SUDDIKSHANA KANNADA NEWS/ DAVANAGERE/ DATE:05-06-2023
ದಾವಣಗೆರೆ (DAVANAGERE): ನೂತನ ಸರ್ಕಾರದ ಮೊದಲ ರಾಜ್ಯ ಬಜೆಟ್ (BUDGET) ಅಧಿವೇಶನವನ್ನು ಜುಲೈ (JULY) 7ಕ್ಕೆ ಕರೆಯುತ್ತೇನೆ. ಅಂದೇ ಮಂಡನೆ ಮಾಡುತ್ತೇವೆ. ಆಯವ್ಯಯದ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಸಚಿವ ಸಂಪುಟ ಸಭೆ (CABINATE MEETING)ಯಲ್ಲಿ ಇನ್ನು ಬಜೆಟ್ ಗಾತ್ರದ ನಿರ್ಧಾರ ಆಗಿಲ್ಲ. ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM SIDDARAMAI) ತಿಳಿಸಿದರು.
ಬಾಪೂಜಿ ಎಂಬಿಎ ಗ್ರೌಂಡ್ (MBA GROUND) ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜುಲೈ 3 (JULY3) ರಂದು ರಾಜ್ಯಪಾಲರ ಭಾಷಣ ನಡೆಯುತ್ತೆ. ಆಮೇಲೆ ಒಂದು ವಾರಗಳ ಕಾಲ ಬಜೆಟ್ ಅಧಿವೇಶನ ನಡೆಸುವ ಕುರಿತಂತೆ ಚಿಂತನೆ ನಡೆಸುತ್ತಿದ್ದೇವೆ. ಚುನಾವಣೆ(ELECTION)ಗೆ ಮುನ್ನ ಕಾಂಗ್ರೆಸ್ (CONGRESS) ಪಕ್ಷವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆ ಈಡೇರಿಸಬೇಕಿದೆ. ಹೀಗಾಗಿ, ಸಿದ್ಧತೆ ನಡೆಸಬೇಕು. ಚುನಾವಣಾ ಸಮಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು 3 ಲಕ್ಷದ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಗಾತ್ರದ ಆಯವ್ಯಯ ಮಂಡಿಸಿತ್ತು. ಗಾತ್ರದ ಬಗ್ಗೆ ನಾವು ನಿರ್ಧರಿಸಿಲ್ಲ ಎಂದು ಹೇಳಿದರು.
ಗೋಹತ್ಯೆ ನಿಷೇಧ ಕುರಿತಂತೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. 1964 ರ ಆ್ಯಕ್ಟ್ ನಲ್ಲಿ 12 ವರ್ಷ ತುಂಬಿರುವ ರಾಸುಗಳು, ವಯಸ್ಸಾಗಿರುವ ಜಾನುವಾರುಗಳು, ಬರಡು ರಾಸುಗಳು, ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳು ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಪಶುಸಂಗೋಪನಾ ಸಚಿವರು ಹೇಳುವಾಗ ಸರಿಯಾಗಿ ಮಾಹಿತಿ ನೀಡಿಲ್ಲ. ಆ್ಯಕ್ಟ್ ಇದೆ. ಕೆಲ ತಿದ್ದುಪಡಿಗಳನ್ನು ಬಿಜೆಪಿ ಸರ್ಕಾರ ಮಾಡಿತ್ತು. ಮತ್ತೆ ಏನಾಗಿದೆ ಎಂಬ ಕುರಿತಂತೆ ಸಮಗ್ರ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ನಾವು ತೀರ್ಮಾನ ಮಾಡಿದ್ದಲ್ಲ ಎಂದ ಅವರು, ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಕ್ಯಾಂಟೀನ್ ನಲ್ಲಿ
ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ನೀಡದಿದ್ದರೆ ಕೊಡಿಸೋಣ ಎಂದರು.