ಬೆಂಗಳೂರು : ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟ್ ನಲ್ಲಿ ಪ್ರಯಾಣಿಕನೊಬ್ಬ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂತಾ ಅವಾಂತರ ಸೃಷ್ಟಿಸಿದ್ದ. ಬ್ಯಾಗೇಜ್ ಚೆಕ್ ಮಾಡೋಕೆ ಬಾಂಬ್ ಇದೆ ಅಂತಾ ಜೋಕ್ ಮಾಡೋಕೆ ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರಯಾಣಿಕನನ್ನ ವಶಕ್ಕೆ ಪಡೆದ ಏರ್ ಪೋರ್ಟ್ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಯಾಣಿಕ ರಾಜೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ರಾಜೇಶ್ ಕುಮಾರ್ ಟರ್ಮಿನಲ್-2 ನಲ್ಲಿ ಚೆಕ್ ಇನ್ ವೇಳೆ ಅವಾಂತರ ಸೃಷ್ಟಿಸಿದ್ದಾನೆ. ಚೆಕ್ ಇನ್ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದರಿಂದ ಭದ್ರತಾ ಸಿಬ್ಬಂದಿ ಆತಂಕಗೊಂಡು ಪ್ರಯಾಣಿಕನ ಬ್ಯಾಗ್ ತಪಾಸಣೆ ನಡೆಸಿದ್ದಾರೆ.
ಈ ವೇಳೆ ರಾಜೇಶ್ ತಮಾಷೆ ಮಾಡಿದ್ದಾಗಿ ಹೇಳಿದ್ರು ಭದ್ರತಾ ಸಿಬ್ಬಂದಿ ಪ್ರಯಾಣಿಕ ರಾಜೇಶ್ ನನ್ನ ಕೆಐಎಎಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಚೆಕ್ ಇನ್ ವೇಳೆ ಜೋಕ್ ಮಾಡಿದ್ದಾಗಿ ರಾಜೇಶ್ ಹೇಳಿದ್ದಾನೆ. ರಾಜೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಕೆಐಎಎಲ್ ಪೊಲೀಸರು ನಂತರ ಬಂಧನ ಪ್ರಕ್ರಿಯೆ ಮುಗಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಂಧಿತ ರಾಜೇಶ್ ಹರಿಯಾಣ ಮೂಲದವನಾಗಿದ್ದಾನೆ.