SUDDIKSHANA KANNADA NEWS/ DAVANAGERE/ DATE:07-03-2024
ದಾವಣಗೆರೆ: ಮದ್ಯ ಸೇವನೆ ಮಾಡಲು ಹಣ ಕೊಡದಿದ್ದಕ್ಕೆ ಅಣ್ಣನನ್ನು ತಮ್ಮ ಕೊಲೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ವಿ. ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೋಹನ್ (25) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಆತನ ಸಹೋದರ ಮನೋಜ್ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೋಹನ್ ಹಾಗೂ ಮನೋಜ್ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮದ್ಯಪಾನಕ್ಕೆ ಹಣ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ಆಗುತಿತ್ತು. ಕುಡಿಯಲು ಹಣ ಕೇಳಿದಾಗ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಮನೋಜನು ಮನೆಯ ಹೊರಗಡೆ ಬಂದು ಕಲ್ಲು ಚಪ್ಪಡಿಯನ್ನು ಮೋಹನ್ ತಲೆ ಮೇಲೆ ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋಹನ್ ಸ್ಥಳದಲ್ಲಿಯೇ ಕೊನೆಯುಸಿರೆಳೆದನು ಎಂದು ಪೊಲೀಸರು ತಿಳಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.