ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಸ್ ರಶ್ ಇತ್ತು.. ಸೀಟ್ ಮೇಲೆ ಹಾಕಿದ್ದ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು…! ಅದ್ರೊಳಗಿದ್ದ ಬಂಗಾರದ ಲಾಂಗ್ ಚೈನ್, ವಿವೋ ವೈ ಮೊಬೈಲ್ ಪತ್ತೆಯಾಗಿದ್ದು ಹೇಗೆ…?

On: March 24, 2024 8:10 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE: 24-03-2024

ದಾವಣಗೆರೆ: ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಸೀಟ್ ಹಿಡಿಯುವುದು ಸುಲಭ ಮಾತಲ್ಲ. ತುಂಬಾನೇ ಪೈಪೋಟಿ ಇರುತ್ತದೆ. ಅದರಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಬಟ್ಟೆ, ಕರ್ಚೀಫ್, ವ್ಯಾನಿಟಿ ಬ್ಯಾಗ್, ಟವಲ್ ಸೇರಿದಂತೆ ಇತರೆ ವಸ್ತುಗಳನ್ನು ಸೀಟ್ ಮೇಲೆ ಹಾಕುತ್ತಾರೆ. ಆದ್ರೆ, ವ್ಯಾನಿಟಿ ಬ್ಯಾಗ್ ಹಾಕಿದ ಮಹಿಳೆಯು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಲಾಂಗ್ ಚೈನ್ ಹಾಗೂ ಮೊಬೈಲ್ ಕಳೆದುಕೊಂಡ ಘಟನೆ ನಡೆದಿತ್ತು. ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ ಏನು..?

2023ರ ಮಾರ್ಚ್ ಮಾರ್ಚ್ 24ರಂದು ಚನ್ನಗಿರಿಯ ಮಮತಾ ಎನ್ನುವವರು ಸಂಬಂಧಿಕರ ಗೃಹ ಪ್ರವೇಶ ಕಾರ್ಯಕಮದ ಪ್ರಯುಕ್ತ ದಾವಣಗೆರೆ ತಾಲೂಕಿನ ಹೆಚ್. ಕಲಪನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ಸು ಊರಿಗೆ
ಹೋಗುವ ಸಲುವಾಗಿ ಸಂಜೆ 4.15 ರ ಸುಮಾರಿಗೆ ದಾವಣಗೆರೆ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ರಷ್ ಇದ್ದ ಕಾರಣ ಸೀಟ್ ಹಿಡಿಯಲು ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಸೀಟ್ ಮೇಲೆ ಹಾಕಿ ಬಸ್ ಒಳಗೆ ಹೋಗಿ ನೋಡಿದಾಗ ವ್ಯಾನಿಟಿ ಬ್ಯಾಗ್ ಇರಲಿಲ್ಲ.

ವ್ಯಾನಿಟಿ ಬ್ಯಾಗ್ ನಲ್ಲಿದ್ದಸುಮಾರು 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್ ಅಂದಾಜು ಮೌಲ್ಯ 1,80,000, ವಿವೋ ವೈ-12 ಮೊಬೈಲ್ ಕಳ್ಳತನವಾಗಿದೆ ಎಂದು ಬಡಾವಣೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ವಿಜಯ ಕುಮಾರ್ ಹಾಗೂ ಜಿ. ಮಂಜುನಾಥ, ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರ
ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಎಂ. ಆರ್. ಚೌಬೆ ನೇತೃತ್ವದ ಪೊಲೀಸ್ ತಂಡವು ಆರೋಪಿಗೆ ಹುಡುಕಾಟ ನಡೆಸಿತ್ತು.

ಇಂದು ಬೆಳಗ್ಗೆ ದಾವಣಗೆರೆ ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ನಲ್ಲಿ ಬಾತ್ಮಿದಾರರ ಮಾಹಿತಿ ಮೇರೆಗೆ ಈ ಪ್ರಕರಣದ ಆರೋಪಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿವು ಕುಮಾರ ಕೆ.ಸಿ. (56) ಎಂಬಾತನನ್ನು ಬಂಧಿಸಿದ್ದಾರೆ.

ವಿಚಾರಣೆ ಮಾಡಿದಾಗ ಕಳ್ಳತನವಾದ 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್, ವಿವೋ ವೈ 12 ಮೊಬೈಲ್ ಅನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪಿಎಸ್‌ಐ ರಮೇಶ್, ಎಎಸ್‌ಐ ರಾಜಪ್ಪ, ಸಿಬ್ಬಂದಿ ಅರುಣ ಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವ ಕುಮಾರ್, ಹುನುಮಂತಪ್ಪ, ಗೀತಾ ಹೆಚ್. ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment