ದಾವಣಗೆರೆ: ರಾಜ್ಯ (STATE) ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆ (ELECTION) ಯ ಅಬ್ಬರ ಇಲ್ಲದಿದ್ದರೂ ಗುಂಗು ಕೇಳಿ ಬರುತ್ತಿದೆ. ಎಲ್ಲಾ ಪಕ್ಷಗಳಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಇನ್ನು ಚುನಾವಣಾ ನೀತಿ ಜಾರಿಯಾಗಿಲ್ಲ. ಆಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬ್ಯಾನರ್ಸ್ (BANNERS) ಮತ್ತು ಬಂಟಿಂಗ್ಸ್ (BUNTING) ತೆರೆವುಗೊಳಿಸುವ ಕೆಲಸ ಶುರು ಮಾಡಿದೆ.
ಹರಿಹರ (HARIHARA), ಮಲೆಬೆನ್ನೂರು, ದಾವಣಗೆರೆ, ಚನ್ನಗಿರಿ ಒಳಗೊಂಡಂತೆ ಪ್ರಮುಖ ಪ್ರದೇಶಗಳಲ್ಲಿ ಯಾವುದೇ ರೀತಿಯ ಅನುಮತಿ ಪಡೆಯದೇ ಅಳವಡಿಸಿದ್ದ ಹೋರ್ಡಿಂಗ್ಸ್, ಬ್ಯಾನರ್ಸ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ತೆರವು (REMOVE) ಕಾರ್ಯ ಬಿರುಸಾಗಿ ನಡೆಯುತ್ತಿದೆ.
ಕೆಲವೆಡೆ ಜಾಹೀರಾತು ಫಲಕ ಅಳವಡಿಸಲಾಗಿದ್ದು, ಯಾವುದೇ ರೀತಿಯ ಅನುಮತಿ ಪಡೆದಿಲ್ಲದಿರುವುದು ಗಮನಕ್ಕೆ ಬಂದಿದೆ. ಇದುವರೆಗೆ 244 ಪೋಸ್ಟರ್ಸ್, 117 ಬ್ಯಾನರ್ ಗಳು, 16 ವಾಲ್‍ಪೇಂಟ್ ಒಳಗೊಂಡಂತೆ 509 ಪ್ರಚಾರ ಫಲಕಗಳನ್ನು
ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ (DC SHIVANANDA KAPASHI) ಮಾಹಿತಿ ನೀಡಿದ್ದಾರೆ.
ಪರ್ಮೀಷನ್ (PERMISSION) ಪಡೆಯದೇ ಮದ್ಯ ಮಾರಾಟ ಮಾಡುತ್ತಿದ್ದ ಕಡೆಗಳಲ್ಲಿ ದಾಳಿ ಮಾಡಿದ್ದು, ಒಟ್ಟು 112 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಅಕ್ರಮದ ಮೇಲೆ ನಿಗಾ:
ಮತದಾರರಿಗೆ ಆಮೀಷವೊಡ್ಡುವ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ನಾನು ಸಹ ಸ್ಥಳಕ್ಕೆ ಹೋಗಿದ್ದೆ. ಆದ್ರೆ, ಯಾವುದೇ ರೀತಿಯ ವಸ್ತುಗಳನ್ನು ಹಂಚುತ್ತಿದ್ದದ್ದು ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರಿಗೆ ವಿತರಿಸಲು ಕುಕ್ಕರ್, ಸೀರೆ (SARRY) ಸೇರಿದಂತೆ ಇತರೆ ವಸ್ತುಗಳ ಸಂಗ್ರಹ ಮಾಡಲಾಗುತ್ತಿರುವ ಕುರಿತಂತೆಯೂ ಗಮನಿಸಲಾಗುತ್ತಿದೆ. ಯಾವುದೇ ರೀತಿಯ ಅಕ್ರಮ ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.