ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಡತನದ ಬೇಗೆ ಲೆಕ್ಕಿಸದೇ ಪುತ್ರಿ ಓದಿಸಿದ ಮಹಾತಾಯಿ: ಭಾರತೀಯ ನೌಕಾದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಯುವತಿ ಯಾರು ಗೊತ್ತಾ…?

On: May 29, 2023 8:14 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-05-2023

ದಾವಣಗೆರೆ(DAVANAGERE): ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡರೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನ ಓದಿಸುವ ತಾಯಿ ಕನಸು. ಆದ್ರೆ, ಮನೆಯಲ್ಲಿ ದುಡಿಯುವುದು ಈ ತಾಯಿ ಮಾತ್ರ. ಬೇರೆ ಯಾರ ಆಸರೆ ಇಲ್ಲದೇ, ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿಕೊಂಡು ಮಕ್ಕಳನ್ನು ದಡ ಸೇರಿಸುವ ಆ ತಾಯಿಯ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಬಡತನದ ಬೇಗೆಯ ನಡುವೆ ಈ ತಾಯಿಯ ಮಗಳು ಮಾಡಿರುವ ಸಾಧನೆ ಕರುನಾಡು ಮೆಚ್ಚುವಂತದ್ದು.

ಅಂದ ಹಾಗೆ, ಇಂಥ ಸಾಧನೆ ಮಾಡಿರುವುದು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮಂಟಪ ಮೆಟ್ಟಿಲು ಹೊಳೆ ರಸ್ತೆಯ ಶಿಬಾರ ಸರ್ಕಲ್ ನ ಎಸ್ ಎಸ್ ಕೆ ಕಲ್ಯಾಣ ಮಂಟಪದ ಬಳಿ ವಾಸ ಇರುವ ದಿವಂಗತ ಮಂಜುನಾಥ್ ಹಾಗೂ ಲತಾ ದಂಪತಿಯ ಎರಡನೇ ಪುತ್ರಿ ವೈ. ಎಂ. ಭೂಮಿಕಾ.

BHOMILA, HARIHARA

ನೌಕಾದಳಕ್ಕೆ ಕರುನಾಡಿನ ಏಕೈಕ ಆಯ್ಕೆ ಈಕೆ:

ಕನಾ೯ಟಕದ ಹರಿಹರದಿಂದ ಭಾರತೀಯ ನೌಕಾದಳಕ್ಕೆ‌ ಆಯ್ಕೆಯಾಗಿರುವ‌ ಏಕೈಕ ‌ಅಭ್ಯರ್ಥಿ ಅಂದರೆ ಅದು ವೈ. ಎಂ. ಭೂಮಿಕಾ.

ತಾಯಿಯೇ ಪ್ರೇರಕ ಶಕ್ತಿ:

ಆಯ್ಕೆಯಾದವರ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಭೂಮಿಕಾ ಹರಿಹರ, ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕೀರ್ತಿ ತಂದು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈಕೆಯ ಸಾಧನೆ ಹಿಂದಿನ ಪ್ರೇರಕ ಶಕ್ತಿ ಅಂದರೆ ಈಕೆ ತಾಯಿ ಲತಾ:

ಮನೆ, ಮಕ್ಕಳ ಹೊಣೆ ಹೊತ್ತ ಲತಾ:

ಕಳೆದ ಆರು ವರ್ಷಗಳ ಹಿಂದೆ ಮಂಜುನಾಥ್ ಅವರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾಕೊಳ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಆಗ ಮೂವರು ಮಕ್ಕಳ ಜೊತೆ ಲತಾ ಅವರು ದಿಕ್ಕೆಟ್ಟು ಕುಳಿತಿದ್ದರು. ಮನೆಯಲ್ಲಿ ಬಡತನ ಸುಡುತ್ತಿದ್ದರೂ ಇದಕ್ಕೆ ಪ್ರತಿರೋಧವೆಂಬಂತೆ ನಿಂತು ತನ್ನ ದುಡಿಮೆಯಲ್ಲಿ ಮಕ್ಕಳ ಬದುಕು ರೂಪಿಸಬೇಕು ಎಂಬ ಪಣ ತೊಟ್ಟವರು. ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡುತ್ತಿದ್ದರೂ, ಬರುತ್ತಿದ್ದ ಆದಾಯವೂ ಕಡಿಮೆ.

ಈ ಆದಾಯದಲ್ಲಿ ಮನೆ ನಡೆಯಬೇಕು, ಮಕ್ಕಳ ಓದು, ಬಟ್ಟೆ, ಪಠ್ಯಪುಸ್ತಕ ಸೇರಿದಂತೆ ಇತರೆ ಖರ್ಚು ಹೊಂದಿಸುವುದು ತುಂಬಾನೇ ಕಷ್ಟವಾಗಿತ್ತು. ಆದರೂ ಎದೆಗುಂದದೇ ಮಕ್ಕಳ ಬದುಕಿಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಈಗ ಮಗಳ ಸಾಧನೆ ತಾಯಿಯ ಕಷ್ಟವೆಲ್ಲಾ ನಿವಾರಣೆಯಾಗುವ ಕಾಲ ಸನ್ನಿಹಿತವಾಗುತ್ತಿದೆ.

ಭೂಮಿಕಾ ಬಾಲ್ಯ ಜೀವನ (LIFE):

ಭೂಮಿಕಾ ಬಾಲ್ಯ ಎಲ್ಲರಂತಿಲ್ಲ. ಒಂದೆಡೆ ತಂದೆ ಕಳೆದುಕೊಂಡ ನೋವು, ಮತ್ತೊಂದೆಡೆ ತಾಯಿಯೇ ಆಶಾಗೋಪುರ. ಅಮ್ಮನೇ ಎಲ್ಲವೂ. ಆಕೆ ಕಷ್ಟವನ್ನು ಕಣ್ಣಾರೆ ಕಂಡಾಕೆ. ಜೀವನದಲ್ಲಿ ಏನನ್ನಾದರೂ ಸಾಧಿಸಿ ತಾಯಿಯ ಕಣ್ಣೀರು,
ಬಡತನದ ಬದುಕು ಬದಲಾಯಿಸಬೇಕೆಂಬ ಹಠ ತೊಟ್ಟವಳು. ದಾವಣಗೆರೆಯಲ್ಲಿ 1 ಹಾಗೂ 2 ನೇ ತರಗತಿಯನ್ನು ರಶ್ಮಿ ಶಾಲೆಯಲ್ಲಿ ಓದಿದ ಈಕೆ ಹಾಸ್ಟೆಲ್ ನಲ್ಲಿದ್ದರು. 3 ರಿಂದ 7ನೇ ತರಗತಿಯವರೆಗೆ ಹರಿಹರ ಜಿ ಹೆಚ್ ಪಿ ಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಭೂಮಿಕಾ, 8ರಿಂದ 10ನೇ ತರಗತಿಯವರೆಗೆ ಸುತ್ತೂರಿನ ಜೆ ಎಸ್ ಎಸ್ ಶಾಲೆಯಲ್ಲಿ ಓದಿದರು.

ಮೈಸೂರಿನ ದೊಡ್ಡಕಾನ್ಯ ಮೊರಾರ್ಜಿ ದೇಸಾಯಿ ರೆಸಿಡೆನ್ಶಿಯಲ್ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಫಾರ್ಮಸಿ ಅಭ್ಯಾಸ ಮಾಡಿದರು. ಆ ಬಳಿಕ ಭಾರತೀಯ ನೌಕಾದಳಕ್ಕೆ ಅರ್ಜಿ ಆಹ್ವಾಸನಿಸಲಾಗಿತ್ತು.
ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಭೂಮಿಕಾ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯಕ್ಕೆ ತರಬೇತಿ ಪಡೆದು ಆ ಬಳಿಕ ಕೆಲಸಕ್ಕೆ ಹೋಗಲಿದ್ದಾರೆ.

ಬೆಂಕಿಯಲ್ಲಿ ಅರಳಿದ ಹೂವು:

ಹರಿಹರ ಪಟ್ಟಣದ ಬಡ ಕುಟುಂಬದಲ್ಲಿ ಜನಿಸಿದ ಭೂಮಿಕಾ ಇಂದು ದೇಶದ ಪ್ರತಿಷ್ಠಿತ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಬೆಂಕಿಯಲ್ಲಿ ಅರಳಿದ ಹೂವು ಎಂಬಂತೆ ಬಡತನಕ್ಕೆ ಸೆಡ್ಡು ಹೊಡೆದು ಜೀವನದಲ್ಲಿ ಅತ್ಯುನ್ನತ
ಹುದ್ದೆ ಅಲಂಕರಿಸಲಿ ಎಂಬುದು ಶಿಕ್ಷಕರು ಹಾಗೂ ಹರಿಹರ ಪಟ್ಟಣದ ಜನರ ಆಸೆಯಾಗಿದೆ.

ಮೊಬೈಲ್ (MOBILE) ಬಳಕೆ ಮಾಡ್ತಿರಲಿಲ್ಲ:

ಭಾರತೀಯ ನೌಕಾದಳಕ್ಕೆ ಸಿದ್ದತೆ ನಿತ್ಯವೂ ಮಾಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹಾಗೂ ಸಂಜೆ ಸುಮಾರು ಮೂರರಿಂದ 4 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಫೇಸ್ ಬುಕ್, ವ್ಯಾಟ್ಸಪ್, ಇನ್ ಸ್ಟ್ರಾಗ್ರಾಂ ಸೇರಿದಂತೆ ಮೊಬೈಲ್ ಬಳಕೆ ಮಾಡ್ತಿರಲಿಲ್ಲ. ಫೋನ್ ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುತ್ತಿರಲಿಲ್ಲ. ಓದುತ್ತಿದ್ದೆ, ನೌಕಾದಳಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಷ್ಟೇ ಮೊಬೈಲ್ ಬಳಕೆ ಮಾಡುತ್ತಿದ್ದೆ. ಚಾಟ್ ಕಡಿಮೆ, ವ್ಯಾಟ್ಸಪ್ ಬಳಕೆನೂ ಬಿಟ್ಟುಬಿಟ್ಟಿದ್ದೆ. ಕಷ್ಟಪಟ್ಟು ಓದಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಭೂಮಿಕಾ ತಿಳಿಸಿದ್ದಾರೆ.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment