SUDDIKSHANA KANNADA NEWS/ DAVANAGERE/ DATE:11-03-2024
ದಾವಣಗೆರೆ: ರಾಜ್ಯ ಸರ್ಕಾರ ಪತನಗೊಳಿಸಲು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ – ಜೆಡಿಎಸ್ 55 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪವನ್ನು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಳ್ಳಿ ಹಾಕಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಅವರು ಸಂಪರ್ಕಸಿದ್ದರು ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪದ ಬಗ್ಗೆ ಅವರನ್ನೇ ಕೇಳಿ ಆಪರೇಷನ್ ಕಮಲ ಸುಳ್ಳು, ನನ್ನನ್ನು ಯಾರೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನಗೆ ದುಡ್ಡು ಕೊಟ್ಟಿದ್ದರೆ ಎಣಿಸಿಕೊಂಡು ಇಟ್ಟುಕೊಳ್ಳುತ್ತಿದ್ದೆ. ಬಿಜೆಪಿಯವರು, ಜೆಡಿಎಸ್ ನವರು ಹಾಗೂ ಕಾಂಗ್ರೆಸ್ ನವರು ಸೇರಿದಂತೆ ಯಾರೂ ಬಂದಿಲ್ಲ. ಹಣದ ಆಮೀಷ ಯಾರೂ ಒಡ್ಡಿಲ್ಲ. ಸರ್ಕಾರ ಪತನಗೊಳಿಸಲು ನನ್ನನ್ನು ಸಂಪರ್ಕಿಸಿದ್ದರು ಎಂಬ ಮಾತು ಹೇಳಿರುವ ಡಿ. ಕೆ. ಶಿವಕುಮಾರ್ ಅವರನ್ನೇ ಕೇಳಿ. ನನ್ನನ್ನು ಏನು ಕೇಳುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯಸಭೆ ಚುನಾವಣೆ ವೇಳೆ ಸಹಾಯ ಮಾಡುವಂತೆ ಕೇಳಿದರು. ದುಡ್ಡು ಕೊಡುತ್ತೇವೆಂದು ಯಾರೂ ಹೇಳಿಲ್ಲ. ನಾವು ಮತ ಕೇಳಬೇಡಿ. ದುಡ್ಡು ಬೇಕಾದರೆ ನಾವೇ ಸಹಾಯ ಮಾಡುತ್ತೇವೆ ಎಂದು ಹೇಳಿದ್ದೆ. ಆದ್ರೆ, ನಮ್ಮ ಮತಗಳನ್ನು ಕೇಳಬೇಡಿ ಎಂದು ಹೇಳಿದ್ದು ನಿಜ. ಆದ್ರೆ, ಹಣದ ಆಮಿಷ ಯಾರೂ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.