ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಮಫಲ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನ

On: May 13, 2024 9:05 AM
Follow Us:
---Advertisement---

ಸೀತಾಫಲ ಸಾಮಾನ್ಯವಾಗಿ ತಿಂದಿರುತ್ತೇವೆ, ಆದರೆ ರಾಮಫಲ ಅಷ್ಟಾಗಿ ದೊರೆಯುವುದಿಲ್ಲ.ಹಣ್ಣಿನ ಒಳ-ಹೊರಗಿನ ಹೋಲಿಕೆಯಲ್ಲಿ ಸೀತಾಫಲದ ಹತ್ತಿರದ ಸಂಬಂಧಿಯಂತೆ ಕಾಣುವ ಈ ಹಣ್ಣು, ಸೀತಾಫಲದ ಜಾತಿಗೇ ಸೇರಿದ್ದು. ರುಚಿ ಮತ್ತು ಘಮದಲ್ಲಿ ಎಲ್ಲರಿಗೂ ಇಷ್ಟವಾಗುವಂಥದ್ದು.

ಒಂದು ದೊಡ್ಡ ಗಾತ್ರದ ರಾಮಫಲದಲ್ಲಿ, ಅಂದಾಜು 75 ಕ್ಯಾಲರಿ ಶಕ್ತಿ, 17.5 ಗ್ರಾಂ ಪಿಷ್ಟ, 1.5 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ, ನಾರು, ಕೊಬ್ಬು, ಹಲವು ಬಿ ಜೀವಸತ್ವಗಳು, ವಿಟಮಿನ್‌ ಸಿ, ಕ್ಯಾಲ್ಶಿಯಂ, ಕಬ್ಬಿಣ, ಪೊಟಾಶಿಯಂನಂಥ ಬಹಳಷ್ಟು ಬಗೆಯ ಸೂಕ್ಷ್ಮ ಪೋಷಕಾಂಶಗಳು ಇದರಲ್ಲಿವೆ. ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ನಿರ್ವಹಿಸುವ ಗುಣ ರಾಮಫಲಕ್ಕಿದೆ.

ರುಚಿಯಲ್ಲಿ ಸೀತಾಫಲಕ್ಕಿಂತ ಕೊಂಚಕಡಿಮೆ ಸಿಹಿ ಇರುವ ಇದನ್ನು ಮಧುಮೇಹಿಗಳೂ ಸೇವಿಸಬಹುದು. ಈ ಹಣ್ಣಿನಲ್ಲಿ ಸಮೃದ್ಧವಾಗಿರುವ ನಾರಿನಂಶವು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಾಂಗಗಳಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಿ, ಸಮತೋಲನ ಕಾಪಾಡಲು ನೆರವಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳು ದೂರಾಗಿ, ಮಲಬದ್ಧತೆ ನಿವಾರಣೆಯಾಗುತ್ತದೆ. ರಾಮ ಫಲ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇದೆ. ಇದು ರಕ್ತ ಹೀನತೆ ಇರುವವರಿಗೆ ಅದ್ಭುತ ರೀತಿಯಲ್ಲಿ ಆರೈಕೆ ಮಾಡುವುದು. ರಕ್ತ ಹೀನತೆ, ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಂಪೂರ್ಣ ಪೋಷಣೆ ನೀಡುವುದು. ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶಗಳನ್ನು ದೇಹದಿಂದ ದೂರ ಮಾಡುವುದು. ಕ್ಯಾಲ್ಸಿಮ್ ಪ್ರಮಾಣವನ್ನು ಹೆಚ್ಚಿಸಿ, ಮೂಳೆ ಮತ್ತು ಸಂಧುಗಳ ಆರೋಗ್ಯವನ್ನು ಸುಧಾರಿಸುವುದು ವಿಟಮಿನ್‌ ಬಿ ಮತ್ತು ಎ ಅಂಶಗಳು ಕೂದಲು ಮತ್ತು ತ್ವಚೆಯ ಆರೋಗ್ಯವರ್ಧನೆಗೆ ಪೂರಕವಾಗಿ ವರ್ತಿಸುತ್ತವೆ. ಮೊಡವೆ, ಸುಕ್ಕು ಚರ್ಮದ ತೊಂದರೆಗಳಿಂದ ಹೈರಾಣಾಗಿದ್ದರೆ ರಾಮಫಲ ಸೇವನೆ ಫಲ ನೀಡುತ್ತದೆ.

Join WhatsApp

Join Now

Join Telegram

Join Now

Leave a Comment