ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾ ನಾಯಕಿ ಯಾರು?

On: May 11, 2024 12:59 PM
Follow Us:
---Advertisement---

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿರಲಿದ್ದಾರೆ ಎನ್ನಲಾಗಿತ್ತು. ಆ ನಂತರ ನಯನತಾರಾ ಹೆಸರು ಕೇಳಿ ಬಂತು. ಈಗ ಮತ್ತೊಬ್ಬ ಬಾಲಿವುಡ್ ನಟಿಯರ ಹೆಸರು ಕೇಳಿ ಬರುತ್ತಿದೆ.

ಯಶ್ (Yash) ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ (Shooting) ಆರಂಭ ಮಾಡುತ್ತಿದ್ದಂತೆ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಅಸಲಿಗೆ ಈ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಯಶ್, ಭಾರಿ ದೊಡ್ಡದಾಗಿ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ. ಅತ್ಯುತ್ತಮ ಎನ್ನಬಹುದಾದ ತಂಡವನ್ನು ಕಟ್ಟಿಕೊಂಡು ಸಿನಿಮಾ ಚಿತ್ರೀಕರಣಕ್ಕೆ ಇಳಿದಿದ್ದಾರೆ. ಆದರೆ ಸಿನಿಮಾದ ನಾಯಕಿ ಯಾರಾಗಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಅಲ್ಲದೆ ನಾಯಕಿ ಯಾರಾಗಲಿದ್ದಾರೆ ಎಂಬುದು ಸಾಕಷ್ಟು ಗೊಂದಲವನ್ನು ಪ್ರೇಕ್ಷಕರಲ್ಲಿ ಸೃಷ್ಟಿಯಾಗಿದೆ. ದಿನಕ್ಕೊಂದು ಹೆಸರು ತೇಲಿ ಬರುತ್ತಿರುವುದೇ ಇದಕ್ಕೆ ಕಾರಣ.

ಮೊದಲಿಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಕರೀನಾ ಕಪೂರ್ ನಾಯಕಿಯಾಗಿರಲಿದ್ದಾರೆ ಎನ್ನಲಾಗಿತ್ತು. ಕರೀನಾ ಕಪೂರ್ ಸಹ ತಾವು ದಕ್ಷಿಣದ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇತ್ತೀಚೆಗೆ ಹೊರಬಂದಿರುವ ಸುದ್ದಿಯ ಪ್ರಕಾರ, ಡೇಟ್ಸ್ ಅಥವಾ ಇನ್ನಿತರೆ ಕಾರಣದಿಂದ ಕರೀನಾ ಕಪೂರ್ ಅವರು ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ.

ಕರೀನಾ ಕಪೂರ್, ‘ಟಾಕ್ಸಿಕ್’ ಸಿನಿಮಾದಿಂದ ಹೊರಗೆ ಉಳಿದಿದ್ದಾರೆ ಎಂದ ಕೂಡಲೇ ಆ ಸ್ಥಾನಕ್ಕೆ ನಯನತಾರಾ ಹೆಸರು ಕೇಳಿ ಬಂತು. ಕರೀನಾ ಕಪೂರ್ ಬದಲಿಗೆ ನಯನತಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತು. ಪ್ರೇಕ್ಷಕರು ಸಹ ಖುಷಿ ಪಟ್ಟರು. ಈ ಹಿಂದೆ ಉಪೇಂದ್ರ ಜೊತೆ ಸೂಪರ್ ಸಿನಿಮಾದಲ್ಲಿ ನಟಿಸಿದ್ದ ನಯನತಾರಾ ಈಗ ‘ಟಾಕ್ಸಿಕ್’ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈಗ ಮತ್ತೊಮ್ಮೆ ನಾಯಕಿ ಹೆಸರು ಬದಲಾಗಿದೆ.

ಈಗ ಹೊಸದಾಗಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕರೀನಾ ಕಪೂರ್ ನಟಿಸಬೇಕಿದ್ದ ಪಾತ್ರದಲ್ಲಿ ಬಾಲಿವುಡ್​ನ ಪ್ರತಿಭಾವಂತ ನಟಿ ನಟಿಸಲಿದ್ದಾರೆ. ಹೌದು, ನಟಿ ಹುಮಾ ಖುರೇಷಿ, ಕರೀನಾ ಕಪೂರ್ ಬದಲಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಗ್ಯಾಂಗ್ಸ್ ಆಫ್ ವಸೇಪುರ್’ ಸೇರಿದಂತೆ ಹಲವು ಸೂಪರ್ ಹಿಟ್ ಹಿಂದಿ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ. ಹುಮಾಗೆ ದಕ್ಷಿಣ ಭಾರತದ ಸಿನಿಮಾಗಳು ಹೊಸದಲ್ಲ. ಈ ಹಿಂದೆ ರಜನೀಕಾಂತ್ ಜೊತೆಗೆ ‘ಕಾಲ’ ಸಿನಿಮಾದಲ್ಲಿ ನಟಿದ್ದರು. ಅಲ್ಲದೆ ಅಜಿತ್ ನಟನೆಯ ‘ವಾಲಿಮೈ’ ಸಿನಿಮಾನಲ್ಲಿಯೂ ನಟಿಸಿದ್ದರು. ಈಗ ಕನ್ನಡ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೆ ನಟಿ ಹುಮಾ ಖುರೇಷಿ, ನಟ ಯಶ್​ರನ್ನು ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಆರಂಭಿಸಿದ್ದಾರಂತೆ. ಇದನ್ನು ನೋಡಿಯೇ ಕೆಲವು ಅಭಿಮಾನಿಗಳು, ಹುಮಾ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆ ನಟಿಸಲಿದ್ದಾರೆ ಎನ್ನುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಕನ್ನಡದ ಈವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಇದಾಗಿರಲಿದೆ.

Join WhatsApp

Join Now

Join Telegram

Join Now

Leave a Comment