ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ: ಏಪ್ರಿಲ್ 26, ಮೇ .7ಕ್ಕೆ ಮತದಾನ, ಮೇ7ಕ್ಕೆ ದಾವಣಗೆರೆಯಲ್ಲಿ ವೋಟಿಂಗ್, ಜೂ.4ಕ್ಕೆ ಕೌಂಟಿಂಗ್

On: March 16, 2024 4:39 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:16-03-2024

ನವದೆಹಲಿ: ಕರ್ನಾಟಕದ ಒಟ್ಟು 28 ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಉತ್ತರ ಕರ್ನಾಟಕದ ಭಾಗದಲ್ಲಿ ಮತದಾನ ಜರುಗಲಿದೆ. ದಾವಣಗೆರೆಸೇರಿದಂತೆ 14 ಜಿಲ್ಲೆಗಳಲ್ಲಿ ಮೇ.7ಕ್ಕೆ ಎರಡನೇ ಹಂತದ ವೋಟಿಂಗ್ ನಡೆಯಲಿದೆ.

ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ. ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗವು ನಿರ್ಧರಿಸಿದೆ.

ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ 1 ಜಿಲ್ಲೆಗಳಲ್ಲಿ ಮೊದಲ ಹಂತದ ವೋಟಿಂಗ್ ನಡೆಯಲಿದೆ.

ಮೊದಲ ಹಂತ ನಡೆಯುವ ಜಿಲ್ಲೆಗಳು:

  • ಉಡುಪಿ – ಚಿಕ್ಕಮಗಳೂರು
  • ಹಾಸನ
  • ಚಿತ್ರದುರ್ಗ
  • ಚಿಕ್ಕಬಳ್ಳಾಪುರ
  • ದಕ್ಷಿಣ ಕನ್ನಡ
  • ಮೈಸೂರು – ಕೊಡಗು
  • ಚಾಮರಾಜನಗರ
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಕೋಲಾರ
  • ಮೈಸೂರು
  • ಮಂಡ್ಯ
  • ತುಮಕೂರು
  • ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ

ಇನ್ನುಳಿದ ಹದಿನಾಲ್ಕು ಕ್ಷೇತ್ರಗಳಿಗೆ ಮೇ.7ರಂದು ಮತದಾನ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಮತದಾನ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.4ಕ್ಕೆ ಮತ ಎಣಿಕೆ ನಡೆಯಲಿದೆ.

2ನೇ ಹಂತದ ಮತದಾನ:

  • ದಾವಣಗೆರೆ
  • ಕಲ್ಬುರ್ಗಿ
  • ಶಿವಮೊಗ್ಗ
  • ರಾಯಚೂರು
  • ಉತ್ತರ ಕನ್ನಡ
  • ಹುಬ್ಬಳ್ಳಿ – ಧಾರವಾಡ
  • ಹಾವೇರಿ – ಗದಗ
  • ವಿಜಯಪುರ
  • ಕೊಪ್ಪಳ
  • ಬೆಳಗಾವಿ
  • ಬಾಗಲಕೋಟೆ
  • ಚಿಕ್ಕೋಡಿ
  • ಬೆಳಗಾವಿ
  • ಬಳ್ಳಾರಿ

ಈ ಜಿಲ್ಲೆಗಳು ಸೇರಿದಂತೆ ಮೇ.7ಕ್ಕೆ ಮತದಾನ ನಡೆಯಲಿದೆ. ದಾವಣಗೆರೆಯಲ್ಲಿ ಮೇ.7ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment