ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಂಗಳೂರು: ವಿಮಾನದಿಂದ ಸಮುದ್ರಕ್ಕೆ ಹಾರುವುದಾಗಿ ಬೆದರಿಕೆ – ಎಫ್‌ಐಆರ್ ದಾಖಲು!

On: May 11, 2024 3:22 PM
Follow Us:
---Advertisement---

ಮಂಗಳೂರು: ದುಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ವಿಮಾನದಿಂದ ಜಿಗಿಯುವುದಾಗಿ ಬೆದರಿಕೆ ಹಾಕಿ ಸಂಬಂಧ ಏರ್ ಇಂಡಿಯಾ ಎಕ್ಸ್ ಪ್ರೆಸ್ ಭದ್ರತಾ ಸಂಯೋಜಕ ಸಿದ್ದಾರ್ಥ ದಾಸ್ ನೀಡಿದ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ಕಣ್ಣೂರಿನ ನಿವಾಸಿಯಾಗಿರುವ ಮುಹಮ್ಮದ್ ಬಿ.ಸಿ(24) ವಿರುದ್ದ ಈ ಆರೋಪ ಕೇಳಿಬಂದಿದೆ. ಮೇ 8 ರಂದು ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ವಿಮಾನದ ಸಿಬ್ಬಂದಿಯೊಂದಿಗೆ ಅಶಿಸ್ತಿನ ರೀತಿಯಲ್ಲಿ ವರ್ತಿಸಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾನೆ.

ದುಬೈನಿಂದ ವಿಮಾನ ಹೊರಟ ನಂತರ ಮೊಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ನಂತರ ಹೊರಬಂದು ವಿಮಾನದ ಪ್ರಯಾಣಿಕರಲ್ಲದ ವ್ಯಕ್ತಿ ಬಗ್ಗೆ ಸಿಬಂದಿ ಬಳಿ ವಿಚಾರಿಸಿದ್ದರು. ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ವಿಮಾನದ ಸಿಬ್ಬಂದಿ ವರ್ಗದವರಿಗೆ ತೊಂದರೆ ನೀಡಿದ್ದರು. ವಿಮಾನದಲ್ಲಿ ಪರಿಚಾರಕ ಸಿಬ್ಬಂದಿ ಆತನ ಬಳಿಯೇ ಇದ್ದರೂ ಪದೇ – ಪದೇ ಕಾಲಿಂಗ್ ಬಟನ್ ಪ್ರೆಸ್ ಮಾಡಿ ತೊಂದರೆ ನೀಡಿದ್ದಾನೆ. ನಂತರ ಆತ ವಿಮಾನದಲ್ಲಿದ್ದ ಲೈಫ್ ಜಾಕೆಟ್ ಅನ್ನು ತೆಗೆದು ಸಿಬ್ಬಂದಿಯವರ ಕೈಗೆ ನೀಡಿ, ವಿಮಾನ ಇಳಿದ ನಂತರ ಇದನ್ನು ಬಳಸುವುದಾಗಿ ತಿಳಿಸಿರುತ್ತಾನೆ. ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಹಾರಬೇಕು ಎಂದು ಬೆದರಿಕೆ ಒಡ್ಡಿ ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

Join WhatsApp

Join Now

Join Telegram

Join Now

Leave a Comment