ್ ರಜಪೂತ್ ಫರೂಕಾಬಾದ್‌ನ ಬಿಜೆಪಿ ಅಭ್ಯರ್ಥಿ. ಮೇ 13 ರಂದು ನಾಲ್ಕನೇ ಹಂತದ ಸಾರ್ವತ್ರಿಕ ಚುನಾವಣೆಗಳಲ್ಲಿ ಫರೂಕಾಬಾದ್ ಕ್ಷೇತ್ರದಲ್ಲಿ ಮತದಾನ ನಡೆಯಿತು. ಈ ಸಂಬಂಧ ಎಟಾ ಜಿಲ್ಲೆಯ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮತಗಟ್ಟೆ ಅಧಿಕಾರಿಯನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಆ ಮತಗಟ್ಟೆಯಲ್ಲಿ ಮರುಮತದಾನಕ್ಕೂ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ವಿಡಿಯೊ ನೋಡಿದರೆ ತಮ್ಮ ಸೋಲಿನಿಂದ ತಪ್ಪಿಸಿಕೊಳ್ಳಲು ಬಿಜೆಪಿ, ಜನರ ನಿರ್ಣಯವನ್ನು ಬದಿಗೊತ್ತಿ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿ ಪ್ರಜಾಪ್ರಭುತ್ವದ ಲೂಟಿಗೆ ಮುಂದಾಗಿದೆ ಎಂದು ರಾಹುಲ್ ಕಿಡಿ ಕಾರಿದ್ದಾರೆ. ಆಡಳಿತದಲ್ಲಿರುವವರ ಒತ್ತಡಕ್ಕೆ ಮಣಿಯದೇ ಚುನಾವಣೆ ಸಿಬ್ಬಂದಿ ತಮ್ಮ ಸಾಂವಿಧಾನಿಕ ಕರ್ತವ್ಯ ಅರಿತು ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಂಬಿದೆ. ಇಲ್ಲವಾದರೆ, ‘ಇಂಡಿಯಾ’ ಅಧಿಕಾರಕ್ಕೆ ಬಂದ ಕೂಡಲೇ ಕರ್ತವ್ಯ ಲೋಪ ಎಸಗಿದವವರ ವಿರುದ್ಧ ಕ್ರಮ ಆಗುತ್ತದೆ. ಸಾಂವಿಧಾನಿಕ ಪ್ರತಿಜ್ಞೆ ಉಲ್ಲಂಘಿಸುವ ಮುನ್ನ 10 ಬಾರಿ ಯೋಚಿಸಿ ಎಂದು ಅವರು ಹೇಳಿದ್ದಾರೆ.

Join WhatsApp

Join Now

Join Telegram

Join Now

Leave a Comment