SUDDIKSHANA KANNADA NEWS/ DAVANAGERE/ DATE:02-03-2024
ದಾವಣಗೆರೆ: ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 74,000 ರೂಪಾಯಿ ಮೌಲ್ಯದ 13.45 ಗ್ರಾಂ ತೂಕದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು…?
ಕಳೆದ ಫೆಬ್ರವರಿ 12ರಂದು ಸರಸ್ವತಿ ನಗರಜ ಚಿದಾನಂದ ಗೌಡ ಎಂಬುವವರ ಸೋದರ ಸಂಬಂಧಿಯ ಮದುವೆ ದಾವಣಗೆರೆ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಇತ್ತು. ಫೆ. 11ರಂದು ಕುಂಟುಂಬ ಸಮೇತ ಮುದುವೆಗೆ ಬಾಪೂಜಿ ಬ್ಯಾಂಕ್ ಸಮಯದಾಯ ಭವನಕ್ಕೆ ಹೋಗಿದ್ರು. ಉಳಿದುಕೊಳ್ಳಲು ರೂಂ ನಂ. 203 ಕೊಡಲಾಗಿತ್ತು. ಅದರಂತೆ ಅವರ ಬ್ಯಾಗ್‌ಗಳನ್ನು ರೂಮಿನಲ್ಲಿಟ್ಟು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆದ್ರೆ. ಫೆಬ್ರವರಿ 12ರ ಮಧ್ಯಾಹ್ನ 3ಗಂಟೆಗೆ ಮದುವೆ ಕಾರ್ಯಕ್ರಮವೆಲ್ಲವೂ ಮುಗಿದ ನಂತರ ಚಿದಾನಂದಗೌಡರು ಹೊರಡಲು ರೂಮಿಗೆ ಬಂದು ಸಾಮಾನುಗಳನ್ನು ಜೋಡಿಸುತ್ತಿರುವಾಗ ಬ್ಯಾಗಿನಲ್ಲಿಟ್ಟಿದ್ದ 10 ಗ್ರಾಂ ತೂಕದ 55 ಸಾವಿರ ರೂಪಾಯಿ ಮೌಲ್ಯದ 2 ಜೊತೆ ಬಂಗಾರದ ಕಿವಿ ಓಲೆ, 15 ಗ್ರಾಂ ತೂಕದ 75 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಸರ ಕಳ್ಳತನವಾಗಿತ್ತು.
ಚೌಟ್ರಿಯಲ್ಲಿನ ಸಿ.ಸಿ.ಟಿವಿ ಪರಿಶೀಲಿಸಲಾಗಿ ಯಾರೋ ಒಬ್ಬ ವ್ಯಕ್ತಿಯೊಬ್ಬ ಮಧ್ಯಾಹ್ನ 1ಗಂಟೆ ಸಮಯದಲ್ಲಿ ನಕಲಿ ಕೀ ಬಳಸಿ ಚಿದಾನಂದಗೌಡರ ತಂಗಿದ್ದ ರೂಂ ಅನ್ನು ಓಪನ್ ಮಾಡಿ ಒಳಗೆ ಹೋಗಿ ಬಂದಿರುವುದು ಕಂಡು ಬದಿತ್ತು. ಈ ವ್ಯಕ್ತಿಯು ಸಂಬಂಧಿಸಿದ ಬಂಗಾರದ ಆಭರಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಪ್ರಕರಣದಲ್ಲಿನ ಆರೋಪಿತ ದಾವಣಗೆರೆಯ ಶಾಂತಿನಗರದ ಮಸಾಲೆ ವ್ಯಾಪಾರಿ ಕಿರಣ್ ನಾಯ್ಕ ಆರ್. (26) ಅವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಆರೋಪಿತನಿಂದ ಈ ಪ್ರಕರಣ ಹಾಗೂ ವಿದ್ಯಾನಗರ ಠಾಣೆಯ ಮತ್ತೊಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಮಾಡಿದ್ದ ಒಟ್ಟು 74 ಸಾವಿರ ರೂಪಾಯಿ ಮೌಲ್ಯದ 13.45 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣ ಪತ್ತೆಯಾಗಿದೆ.
ಕಿರಣ್ ನಾಯ್ಕನ ವಿರುದ್ಧ ಈ ಹಿಂದೆ ವಿದ್ಯಾನಗರ ಠಾಣೆ ಸೇರಿದಂತೆ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ ಹಾಗೂ ಇತರೆ ಕಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.