SUDDIKSHANA KANNADA NEWS/ DAVANAGERE/ DATE:06-06-2023
ದಾವಣಗೆರೆ(DAVANAGERE): ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. 2 ಸಾವಿರ ರೂಪಾಯಿ ಅತ್ತೆ ಕೊಡುತ್ತಾರೋ, ಸೊಸೆಗೆ ನೀಡುತ್ತಾರೋ ಗೊತ್ತಿಲ್ಲ. ಆದ್ರೆ, ಹಣಕ್ಕಾಗಿ ಅತ್ತೆ – ಸೊಸೆ ನಡುವೆ ಹುಳಿ ಹಿಂಡುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅತ್ತೆ ಸೊಸೆ ಬೇರ್ಪಡಿಸಬಾರದು. ಅತ್ತೆ ಹಾಗೂ ಸೊಸೆಗೂ ತಲಾ 2 ಸಾವಿರ ರೂಪಾಯಿ ನೀಡಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. RENUKACHARYA) ಆಗ್ರಹಿಸಿದರು.
ಹೊನ್ನಾಳಿ ತಾಲೂಕಿನ ಹನುಮಸಾಗರ ತಾಂಡಾದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದ್ರೆ, ಅಧಿಕಾರಕ್ಕೆ ಬಂದ ಮೇಲೆ ಷರತ್ತುಗಳ ಮೇಲೆ ಷರತ್ತು ವಿಧಿಸುತ್ತಿದೆ. ಜನರಿಗೆ ಕೊಟ್ಟಿರುವ ಭರವಸೆ ಈಡೇರಿಸಿ ಎನ್ನುವುದಷ್ಟೇ ನನ್ನ ಕಳಕಳಿ. ಯಾವುದೇ ಷರತ್ತುಗಳನ್ನು ವಿಧಿಸದೇ ಜನರಿಗೆ ಯೋಜನೆ ತಲುಪಿಸಿ. ಗೃಹ ಲಕ್ಷ್ಮಿ (GRUHA LAKSHMI) ಯೋಜನೆಯಡಿ ಯಾವ ಕುಟುಂಬವೂ ಒಡೆದು ಹೋಗಬಾರದು ಎಂದು ಒತ್ತಾಯ ಮಾಡಿದರು.
ಗೃಹ ಲಕ್ಷ್ಮಿ (GRUHA LAKSHMI) ಅತ್ತೆ ಸೊಸೆಗೂ ಕೊಡಿ :
10 ಕೆ.ಜಿ ಅಕ್ಕಿ ಕೊಡುತ್ತಿಲ್ಲ. ಒಂದು ಮನೆಗೆ ಗೃಹ ಲಕ್ಷ್ಮಿ (GRUHA LAKSHMI) ಯೋಜನೆಯಡಿ ಎರಡು ಸಾವಿರ ರೂಪಾಯಿ ಅತ್ತೆಗೆ ಕೊಡ್ತಾರೋ ಸೊಸೆಗೆ ಕೊಡ್ತಾರೋ ಗೊತ್ತಿಲ್ಲ. ಸರ್ಕಾರದ ಭರವಸೆಯಿಂದ ಅತ್ತೆ ಸೊಸೆಗೆ ಹೊಡೆದಾಡಬೇಕು. ಮನೆ ಡಿವೈಡ್ ಮಾಡಬಾರದು ಎಂದು ರೇಣುಕಾಚಾರ್ಯ ಮಹಿಳೆಯರ ಬಳಿ ಹೇಳುತ್ತಿದ್ದಂತೆ ಕೊಟ್ಟ ಮಾತು ಈಡೇರಿಸದಿದ್ದರೆ ನಾಲಗೆ ಸೀಳುತ್ತೇವೆ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಗೃಹ ಲಕ್ಷ್ಮಿ (GRUHA LAKSHMI) ಷರತ್ತು ವಿಧಿಸಬೇಡಿ:
ಚುನಾವಣೆಗೆ ಮುನ್ನ ಎಲ್ಲಾ ಮಹಿಳೆಯರಿಗೂ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಎಂದಿದ್ದರು. ಚುನಾವಣೆ ಪೂರ್ವದಲ್ಲಿ ಯಾವ ಷರತ್ತು ಹಾಕಿಲ್ಲ. ಆದ್ರೆ, ಈಗ ಕೆಂಪು ಬಸ್ ನಲ್ಲಿ ಮಾತ್ರ ಉಚಿತ ಎನ್ನತೊಡಗಿದ್ದಾರೆ. ಬಾಡಿಗೆ ಮನೆಯಲ್ಲಿ ಇದ್ದವರಿಗೆ ವಿದ್ಯುತ್ ಉಚಿತ ಎಂದಿದ್ರು. ಆದ್ರೆ, ಈಗ ಇಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ನನಗೂ ಫ್ರೀ, ಮಹಾದೇವಪ್ಪರಿಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಆದ್ರೆ, ಎಲ್ಲದಕ್ಕೂ ಷರತ್ತು ವಿಧಿಸುತ್ತಿರುವುದ್ಯಾಕೆ ಎಂದು ಪ್ರಶ್ನಿಸಿದರು.
ಎಲ್ಲಾ ಬಸ್ ಗಳಲ್ಲೂ ಅವಕಾಶ ಕೊಡಿ:
ಕೆಂಪು ಬಸ್ ನಲ್ಲಿ ಕೇವಲ 20 ಸೀಟುಗಳು ಮಾತ್ರ ಮಹಿಳೆಯರಿಗೆ ಸಿಗುತ್ತವೆ. ಧರ್ಮಸ್ಥಳ ಸೇರಿದಂತೆ ಯಾವುದೋ ಪ್ರವಾಸಿ ತಾಣಕ್ಕೆ ಹೋಗಲು 50 ಮಹಿಳೆಯರು ನಿರ್ಧರಿಸಿದರೆ ಉಚಿತ ಯಾಕೆ ಸಿಗುವುದಿಲ್ಲ. ಎಷ್ಟೇ ಜನರು ಪ್ರಯಾಣ ಮಾಡಿದರೂ ಉಚಿತ ಎಂದು ಘೋಷಿಸಬೇಕು. ಅದನ್ನು ಬಿಟ್ಟು ಇಷ್ಟೇ ಸೀಟು ಎಂದು ಯಾಕೆ ಈಗ ಹೇಳುತ್ತಿದ್ದಾರೆ. ಚುನಾವಣೆಗೆ ಮುನ್ನ ಇದನ್ನು ಯಾಕೆ ಹೇಳಲಿಲ್ಲ. ಇನ್ನು ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮೋ ಪದವೀಧರರಿಗೆ ಕೇವಲ 2022-2023 ನೇ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಮಾತ್ರ ಯುವ ನಿಧಿ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನು ಬಿಟ್ಟು ಕಳೆದ ಹತ್ತು ವರ್ಷಗಳಿಂದ ನಿರುದ್ಯೋಗಿಗಳಾಗಿರುವವರಿಗೆ ಹಾಗೂ ಡಿಪ್ಲೋಮೋ ಪದವೀಧರರಿಗೂ ತಲಾ 3000 ರೂಪಾಯಿ ಹಾಗೂ 1500 ರೂಪಾಯಿ ನೀಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಯನ್ನು ಒದಿ
ಏಯ್ ಕುಳಿತ್ಕೋ… ನಾನಿನ್ನು ಇಲ್ಲೇ ಇದ್ದೇನೆ: ಎಸ್ಪಿ ವಿರುದ್ಧ ಸಿಎಂ ಗರಂ…!
https://suddikshana.com/cm-siddaramai-angry-in-davanagere/
ಸಿಲಿಂಡರ್ ದರ ಕಡಿಮೆ ಮಾಡಲ್ಲ:
ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಸಹಾಯಧನ ಹೆಚ್ಚಳ ಮಾಡಿಲ್ಲ. ಸಿಲಿಂಡರ್ ದರ ಕಡಿಮೆಯಾಗಿಲ್ಲ. ಬೇರೆ ಬೇರೆ ಭರವಸೆಗಳನ್ನು ಈಡೇರಿಸುವ ಬಗ್ಗೆ ಮಾತನಾಡಿಲ್ಲ. ಹಾಲಿಗೆ 1 ರೂಪಾಯಿ 75 ಪೈಸೆ ಹೆಚ್ಚಳ
ಮಾಡಿದ್ದಾರೆ. ಎಸ್ಸಿ, ಎಸ್ಟಿಗಳಿಗೆ 75 ಯೂನಿಟ್ ಕರೆಂಟ್ ಫ್ರೀ ಕೊಡುತ್ತೇವೆ ಎಂದು ನಾವು ಹೇಳಿದ್ದೆವು. ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂವು ಇಡಬೇಡಿ. ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಿ ಎಂದರು.
ದಿವಾಳಿ ಆಗದಂತೆ ಎಚ್ಚರ ವಹಿಸಿ:
ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳು ಆರ್ಥಿಕ ದಿವಾಳಿ ಹಂತಕ್ಕೆ ತಲುಪಿವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಕುಂಠಿತವಾಗಲಿದೆ. ಎಲ್ಲಿಂದ ಹಣಕಾಸು ಹೊಂದಿಸಿಕೊಳ್ಳುತ್ತೇವೆಂದು ಸರ್ಕಾರ ಹೇಳಿಲ್ಲ. ತೆರಿಗೆ ವಿಧಿಸಿ
ಹಣ ವಸೂಲಿ ಮಾಡಲಾಗುತ್ತದೆ ಎಂದು ಆರೋಪಿಸಿದರು.
ವಚನ ಭ್ರಷ್ಟರಾಗಬೇಡಿ:
ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ನಾನು ಟೀಕೆ ಟಿಪ್ಪಣಿ, ವಿರೋಧ ಮಾಡಲು ಹೋಗುವುದಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ನಾನು ಮತ್ತು ಕುಟುಂಬ ಸದಸ್ಯರು ಬಳಸಿಕೊಳ್ಳಲ್ಲ. ನಿರ್ಗತಿಕರಿಗೆ ಕೊಡಿ. ಬಡವರಿಗೆ ಕೊಡಿ.
ಷರತ್ತು ತೆಗೆದು ಬೇಷರತ್ತಾಗಿ ನೀಡಬೇಕು. ವಚನ ಭ್ರಷ್ಟರಾಗಬೇಡಿ ಎಂದು ಕುಟುಕಿದರು.
Comments 1