ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇರಳದ ಬಹುತೇಕ ದೇಗುಲಗಳಲ್ಲಿ ಕಣಗಿಲೆ ಹೂವು ಬ್ಯಾನ್

On: May 11, 2024 1:25 PM
Follow Us:
---Advertisement---

ತಿರುವನಂತಪುರ : ಇತ್ತೀಚೆಗೆ ಕಣಗಿಲೆ ಹೂವನ್ನು ತಿಂದು ಯುವತಿಯೊಬ್ಬಳು ಸಾವನಪ್ಪಿದ ಬೆನ್ನಲ್ಲೇ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ ತನ್ನ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪ್ರಶಾಂತ್‌, ‘ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂ ಸೇವಿಸಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಅದೇ ರೀತಿ ಪಟ್ಟಣಂತಿಟ್ಟದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ಆದ್ದರಿಂದ ಕಣಗಿಲೆ ಹೂವನ್ನು ದೇಗುಲಗಳಲ್ಲಿ ಬಳಸಬಾರದು ಎಂದು ಟಿಡಿಬಿ ತೀರ್ಮಾನಿಸಿದೆ. ಇದರ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.

 

Join WhatsApp

Join Now

Join Telegram

Join Now

Leave a Comment