ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಹೋರಾಡುವವರಿಗೆ ಇದೆಂಥಾ ಶಿಕ್ಷೆ…? ದಾವಣಗೆರೆಯಲ್ಲಿ ಎಐಎಂಎಸ್ ಎಸ್ ಹಾಗೂ ಎಐಕೆಕೆಎಂಎಸ್ ಪ್ರಶ್ನೆ

On: May 28, 2023 11:56 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-05-2023

ದಾವಣಗೆರೆ(DAVANAGERE) : ದೆಹಲಿಯಲ್ಲಿ ನಡೆಯಬೇಕಿದ್ದ ಮಹಿಳಾ ಮಹಾ ಪಂಚಾಯತ್ ಹೋರಾಟಕ್ಕೆ ಅಡ್ಡಿಪಡಿಸಿ, ವಿವಿಧ ಸಂಘಟನೆಗಳ ನಾಯಕರ ಬಂಧನ ವಿರೋಧಿಸಿ ಎಐಎಂಎಸ್ ಎಸ್ ಹಾಗೂ ಎಐಕೆಕೆಎಂಎಸ್ ಸಂಘಟನೆಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲವಾಗಿ ಹೊಸ ಸಂಸತ್ ಭವನದೆದುರು ನಡೆಸಲು ಆಯೋಜಿಸಿದ್ದ ಮಹಿಳಾ ಮಹಾ ಪಂಚಾಯತ್ (MAHILA MAHAPANCHAYATH) ಕಾರ್ಯಕ್ರಮವನ್ನು ಭಂಗಗೊಳಿಸುವ ಉದ್ದೇಶದೊಂದಿಗೆ ಹಲವು ಸಂಘಟನೆಗಳ ನಾಯಕರ ಬಂಧನ (ARREST) ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.

ದೆಹಲಿಯಲ್ಲಿ ಕೇಂದ್ರೀಯ ಬಿಜೆಪಿ ಸರ್ಕಾರವು ನಿರ್ದೇಶಿಸಿರುವಂತೆ, ದೆಹಲಿ ಎಐಎಂಎಸ್ ರಾಜ್ಯ ಕಾರ್ಯದರ್ಶಿ ಮಿಸ್ ರಿತು ಕೌಶಿಕ್, ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ಹರಿಯಾಣ ರಾಜ್ಯಕಾರ್ಯದರ್ಶಿ ಕಾಮ್ರೇಡ್ ಜೈಕರಣ ಮಂಡೋತಿ,
ಎಸ್ ಯು ಸಿ ಐ (ಸಿ) ಪಕ್ಷದ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರ್ ಸಿಂಗ್ ಹಾಗೂ ಹೋರಾಟನಿರತ ಕುಸ್ತಿಪಟುಗಳನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮ ಅಪ್ರಜಾತಾಂತ್ರಿಕ ಹಾಗೂ ದಮನಕಾರಿ ನೀತಿಗೆ ಸಾಕ್ಷಿ. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಈ ಕ್ರಮವನ್ನು ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಾ ಬಿಜೆಪಿ (BJP) ಆಡಳಿತರೂಢ ಸರ್ಕಾರದ ಹಾಲಿ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಸಾಮಾನ್ಯ ಜನತೆ ಹಾಗೂ ನಿರ್ದಿಷ್ಟವಾಗಿ ಮಹಿಳೆಯರು ಮುಂದೆ ಬಂದು ಬಿಜೆಪಿ ಸರ್ಕಾರದ ಈ ಕ್ರಿಯೆಯನ್ನು ಖಂಡಿಸಿ, ನ್ಯಾಯದ ಪರ ಹೋರಾಡುತ್ತಿರುವ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಬಲವಾಗಿ ಇನ್ನು ಪ್ರಬಲವಾದ ಚಳುವಳಿಗಳನ್ನು ನಡೆಸುತ್ತಿರುವ ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡುಬೇಕು. ಅಪರಾಧವೆಸಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈ ಕೂಡಲೇ ಬಂಧಿಸುವಂತೆ ಎಐಎಂಎಸ್ ಎಸ್ ನ ರಾಜ್ಯ ಅಧ್ಯಕ್ಷರಾದ ಅಪರ್ಣ ಬಿ .ಆರ್. ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎ.ಐ.ಎಂ.ಎಸ್.ಎಸ್ ಜಿಲ್ಲಾ ಕಾರ್ಯದರ್ಶಿ ಭಾರತಿ, ಜಿಲ್ಲಾ ಸಮಿತಿ ಸದಸ್ಯೆ ಮಮತಾ,
ಎ.ಐ.ಕೆ.ಕೆ.ಎಮ್.ಎಸ್ ನ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತ, ಎಐಡಿಎಸ್ಓನ ಕಾವ್ಯ, ಸುಮನ್. ಹಾಗೂ ತಿಪ್ಪೇಸ್ವಾಮಿ , ಮಂಜುನಾಥ್ ಕುಕ್ಕವಾಡ, ಶಿವಾಜಿ ರಾವ್, ಮಂಜುನಾಥ್ ಕೈದಾಳ್, ಶ್ರೀಕಾಂತ್ ಇನ್ನಿತರರು ಪಾಲ್ಗೊಂಡಿದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment