ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಂಪನ್ನಗೊಂಡ ತರಳಬಾಳು ಹುಣ್ಣಿಮೆ: ಹುತಾತ್ಮ ವೀರಯೋಧ ಕುಟುಂಬಗಳಿಗೆ 1 ಲಕ್ಷ ರೂ.: ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು

On: February 25, 2024 2:26 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:25-02-2024

ಸಿರಿಗೆರೆ: ಹುತಾತ್ಮ ವೀರಯೋಧ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವಿನ ಸಾಂತ್ವಾನ. ಭಾವಪೂರ್ಣ ಕಾರ್ಯಕ್ರಮದಲ್ಲಿ ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು. ಜೈ ಜವಾನ್ ಜೈ ಕಿಸಾನ್ ಘೋಷಣೆಯಂತೆ ರೈತರಿಗೆ ಮತ್ತು ಯೋಧರಿಗೆ ನೆರವಾಗುತ್ತಿರುವ ತರಳಬಾಳು ಬೃಹನ್ಮಠ. ಅರ್ಥಪೂರ್ಣವಾಗಿ ಮುಕ್ತಾಯ ಕಂಡ ತರಳಬಾಳು ಹುಣ್ಣಿಮೆ ಮಹೋತ್ಸವ.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಅರ್ಥಪೂರ್ಣವಾಗಿ ಮುಕ್ತಾಯ ಕಂಡಿತು. ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಎಲ್ಲರೂ ಸಿರಿಗೆರೆ ಮಠದ ಜನಪರ, ಸಮಾಜಮುಖಿ, ನಾಯಕತ್ವ ಶ್ಲಾಘಿಸಿದರು.

ಬದುಕಿಗೆ ಹತ್ತಿರವಾದ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಜೀವಂತವಾಗಿರುತ್ತವೆ. ಅಂತೆಯೇ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ದರ ವಿಚಾರಗಳೂ ಸಹ ಇಂದಿಗೂ
ಜೀವಂತವಾಗಿವೆ ಎಂದು ಪ್ರತಿಪಾದಿಸಿದರು.

ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ಭಾಗವಹಿಸಿ ಮಾತನಾಡಿದ ಅವರು, 800 ವರ್ಷಗಳ ನಂತರವೂ ಮರುಸಿದ್ದರ ಚಿಂತನೆಗಳು ಬದುಕಿವೆ ಎಂದರೆ ಅವುಗಳಲ್ಲಿ ಜೀವನದ
ವಿಚಾರಧಾರೆ ಅಡಗಿದೆ ಎಂದೇ ಅರ್ಥ ಎಂದರು.

ಸಾಮಾಜಿಕ ನ್ಯಾಯದ ಬಗ್ಗೆ ರಾಜಕಾರಣಿಗಳಾದ ನಾವು ಈಗ ಮಾತನಾಡುತ್ತಿದ್ದೇವೆ. ಆದರೆ ತರಳಬಾಳು ಪರಂಪರೆಯ ಹಿರಿಯ ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸ್ವಾತಂತ್ರ್ಯ ಪೂರ್ವದಲ್ಲಿಯೇ
ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದರು. ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧತ ತತ್ವ ಸಿದ್ಧಾಂತಗಳನ್ನು ತಲೆ ಮೇಲೆ
ಇರಿಸಿಕೊಂಡು ಬದುಕಿದರು. ಮುಂದುವರಿದು ಈಗಿನಗುರುಗಳ ರೈತರ ಶ್ರೆ ಯೋಭಿವೃದ್ಧಿಯ ಮೂಲಕ ಅಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ನಾಡಿನಲ್ಲಿ ಭೀಕರ ಬರಗಾಲ ಇರುವ ಸಂದರ್ಭದಲ್ಲಿ ಮಠದ ಸಂಭ್ರಮದ ಆಚರಣೆಯನ್ನು ಸರಳಗೊಳಿಸಿ ಆಚರಿಸುತ್ತಿರುವುದು ತರಳಬಾಳು. ಶ್ರೀಗಳ ಸಮಾಜಮುಖಿ ಚಿಂತನೆಯಾಗಿದೆ ಎಂದರು.

ರಾಜ್ಯದಲ್ಲಿಮಠಗಳಿಂದ ಬಹುದೊಡ್ಡ ಸಾಮಾಜಿಕ ಕ್ರಾಂತಿ ಆಗಿದೆ. ಶಿಕ್ಷಣ ಮತ್ತು ದಾಸೋಹ ಕ್ಟೇತ್ರ ದಲ್ಲಿ ನಮ್ಮರಾಜ್ಯದ ಮಠಗಳು ಮಾಡಿರುವ ಸೇವೆ ದೇಶದ ಮತ್ತಾವ ರಾಜ್ಯದಲ್ಲಿಯೂ ಆಗಿಲ್ಲ ಎಂದರು.

ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಆಶೀರ್ವಚನ ದಯಪಾಲಿಸಿ, ಮಠದ ಶಿಷ್ಯರು ಬಾಹ್ಯ ಶ್ರೀಮಂತಿಕೆಯ ಜೊತೆ ಹೃದಯ ಮತ್ತು ನೈತಿಕತೆಯ ಶ್ರೀಮಂತಿಕೆ ಹೆಚ್ಚು ಹೊಂದಿದ್ದಾರೆ. ಹಠಮಾರಿಗಳಾದರೂ ನಮ್ಮ ಭಕ್ತರು, ಶ್ರೀಗಳು, ಮಠದ ಆದೇಶ ಪಾಲಿಸುತ್ತಾರೆ. ಖುಷಿಯ ವಿಚಾರ ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment