ಪ್ರಸ್ತುತ ಮತ್ತದೇ ಮಣ್ಣಿನ ಮಡಕೆಗಳು ಮರಳಿ ಬಂದಿವೆ. ಜನ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಶುರು ಹಚ್ಚಿಕೊಂಡಿದ್ದಾರೆ.
ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಕ್ಯಾನ್ಸರ್ ಸಂಭವಿಸಬಹುದು ಎಂಬ ವಿಚಾರದ ಚೆನ್ನಲ್ಲೇ ಈ ಪಾತ್ರೆಗಳನ್ನು ಇಷ್ಟಪಡುತ್ತಿದ್ದ
ಜನ ಮಣ್ಣಿನ ಮಡಕೆಗಳಿಗೆ ಮೊರೆ ಹೋಗಿದ್ದಾರೆ. ಈ ಪಾತ್ರೆಯಲ್ಲಿ ಅಡುಗೆ ಮಾಡಿದ ನಂತರವೂ ಆಹಾರದ ಪೌಷ್ಟಿಕಾಂಶದ ಮೌಲ್ಯ ಇರುವ ಕಾರಣ,
ಆರೋಗ್ಯ ಪೌಷ್ಟಿಕತಜ್ಞರು ಸಹ ಮಣ್ಣಿನ ಮಡಕೆಗಳನ್ನು ಬಳಸಲು ಸಲಹೆ ನೀಡುತ್ತಾರೆ.