ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಐಪಿಎಲ್ 2025 ರ ಮೊದಲ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಗೆ ನಿಷೇಧ

On: May 18, 2024 6:12 PM
Follow Us:
---Advertisement---

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಬಿಸಿಸಿಐ ಪಂದ್ಯದ ಶೇ.30ರಷ್ಟು ದಂಡದೊಂದಿಗೆ ಐಪಿಎಲ್ 2025ರ​ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

ಶುಕ್ರವಾರ ವಾಂಖೆಡೆಯಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 18 ರನ್‌ಗಳಿಂದ ಸೋಲನುಭವಿಸಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳು ಮುಗಿದಿದ್ದು, ಹೀಗಾಗಿ ಈ ನಿಷೇಧ ಮುಂದಿನ ಸೀಸನ್​ನಲ್ಲಿ ಜಾರಿಯಾಗಲಿದೆ. ಅದರಂತೆ ಐಪಿಎಲ್ 2025ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದಾದರೆ ಮೊದಲ ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.

ಈ ಲೀಗ್​ನಲ್ಲಿ ಹಾರ್ದಿಕ್ ಪಾಂಡ್ಯ ಪಂದ್ಯವೊಂದಕ್ಕೆ ನಿಷೇಧಕ್ಕೊಳಗಾದ 2ನೇ ನಾಯಕರಾಗಿದ್ದಾರೆ. ಇದಕ್ಕೂ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಕೂಡ ನಿಧಾನಗತಿಯ ಓವರ್​ನಿಂದಾಗಿ 1 ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ದರು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಐಪಿಎಸ್

ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಪತ್ನಿ ಬಂಧನದವರೆಗೆ ಅಂತ್ಯಕ್ರಿಯೆ ನೆರವೇರಿಸಲ್ಲ: ಮೃತ ಎಎಸ್ಐ ಸಂದೀಪ್ ಕುಟುಂಬ ಪಟ್ಟು!

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

ತ್ಯಾಜ್ಯ

ನರಕ ಚರ್ತುದರ್ಶಿಯಂದು ಕಸ ಹೊರಗೆ ಎಸೆಯಬೇಡಿ, ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಿ

ದಾವಣಗೆರೆ

ಆಗ್ನೇಯ ಪದವೀಧರರ ಕ್ಷೇತ್ರ, ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳುವುದೇಗೆ?: ದಾವಣಗೆರೆ ಡಿಸಿ ಮಹತ್ವದ ಮಾಹಿತಿ

Leave a Comment