SUDDIKSHANA KANNADA NEWS/ DAVANAGERE/ DATE:28-05-2023
ಶಿವಮೊಗ್ಗ: ಭದ್ರಾವತಿ (BHADRAVATHI) ಕ್ಷೇತ್ರ ರಾಜ್ಯದಲ್ಲಿ ಗಮನ ಸೆಳೆದಿರುವ ಕ್ಷೇತ್ರ. ಇತಿಹಾಸದಲ್ಲಿ ಒಮ್ಮೆಯೂ ಕಮಲ ಅರಳದಂತೆ ಮಾಡಿರುವ ಕದನ ಕಣ. ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದ ಕ್ಷೇತ್ರದ ಜನರ ಕನಸಿಗೆ ತಣ್ಣೀರು ಎರಚಲಾಗಿದೆ. ಇದು ಬಿ. ಕೆ. ಎಸ್. ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೆರಳುವಂತೆ ಮಾಡಿದೆ. ಮಾತ್ರವಲ್ಲ ಫೇಸ್ ಬುಕ್ ವ್ಯಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮುಖ್ಯಮಂತ್ರಿ (CHIEF MINISTER) ಸಿದ್ದರಾಮಯ್ಯ, ಕೆಪಿಸಿಸಿ (KPCC) ಅಧ್ಯಕ್ಷರೂ ಆದ ಡಿಸಿಎಂ (DCM) ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಯಮಾಡಿ ಭದ್ರಾವತಿ ತಾಲೂಕಿನ ಕಡೆ ಬರಬೇಡಿ, ಗೋ ಬ್ಯಾಕ್. ವಚನ ಭ್ರಷ್ಟರು ನೀವು, ಭದ್ರಾವತಿ ಕ್ಷೇತ್ರದ ಜನರ ಶಾಪ ನಿಮಗೆ ತಟ್ಟುತ್ತದೆ ಎಂದೆಲ್ಲಾ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ.
ಬಿ. ಕೆ. ಸಂಗಮೇಶ್ ಅವರು ಭದ್ರಾವತಿ ಕ್ಷೇತ್ರದಲ್ಲಿ ಗೆದ್ದು ಬಂದಿದ್ದರೂ ಮಂತ್ರಿ ಸ್ಥಾನ ನೀಡಿಲ್ಲ. ಈ ಬಾರಿ ಸಿಕ್ಕೇ ಸಿಗುತ್ತೆ, ಹಿರಿತನ, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಲು ಬಿ. ಕೆ. ಸಂಗಮೇಶ್ವರ್ ಅವರ ಕೊಡುಗೆ ಅಪಾರ ಇದೆ. ಮಾತ್ರವಲ್ಲ, ಕಳೆದ ಬಾರಿ ಗೆದ್ದಿದ್ದರೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಗೆದ್ದಾಗಲೂ ಸಚಿವ ಸ್ಥಾನ ಕೊಟ್ಟಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಯತ್ನಿಸಿದಾಗಲೂ ಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಹೋದವರಲ್ಲ, ಇಂತ ಪ್ರಾಮಾಣಿಕ, ನಿಷ್ಠ ರಾಜಕಾರಣಿಗೆ ಈ ಬಾರಿಯ ಸಚಿವ ಸಂಪುಟ(CABINET)ಕ್ಕೆ ಸೇರ್ಪಡೆ ಮಾಡಿಕೊಳ್ಳದೇ ಅನ್ಯಾಯ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇದರ ಪ್ರತಿಫಲ ಉಣ್ಣುವುದು ಖಚಿತ ಎಂದೆಲ್ಲಾ ಸಂದೇಶ ಹರಿಬಿಡುತ್ತಿದ್ದಾರೆ.
ಯಾವ ರೀತಿ ಆಕ್ರೋಶ… ಇಲ್ಲಿದೆ ನೋಡಿ ಕೆಲ ಸ್ಯಾಂಪಲ್ಸ್:
1. ನಮ್ ಜಿಲ್ಲೆಯಲ್ಲಿ ಬಾಸ್ ಮುಂದೆ ಯಾರು ಹಿರಿಯರಿಲ್ಲ. ನಿಯತ್ತಿನ ಮನುಷ್ಯ. ಒಂದೇ ಪಕ್ಷದಲ್ಲಿದ್ದು ಪಕ್ಷಕೋಸ್ಕರ ದುಡಿದು ಇರೋರಿಗೆ ಮೋಸ ಮಾಡಿ. ನಿನ್ನೆ ಜೆಡಿಎಸ್ ಇಂದ ಬಂದೋರೊಗೆ ಮಂತ್ರಿ ಕೊಟ್ಟಿದ್ದೀರಿ. ಮುಂದೆ ರಾಜ್ಯ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭದ್ರಾವತಿಯಲ್ಲಿ ಅತಿ ಹೆಚ್ಚು ಅಂತರ ಕೊಡುತ್ತೇವೆ.. ಇವರ ಮುಂದೆ ಯಾವ ರಾಜ್ಯ ನಾಯಕರು ಇಲ್ಲ. ನಮಗೆ ಇವರೇ ಮುಖ್ಯಮಂತ್ರಿ… ಜೈ bks
2. ಮಾನ್ಯ DK Shivakumar ಅವರಿಗೆ ಧಿಕ್ಕಾರ, ಮಾನ್ಯ Siddaramaiah ಅವರಿಗೆ ಧಿಕ್ಕಾರ.. ಮೋಸ ಮಾಡಿದ Congress Karnataka ಅವರಿಗೆ ಧಿಕ್ಕಾರ.
3. ಪಕ್ಷದ ನಿಷ್ಠಾವಂತ ಹಿರಿಯ ಜಿಲ್ಲೆಯ ಏಕೈಕ ನಾಯಕ B K Sangameshwar ಮಾತ್ರ… JAI BKS BOSS
4. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹಾಗೂ ರಂದೀಪ್ ಸುರ್ಜಿವಾಲ ಅವರ ಫೋಟೋಗೆ ಬೆಂಕಿ ಹಾಕೋದ ಮುಂದಿನ ಹೋರಾಟದಲ್ಲಿ…?
.
5. ಭದ್ರಾವತಿ (BHADRAVATHI) ಕ್ಷೇತ್ರದ ಹಿರಿಯ ಮುಖಂಡರುಗಳು ಇದರ ಬಗ್ಗೆ ಮಾಹಿತಿ ನೀಡಿ. ಹೋರಾಟವನ್ನು ಯಾವ ರೀತಿ ಮಾಡಬೇಕೆಂದು ಅಭಿಮಾನಿಗಳಿಗೆ ಬೇಗನೆ ಸ್ಪಷ್ಟೀಕರಿಸಬೇಕಾಗಿ ಕೇಳಿಕೊಳ್ಳುತ್ತೇನೆ.
6. ನಮ್ಮ ಶಾಸಕರಿಗೆ ಏನಾದರೂ ಸಚಿವರಾಗಿದ್ದರೆ ಇಷ್ಟು ಇಷ್ಟೊತ್ತಿಗೆ ಎಲ್ಲ ದೊಡ್ಡ ಮುಖಂಡರು ಬೆಂಗಳೂರಿಗೆ ಹೋಗುತ್ತಿದ್ದರು. ಆ ದೊಡ್ಡ ನಾಯಕರುಗಳು ಈಗ ಕಾಣುತ್ತಿಲ್ಲವಲ್ಲ. ದಯವಿಟ್ಟು ಹೋರಾಟ ಯಾವ ರೀತಿ ಮಾಡಬೇಕು? ಶಾಸಕರಿಗೆ ಸಚಿವ ಸ್ಥಾನ ಸಿಕ್ಕ ನಂತರ ಎಲ್ಲರೂ ಬರುತ್ತಾರೆ. ಆದರೆ ಈಗ ನಾವ್ಯಾರು ಅವರ ಬೆನ್ನಿಗೆ ನಿಲ್ಲುವಂತ ಕೆಲಸ ಮಾಡುತ್ತಿಲ್ಲ.
7. ಕಳೆದಬಾರಿ ಸಮ್ಮಿಶ್ರ ಸರ್ಕಾರ ಆದಾಗ ಶಾಸಕರಿಗೆ ಸಚಿವಗಿರಿ ಕೊಡಬೇಕೆಂದು ಬೆಂಗಳೂರಿಗೆ ಹೋಗಿ ಪ್ರತಿಭಟನೆ ಮಾಡಿಬಂದ್ವಿ ಆದರೆ ಈ ಬಾರಿ ಯಾಕೆ ಮಾಡಿಲ್ಲ ಎಂದು ಒಂದು ಪ್ರಶ್ನೆ
8. ಯಾರೇ ಏನೇ ಹೇಳಿದರೂ ಅವರು ಹಿಂದೆ ನಿಂತು ನೋಡುಹೋಗುವಂತ ಕಾರ್ಯಕರ್ತರು ನಿಜವಾದ ಕಾರ್ಯಕರ್ತರಲ್ಲ ನಿಜವಾದ ಕಾರ್ಯಕರ್ತರು ಮುಂದೆ ನಿತ್ತಿ ಹೋರಾಡುತ್ತಾರೆ. ಅವರೇ ನಿಜವಾದ ಕಾರ್ಯಕರ್ತರು.
9. ನಗರ ಹಾಗೂ ಗ್ರಾಮಾಂತರದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಸಭೆಯನ್ನು ಕರೆದು ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡಬೇಕು.
.
10. ಭದ್ರಾವತಿ ಜನತೆಗೆ ಸಿದ್ರಾಮಣ್ಣನವರು ಹಾಗೂ ಡಿ. ಕೆ. ಶಿವಕುಮಾರ್ ಅಣ್ಣನವರ ಮೇಲೆ ತುಂಬಾ ಅಭಿಮಾನ ಇತ್ತು 2023 ರಲ್ಲಿ ಕಳೆದುಕೊಂಡ್ರು ಬಿಟ್ರು. ಇನ್ನು ಭದ್ರಾವತಿ ಜನತೆ ಯಾವುದೇ ಕಾರಣಕ್ಕೂ ಮರೆಯೋದಿಲ್ಲ. ನೀವು ಮಾಡಿರೋ ಮೋಸವನ್ನು. ಇದಕ್ಕೆ ತಕ್ಕ ಉತ್ತರವೇನೆಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷಕ್ಕೆ ಮತವನ್ನು ಹಾಕದೆ ಸುಮಾರು 50 ಸಾವಿರ ಶಾಸಕರ ಅಭಿಮಾನಿಗಳು ಹಾಗೂ ಭದ್ರಾವತಿ ಯುವ ಜನತೆ ಸೇರಿ ಯಾವುದೇ ಪಕ್ಷಕ್ಕೆ ಮತ ಹಾಕದೆ ನೋಟಾ ಒತ್ತುವುದರ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ.
ಅವಾಗ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ಇಡೀ ಭಾರತ ದೇಶದ ಪ್ರತಿಯೊಂದು ರಾಜ್ಯ ಜಿಲ್ಲೆಗಳಿಗೆ ನಮ್ಮ ಭದ್ರಾವತಿಯ ಶಕ್ತಿ ಎದ್ದು ಕಾಣುತ್ತದೆ. ಆಗ ನಮ್ಮ ಶಾಸಕರ ಬೆಲೆ ಏನು ಅಂತ ಎಲ್ಲರಿಗೂ ತಿಳಿಯುತ್ತದೆ.
ಇದು ಕೆಲ ಸ್ಯಾಂಪಲ್ ಅಷ್ಟೇ. ಸೊರಬ ಶಾಸಕ ಮಧು ಬಂಗಾರಪ್ಪರ ವಿರುದ್ಧವೂ ಕೆಂಡಮಂಡಲರಾಗಿರುವ ಬಿ. ಕೆ. ಸಂಗಮೇಶ್ವರ್ ಅಭಿಮಾನಿಗಳು ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಪಕ್ಷ ನಿಷ್ಠೆ ಹೊಂದಿದ್ದರೂ ಬಿ. ಕೆ. ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸುವುದನ್ನು ಮುಂದುವರಿಸಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಮಧು ಬಂಗಾರಪ್ಪರಿಗೆ ಮಣೆ ಹಾಕಲಾಗಿದೆ. ಇದೇ ಧೋರಣೆ ಕಾಂಗ್ರೆಸ್ ಹೈಕಮಾಂಡ್ ಮುಂದುವರಿಸಿದರೆ ನಾವೆಲ್ಲಾ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕುತ್ತಿದ್ದಾರೆ.
ಒಟ್ಟಾರೆ ಭದ್ರಾವತಿಯ ರಾಜಕಾರಣ ಬೇರೆ ತಾಲೂಕುಗಳಂತಲ್ಲ. ಅಪ್ಪಾಜಿ ಗೌಡರ ವಿರುದ್ಧ ಜಯಭೇರಿ ಬಾರಿಸಿದ್ದ ಸಂಗಮೇಶ್ವರ್ ಅವರು ಗೆಲುವು ಸೋಲು ಎರಡನ್ನೂ ಕಂಡವರು. ಆದ್ರೆ, ಪಕ್ಷಕ್ಕಾಗಿ ದುಡಿದಿರುವ ಪರಿ ಮಾತ್ರ ಅನನ್ಯ. ಇದು ಮುಂಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಮುಟ್ಟುತ್ತದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನೆಡೆ ಉಂಟಾದರೆ ಅಚ್ಚರಿ ಪಡಬೇಕಿಲ್ಲ.