ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವೃದ್ಧರು, ಶ್ರೀಮಂತರೇ ಟಾರ್ಗೆಟ್: ಸೆಕ್ಸ್ ಚಾಟಿಂಗ್ ನಡೆಸಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಹಣ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸ್ ಖೆಡ್ಡಾಕ್ಕೆ..!

On: March 10, 2024 11:46 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-03-2024

ಭರತ್‌ಪುರ: ವಂಚಕರು ಹುಡುಗಿಯರ ನಕಲಿ ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ತೆರೆದು ಸೆಕ್ಸ್ ವಿಡಿಯೋ ಚಾಟ್ ಮಾಡಿ, ಆ ಬಳಿಕ ವಿಡಿಯೋ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ ಸಿಕ್ಕಿದೆ. ಹೆಚ್ಚಾಗಿ ವೃದ್ಧರು ಮತ್ತು ಶ್ರೀಮಂತರೇ ಈ ಗ್ಯಾಂಗ್ ನ ಟಾರ್ಗೆಟ್. 

ರಾಜಸ್ಥಾನದ ದೀಗ್ ಜಿಲ್ಲೆಯ ಮೇವಾತ್ ಪ್ರದೇಶದಲ್ಲಿ ಸರಗಳ್ಳತನ ದಂಧೆಯನ್ನು ಭೇದಿಸಿದ್ದು, ಈ ಸಂಬಂಧ ಕನಿಷ್ಠ 15 ಜನರನ್ನು ಬಂಧಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಹಲವಾರು ಪೊಲೀಸ್ ತಂಡಗಳು ಮೇವಾತ್ ಪ್ರದೇಶದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದಾರೆ ಎಂದು ಭರತ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್
ಆಫ್ ಪೊಲೀಸ್ (ಐಜಿಪಿ) ರಾಹುಲ್ ಪ್ರಕಾಶ್ ಹೇಳಿದ್ದಾರೆ.

ಗೋಪಾಲಗಢ ಪೊಲೀಸ್ ಠಾಣೆ ವ್ಯಾಪ್ತಿಯ ಪತ್ರಾಲಿ, ರಾಯವ್ಕಾ ಮತ್ತು ಹೈವಟ್ಕ ಎಂಬ ಮೂರು ಗ್ರಾಮಗಳಲ್ಲಿ ದಾಳಿ ನಡೆಸಲಾಗಿದ್ದು, ಅವರ ಬಳಿಯಿದ್ದ 61 ಎಟಿಎಂ ಕಾರ್ಡ್‌ಗಳು, ಕಾರ್ಡ್ ಸ್ವೈಪಿಂಗ್ ಯಂತ್ರಗಳು, 33 ಮೊಬೈಲ್‌ಗಳು, ಆರು ಕಂಪ್ಯೂಟರ್‌ಗಳು ಮತ್ತು ಹಲವಾರು ಲ್ಯಾಪ್‌ಟಾಪ್‌ಗಳನ್ನು ಪೊಲೀಸ್ ತಂಡಗಳು ವಶಪಡಿಸಿಕೊಂಡಿವೆ ಎಂದು ಐಜಿಪಿ ತಿಳಿಸಿದ್ದಾರೆ.

ವಂಚಕರು ಹುಡುಗಿಯರ ನಕಲಿ ಹೆಸರುಗಳನ್ನು ಬಳಸಿಕೊಂಡು ನಕಲಿ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ತಯಾರಿಸುತ್ತಿದ್ದರು. ಹೆಚ್ಚಾಗಿ ವೃದ್ಧರು ಮತ್ತು ಶ್ರೀಮಂತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ ಆನ್‌ಲೈನ್ ಸೆಕ್ಸ್ ಚಾಟಿಂಗ್‌ಗಾಗಿ ವಿವಿಧ ಮೊಬೈಲ್ ಫೋನ್‌ಗಳನ್ನು ಬಳಸಿ ನಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ, ಅವರ ಸೆಕ್ಸ್ ಚಾಟ್‌ನ ವೀಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

ಗ್ಯಾಂಗ್‌ನ ಇತರ ಸದಸ್ಯರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಐಜಿಪಿ ಪ್ರಕಾಶ್ ಹೇಳಿದ್ದಾರೆ. ಆರೋಪಿಗಳು 14 ವಿವಿಧ ರಾಜ್ಯಗಳಲ್ಲಿ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಅನಕ್ಷರತೆ, ದುರ್ಬಲ ಆರ್ಥಿಕ ಪರಿಸ್ಥಿತಿಗಳು ಮತ್ತು ಉದ್ಯೋಗದ ಕೊರತೆಯಿಂದಾಗಿ ಮೇವಾತ್ ಪ್ರದೇಶವು ಸೈಬರ್ ಅಪರಾಧಗಳ ಕೇಂದ್ರವಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment